ರಾಮಾಯಣದಲ್ಲಿನ ಮಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಸಂಸದೆ ಡಾ.ಪ್ರಭಾ
ದಾವಣಗೆರೆ : ರಾಮಾಯಣದಲ್ಲಿನ ತತ್ವಾದರ್ಶ ಹಾಗೂ ಅದರಲ್ಲಿನ ಮಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಜಿಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಪಾಲಿಕೆ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಗುಂಡಿ ಮಹಾ ದೇವಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ. ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್‍ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನದ ನಿರ್ಮಾಣಕ್ಕೆ ರೂ.೨೦ ಲಕ್ಷ, ಹೋಬಳಿ ಮತ್ತು ಪಪಂ ಮಟ್ಟದಲ್ಲಿ ೭೫ ಲಕ್ಷ , ತಾಲೂಕು ಮಟ್ಟದಲ್ಲಿ ೨೦೦ ಲಕ್ಷ ಮತ್ತು ಜಿ ಮಟ್ಟದಲ್ಲಿ ಭವನ ನಿರ್ಮಾಣ ಮಾಡಲು ರೂ. ೪೦೦ ಲಕ್ಷ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಪ್ರಥಮ ಹಂತದಲ್ಲಿ ೭ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ಎ ತರಹದ ಅಭಿವೃದ್ದಿ ಕಾಮಗಾರಿಗಳನ್ನು ಇಲ್ಲಿ ಅನುಷ್ಠಾನ ಗೊಳಿಸಲಾಗುತ್ತದೆ ಎಂದರು.
ಮಾಯಕೊಂಡ ಶಾಸಕ ಕೆ. ಎಸ್. ಬಸವಂತಪ್ಪ ಮಾತನಾಡಿ, ವಾಲ್ಮೀಕಿ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಇದನ್ನು ಇಡೀ ಮಾನವ ಕುಲ ಆಚರಿಸುವಂತಹ ಕಾರ್ಯಕ್ರಮ ವಾಗಿದೆ ಎಂದು ತಿಳಿಸಿದರು.
ಜಿಧಿಕಾರಿ ಗಂಗಾಧರ್ ಸ್ವಾಮಿ ಮಾತನಾಡಿ. ನಮ್ಮ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಪ್ರದೇಶಗಳ ಸಂಸ್ಕೃತಿ ರಾಮಾಯಣದಿಂದ ರಚಿತ ವಾಗಿದೆ. ಭಾರತದ ಯಾವುದೇ ಮೂಲೆಗೆ ಹೋದರೂ ಇಲ್ಲಿ ನಮ್ಮ ಸಂಸ್ಕೃತಿ ವಿಸ್ತಾರವಾಗಿದೆ ಎಂದರು.
ರಾಮಾಯಣ ಓದುವುದ ರಿಂದ ಜೀವನದ ಪಾಠ, ವಿದ್ಯೆ, ಶ್ರz ಯನ್ನು ನಾವುಗಳು ಅಳವಡಿಸಿ ಕೊಳ್ಳುವ ಮಹತ್ವದ ಸಂದೇಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಚಮನ್‌ಸಾಬ್ ಕೆ , ಜಿಪಂ ಸಿಇಓ ಸುರೇಶ್ ಬಿ ಇಟ್ನಾಳ್, ಅಪರ ಜಿಧಿಕಾರಿ ಪಿ.ಎನ್. ಲೋಕೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಜಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ. ನವೀನ್ ಸಿ ಮಠದ್, ವಾಲ್ಮೀಕಿ ಸಮಾಜದ ಮುಖಂಡರು, ಅಧ್ಯಕ್ಷರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.