ಮಹಾಭಾರತದಲ್ಲಿ ಪರಿಶುದ್ಧ ರಾಜಕಾರಣ ನೋಡಲುಸಾಧ್ಯ : ಸ್ಮಿತ್
ಶಿವಮೊಗ್ಗ: ಮಹಾಭಾರತದಲ್ಲಿ ಪರಿಶುದ್ಧ ರಾಜಕಾರಣವನ್ನು ನೋಡಬಹುದಾಗಿದೆ ಎಂದು ಧಾರ್ಮಿಕ ಅಧ್ಯಯನ ಮತ್ತು ಸಂಶೋಧನೆ ವಿಭಾಗ, ಲೋವಾ ವಿಶ್ವವಿದ್ಯಾಲಯ, ಯುಎಸ್ಎ ಇದರ ಪ್ರೊ. ಫೆಡ್ರಿಕ್ ಎಂ. ಸ್ಮಿತ್ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜ್ ಸಭಾಂಗಣದಲ್ಲಿ ಸ್ನಾತಕೋತ್ತರ ಸಂಸ್ಕೃತ ವಿಭಾಗ, ಕುವೆಂಪು ವಿವಿ ಆಶ್ರಯದಲ್ಲಿ ಮಹಾಭಾರತ ಒಂದು ವಿಶ್ಲೇಷಣಾತ್ಮಕ ಅಧ್ಯಯನ ವಿಷಯದ ಬಗ್ಗೆ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಮತ್ತು ವಿಚಾರಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಭ್ರಾತೃತ್ವದ ಕುರಿತು ವಿಸ್ತಾರವಾಗಿ ಹೇಳಿದ ಕಾವ್ಯವೆಂದರೆ ಅದು ಮಹಾ ಭಾರತ, ಪರಿಶುದ್ಧವಾದ ರಾಜಕೀಯ ವನ್ನು ನಾವು ನೋಡುವುದಾದರೇ ಅದು ಮಹಾಭಾರತದಲ್ಲಿ ಮಾತ್ರ ಎಂದು ಇಂದಿನ ರಾಜಕೀಯವನ್ನು ಚಿತ್ರಣವನ್ನು ಬಿಡಿಸಿ ಹೇಳಿದರು.
ಸಾಮಾಜಿಕ ಜೀವನದಲ್ಲಿ ನೈತಿಕಹೊಣೆಯ ಬಗ್ಗೆ ಸವಿಸ್ತಾರವಾಗಿ ಮಹಾಭಾರತದಲ್ಲಿ ಉಖವಾಗಿದೆ. ಮಹಾಭಾರತ ಇದು ಕಲ್ಪನೆಯಲ್ಲ ನೈಜ ಚಿತ್ರಣ, ಮಹಾಭಾರತದಲ್ಲಿ ಉಖವಾಗಿರುವ ಪಟ್ಟಣಗಳು, ನಗರಗಳು, ಐತಿಹಾಸಿಕ ಸ್ಥಳಗಳು ಇಂದಿಗೂ ಅಸ್ತಿತ್ವದಲ್ಲಿದೆ ಎಂದರು.
ಕಿಮ್ಸ್ ಜೆ ಎನ್ನುವರು ಬೈಬಲ್ ಶೈಲಿಯಲ್ಲಿ ಮಹಾಭಾರತವನ್ನು ಮೊಟ್ಟ ಮೊದಲ ಬಾರಿಗೆ ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿzರೆ. ಮಹಾ ಭಾರತದ ಹೆಮ್ಮೆ ಎಂದರೆ ಇಡೀ ವಿಶ್ವದ ಸುಮಾರು ೫೦೦ ಭಾಷೆ ಗಳಿಗೂ ಹೆಚ್ಚು ಅನುವಾದಗೊಂಡಿದೆ. ಮಹಾಭಾರತದ ಕಡೆಯ ಶಾಂತಿ ಪರ್ವದಲ್ಲಿ ಮೋಕ್ಷದ ಬಗ್ಗೆ ಅತ್ಯಂತ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.
ಮನುಷ್ಯನ ಅಂತಿಮ ಹಂತವೇ ಮೋಕ್ಷ, ಈ ಮೋಕ್ಷವನ್ನು ಹೇಗೆ ಪಡೆಯಬೇಕು, ನಮ್ಮ ಜೀವನದ ಆರಂಭದಿಂದ ಅಂತ್ಯದವರೆಗೆ ಹೇಗೆ ನಡೆದುಕೊಳ್ಳಬೇಕು, ಯಾವ ಕರ್ಮ ದಿಂದ ಮೋಕ್ಷದೆಡೆಗೆ ಹೋಗಲು ಸಾದ್ಯ ಎಂದು ಮಹಾಭಾರತ ಸ್ಪಷ್ಟವಾಗಿ ತಿಳಿಸುತ್ತದೆ ಎಂದರು.
ಪರೀಕ್ಷಾಂಗ ಕುಲಸಚಿವ ಗೋಪಿನಾಥ್ ಮಾತನಾಡಿ, ಮಹಾಭಾರತವು ವಿಶ್ವದ ಅತಿ ದೊಡ್ಡ ಗ್ರಂಥ ಇದರಲ್ಲಿ ಲಕ್ಷಕ್ಕೂ ಹೆಚ್ಚು ಶ್ಲೋಕಗಳಿವೆ. ಧರ್ಮ ಕರ್ಮದ ದಾರಿಗಳಿವೆ ಎಂದರು.
ವಿಚಾರ ಸಂಕಿರಣದಲ್ಲಿ ಬೇರೆ ಬೇರೆ ರಾಜ್ಯದಿಂದ ಸುಮಾರು ೧೩೦ ಕ್ಕೂ ಹೆಚ್ಚು ಶೋಧ ಪ್ರಬಂಧವನ್ನು ವಿದ್ಯಾರ್ಥಿಗಳು ಮಂಡಿಸಿದರು.
ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ, ವೇದ ಸಂಸ್ಕೃತ ಅಕಾಡೆಮಿಯ ನಿರ್ದೇಶಕ ಡಾ. ಗೋಪಾಲಕೃಷ್ಣ ಹೆಗಡೆ ಇದ್ದರು.
ಭಾರತೀ ಶರ್ಮ ಮತ್ತು ವೃಂದದವರು ಪ್ರಾರ್ಥಿಸಿದರು. ಡಾ. ಶೃತಿಕೀರ್ತಿ ಸ್ವಾಗತಿಸಿದರು.ಡಾ. ಬಂಗಾರಮ್ಮ ವಂದಿಸಿದರು. ಡಾ. ಶೋಭ ಭಟ್ ನಿರೂಪಿಸಿದರು.