ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ಹಿರೇಮಠ ಅಜೇಯ ದ್ವಿಶತಕ: ಋತ್ವಿಕ್‌ಗೆ 8 ವಿಕೆಟ್…

Share Below Link

ಧಾರವಾಡ : ವಿಕೆಟ್ ಕೀಪರ್-ಬ್ಯಾಟರ್ ಸಿದ್ಧಾಂತ ಹಿರೇಮಠ ಅವರ ಸೊಗಸಾದ ಅಜೇಯ ದ್ವಿಶತಕ ಹಾಗೂ ಮಧ್ಯಮ ವೇಗಿ ಋತ್ವಿಕ್ ಮೆಸ್ತಾ ಅವರಿಂದ ಒಂದು ‘ಹ್ಯಾಟ್ರಿಕ್’ ಸಹಿತ ೮ ವಿಕೆಟ್‌ಗಳ ಬೇಟೆಯ ನೆರವಿನಿಂದ ಇಲ್ಲಿಯ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ (ಸಿಸಿಕೆ) ತಂಡ ಹುಬ್ಬಳ್ಳಿಯಲ್ಲಿ ನಡೆದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಧಾರವಾಡ ವಲಯ ೧೪ ವರ್ಷ ದವರೊಳಗಿನ ಅಂತರ-ಕ್ಲಬ್ ಲೀಗ್ ಕ್ರಿಕೆಟ್ ಟೂರ್ನಿಯ ‘ಎಚ್’ ಗುಂಪಿನಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್(ಬಿ) ತಂಡವನ್ನು ೨೯೧ ಓಟಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ಶುಭಾರಂಭಗೈದಿತು.
ಹುಬ್ಬಳ್ಳಿಯ ರಾಜನಗರ ಕೆಎಸ್‌ಸಿಎ ಟರ್ಫ್ ಮೈದಾನದಲ್ಲಿ ಮೆದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸಿಸಿಕೆ ತಂಡ ನಿಗದಿತ ೫೦ ಓವರ್‌ಗಳಲ್ಲಿ ಕೇವಲ ೨ ವಿಕೆಟ್‌ಗಳಿಗೆ ೩೪೫ರ ಬೃಹತ್ ಮೊತ್ತ ಪೇರಿಸಿತು. ಸರದಿಯನ್ನಾರಂಭಿಸಿದ ಸಿದ್ಧಾಂತ ಹಿರೇಮಠ ೧೫೬ ಎಸೆತಗಳಲ್ಲಿ ೩೪ ಬೌಂಡರಿಗಳಿದ್ದ ೨೦೬ ಓಟ ಸಿಡಿಸಿ ಔಟಾಗದೇ ಉಳಿದರು. ನಾಯಕ ಇಶಾನ್ ಹುಣಿಶ್ಯಾಳಿ ೮೫ ಎಸೆತಗಳಲ್ಲಿ ೩ ಬೌಂಡರಿಗಳಿದ್ದ ೪೫ ಓಟಗಳ ಕಾಣಿಕೆಯನ್ನಿತ್ತರು.
ಉತ್ತರವಾಗಿ ಹೊಸ ಚೆಂಡಿ ನೊಡನೆ ದಾಳಿಯನ್ನಾರಂಭಿಸಿದ ಋತ್ವಿಕ್ ಮೆಸ್ತಾ ಒಂದು ಮೇಡನ್ ಇದ್ದ ೯.೫ ಓವರ್‌ಗಳಲ್ಲಿ ೩೧ ಓಟಗಳನ್ನಿತ್ತು ಒಂದು ‘ಹ್ಯಾಟ್ರಿಕ್’ ಸಹಿತ ಎಂಟು ವಿಕೆಟ್ ಕೆಡವುz ರೊಂದಿಗೆ ಎಚ್‌ಎಸ್‌ಸಿ(ಬಿ) ತಂಡ ೧೮.೫ ಓವರ್‌ಗಳಲ್ಲಿ ಕೇವಲ ೫೪ಕ್ಕೆ ಸರ್ವಪತನ ಕಂಡಿತು. ಪ್ರೇಮನಾಥ ಪಾಳೇಕರ(೨/೮) ಉತ್ತಮ ಬೆಂಬಲ ನೀಡಿದರು.