ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಸುಗಳ ಪೂಜಾ ಜಾತ್ರೋತ್ಸವಕ್ಕೆ ಶ್ರೀಗಳಿಂದ ಚಾಲನೆ…

Share Below Link

ಚನ್ನರಾಯಪಟ್ಟಣ : ತಾಲೂಕಿನ ಹಿರೀಸಾವೆ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಬಸವೇಶ್ವರಸ್ವಾಮಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರಥಮ ಆರತಿ ಬೆಳಗುವ ಮೂಲಕ ಐದು ದಿನ ನಡೆಯುವ ರಾಸುಗಳ ಪೂಜೆಯ ಜತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ವಿವಿಧ ಪುಷ್ಪಗಳು, ಒಡವೆ- ವಸ್ತ್ರಗಳಿಂದ ಅಲಂಕಾರಗೊಂಡಿದ್ದ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಸ್ವಾಮೀಜಿಯವರು ಪೂಜೆ ಸಲ್ಲಿಸಿದ ನಂತರ ಅಡ್ಡಪಲ್ಲಕ್ಕಿ ಉತ್ಸವವು ಪ್ರಾರಂಭವಾಯಿತು. ಗ್ರಾಮದ ಕಶ್ವರ, ಲಕ್ಷ್ಮೀದೇವಿ, ಈಶ್ವರ ದೇವರು ಸೇರಿದಂತೆ ಎಲ್ಲ ದೇವಾಲಯಗಳಿಗೆ ಪೂಜೆ ಸಲ್ಲಿಸ ಲಾಯಿತು. ಮಂಗಳವಾದ್ಯ ದೊಂದಿಗೆ ಮೂಲ ಸ್ಥಾನಕ್ಕೆ ದೇವರನ್ನು ಕರೆತರಲಾಯಿತು. ಸ್ವಾಮೀಜಿಗಳು ಕಲ್ಯಾಣಿಯಲ್ಲಿ ಗಂಗೆ ಪೂಜೆ ಮಾಡಿ, ಮೂಲಸ್ಥಾನದಲ್ಲಿ ಇರುವ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆಸಲ್ಲಿಸಿ, ಧರ್ಮ ಧ್ವಜರೋಹಣ ನೆರವೇರಿಸಿದರು.
ಶ್ರೀ ಆದಿಚುಂಚನಗಿರಿ ಹಾಸನ, ಕೊಡಗು ಮಠದ ಕಾರ್ಯದರ್ಶಿ ಗಳಾದ ಶಂಭುನಾಥಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ಜಿಪಂ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಪ್ರಮುಖರಾದ ಗುಡಿಗೌಡ ಪ್ರಕಾಶ್, ರತ್ನರಾಜ್, ಶಿವನಂಜೇ ಗೌಡ, ಗಣೇಶಗೌಡ, ಹೊನ್ನೇಗೌಡ, ನಂದೀಶ್, ಸಿದ್ದಗಂಗಾಧರಗೌಡ, ತುಪ್ಪದಹಳ್ಳಿ ಪ್ರಕಾಶ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.