ಸಮಾಜದ ಅಭಿವೃದ್ಧಿಗೆ ಸದೃಢ ಸಂಘಟನೆ ಅಗತ್ಯ…
ಶಿಕಾರಿಪುರ : ಸಮಾಜದ ಅಭಿವೃದ್ದಿಗೆ ಸಂಘಟನೆ ಅತಿ ಮುಖ್ಯವಾಗಿದ್ದು, ತಾಲೂಕು ಈಡಿಗ ಸಮಾಜ ಅಲ್ಪಸಂಖ್ಯಾತ ಎಂದು ಇದುವರೆಗೂ ನಿರ್ಲಕ್ಷಕ್ಕೊ ಗಾಗಿದ್ದು ಸದೃಢ ಸಂಘಟನೆ ಮೂಲಕ ಮಾತ್ರ ಸೌಲಭ್ಯ ಪಡೆದು ಕೊಳ್ಳಲು ಸಾಧ್ಯ ಎಂದು ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಪ್ರಕಾಶ್ ಮುಡುಬಸಿzಪುರ ತಿಳಿಸಿದರು.
ಇಲ್ಲಿನ ದಿ.ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣ ದಲ್ಲಿ ನಡೆದ ಶ್ರೀ ನಾರಾಯಣ ಗುರು ಈಡಿಗ ಬಳಗ(ರಿ) ಉದ್ಘಾಟಿಸಿ ಅವರು ಮಾತನಾಡಿದ ಅವರು, ಈಡಿಗ ಸಮುದಾಯದ ಜನಸಂಖ್ಯೆ ಪಟ್ಟಣ ವ್ಯಾಪ್ತಿಯಲ್ಲಿ ಕಡಿಮೆಯಿದ್ದು ಇದರೊಂದಿಗೆ ಸಂಘಟನೆ ಕೊರತೆ ಯಿಂದಾಗಿ ಸರ್ಕಾರದ ಸೌಲಭ್ಯ ವನ್ನು ಪಡೆದುಕೊಳ್ಳುವಲ್ಲಿ ವಿಫಲ ವಾಗಿದೆ ಎಂದ ಅವರು, ಹಲವು ವರ್ಷಗಳ ಸತತ ಶ್ರಮದ ಫಲವಾಗಿ ಕೆಲ ವರ್ಷದ ಹಿಂದೆ ದೊಡ್ಡ ಸಮಾವೇಶದ ಮೂಲಕ ಸಂಘಟನೆ ಶಕ್ತಿಯನ್ನು ಪ್ರದರ್ಶಿಲಾಗಿದ್ದು ಇದೀಗ ನಾರಾಯಣ ಗುರು ಬಳಗದ ಮೂಲಕ ಪಟ್ಟಣದಲ್ಲಿ ಸಂಘಟನೆಗೆ ಶಕ್ತಿಯನ್ನು ತುಂಬುವ ಪ್ರಯತ್ನವನ್ನು ಶ್ಲಾಘಿಸಿದರು.
ಜಿಯಲ್ಲಿ ಸಮುದಾಯ ಸದೃಢವಾಗಿದ್ದು ಪಟ್ಟಣ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರಾಗಿರುವ ಈಡಿಗ ಸಮುದಾಯದ ಸಂಘಟನೆ ಮತ್ತಿತರ ಮಂಗಳ ಕಾರ್ಯಗಳಿಗೆ ಅಗತ್ಯವಾದ ಸಮುದಾಯ ಭವನ ನಿರ್ಮಾಣದ ಕನಸು ನನಸಾಗಿಸಲು ಹಲವು ಬಾರಿ ಜನಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನ ವಾಗಿಲ್ಲ ಎಂದರಲ್ಲದೇ, ಸಂಘಟನೆ ಮೂಲಕ ಮಾತ್ರ ಗುರಿ ತಲುಪಲು ಸಾಧ್ಯ ಎಂಬ ನಾರಾಯಣ ಗುರುಗಳ ತತ್ವ ಸಂದೇಶದ ಮೇರೆಗೆ ಇದೀಗ ನಿವೇಶನಕ್ಕಾಗಿ ಸಂಘಟನೆ ಮೂಲಕ ಎಲ್ಲ ರೀತಿಯಲ್ಲಿ ಶ್ರಮ ವಹಿಸಲಾಗುತ್ತಿದೆ. ಸಣ್ಣ ಪುಟ್ಟ ಸಮುದಾಯಕ್ಕೆ ದೊರೆತ ಸಮುದಾಯ ಭವನದ ಭಾಗ್ಯ ಈಡಿಗ ಸಮುದಾಯಕ್ಕೆ ದೊರೆಯದ ಬಗ್ಗೆ ತೀವ್ರ ನೋವಿದ್ದು ಶೀಘ್ರದಲ್ಲಿಯೇ ಪರಿಹಾರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಳಗದ ಗೌರವಾಧ್ಯಕ್ಷ ಕರಿಬಸಪ್ಪ ಮಾತನಾಡಿ, ಸದೃಢ ಸಂಘಟನೆಯಿಂದ ಮಾತ್ರ ಸಮಾಜ ಗುರುತಿಸಲ್ಪಡಲಿದ್ದು ಈ ದಿಸೆಯಲ್ಲಿ ಸಮಾಜದ ಸರ್ವ ಸದಸ್ಯರು ವಿವಿಧ ಕಾರ್ಯಕ್ರಮದಡಿ ಜತೆಗೂಡಿದಾಗ ಪರಸ್ಪರ ಚರ್ಚೆ ಮೂಲಕ ಸಮಸ್ಯೆ ಪರಿಹರಿಸಿಕೊಂಡು ಸಮಾಜ ಸದೃಢವಾಗಲು ಸಾಧ್ಯ. ತಾಲೂಕಿ ನಲ್ಲಿ ೧೩ ಸಾವಿರ ಮತದಾರರಿದ್ದು ಬಲಿಷ್ಠ ಸಂಘಟನೆ ಕೊರತೆಯಿಂದ ಅನಾಥ ಪ್ರe ಕಾಡುತ್ತಿದೆ ಮುಂದಿನ ಪೀಳಿಗೆಗಾಗಿ ಪಕ್ಷ ಬೇಧ ಮರೆತು ಎಲ್ಲರೂ ಒಂದಾಗಬೇಕಾಗಿದೆ ನಾರಾಯಣ ಗುರುಗಳ ತತ್ವ ಸಿzಂತದ ಜತೆಗೆ ಪ್ರತಿಯೊಬ್ಬರೂ ಹೋರಾಟದ ಮನೋಭಾವನೆಯನ್ನು ಬೆಳೆಸಿ ಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ನಾರಾಯಣ ಗುರು ಈಡಿಗ ಬಳಗದ ಅಧ್ಯಕ್ಷ ಚಾಮರಾಜ್ ಮಾತನಾಡಿ, ಶೋಷಿತರು ಹಿಂದುಳಿದ ವರ್ಗದ ದ್ವನಿಯಾಗಿದ್ದ ಬ್ರಹ್ಮರ್ಷಿ ನಾರಾಯಣ ಗುರುಗಳ ತತ್ವ ಸಿzಂತವನ್ನು ಅಳವಡಿಸಿಕೊಂಡು ಇತರೆ ಸಮಾಜಕ್ಕೆ ಮಾದರಿಯಾಗುವ ರೀತಿ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಆರ್ಯ ಈಡಿಗ ಸಮಾಜ ಹಾಗೂ ನಾರಾಯಣಗುರು ಈಡಿಗ ಬಳಗದ ಅಧ್ಯಕ್ಷರನ್ನು, ಸಾಧಕರನ್ನು ಸನ್ಮಾನಿಸಲಾಯಿತು. ಬ್ರಹರ್ಷಿ ನಾರಾಯಣ ಗುರುಗಳ ಬಗ್ಗೆ ಕಾರ್ಯದರ್ಶಿ ನಾಗರಾಜ ಇಳಿಗೇರ್ ಕಿರುಪರಿಚಯ ಮಾಡಿಕೊಟ್ಟರು.
ವೇದಿಕೆಯಲ್ಲಿ ಬಳಗದ ಉಪಾಧ್ಯಕ್ಷ ದೇವರಾಜ ಕೊಡಕಣಿ, ಕಾರ್ಯಾಧ್ಯಕ್ಷ ಅಣ್ಣಪ್ಪ ಜೆ,ಸಹ ಕಾರ್ಯದರ್ಶಿ ದುರ್ಗಪ್ಪ, ಕಷ್ಣಮೂರ್ತಿ, ಗೋಪಾಲಪ್ಪ, ರಾಮಚಂದ್ರುಡು, ಪ್ರಭಾಕರ, ವಿಜಯಕುಮಾರ, ನಾಗರಾಜ, ಜಯರಾಂ ಸಲಹಾ ಹಾಗೂ ಪ್ರಚಾರ ಸಮಿತಿ ಸದಸ್ಯ ಇ.ಎಚ್ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
ವನಿತಾ ಪ್ರಾರ್ಥಿಸಿ,ನಾಗರಾಜ ಸ್ವಾಗತಿಸಿ,ಕಷ್ಣಮೂರ್ತಿ ನಿರೂಪಿಸಿ ಈಶ್ವರ್ ವಂದಿಸಿದರು.