ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹರ್ಷಿ ವಾಲ್ಮೀಕಿ ಕೊಡುಗೆ ಬಹು ದೊಡ್ಡದು…

Share Below Link

ಶಿಕಾರಿಪುರ : ಆಚಾರ, ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ವ್ಯವಸ್ಥೆ ಸಹಿತ ಮನುಕುಲದ ಉzರಕ್ಕಾಗಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಜಗತ್ತಿನ ಎಡೆ ಶ್ರೀ ರಾಮನ ಸಹಿತ ಹಲವು ಮಹಾನ್ ಪುರುಷರನ್ನು ಪರಿಚಯಿಸಿದೆ ಎಂದು ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.


ಪಟ್ಟಣದ ತಾ.ಪಂ ಸಭಾಂಗಣ ದಲ್ಲಿ ತಾಲೂಕು ಆಡಳಿತ, ತಾ.ಪಂ, ಸಮಾಜ ಕಲ್ಯಾಣ ಇಲಾಖೆ,ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾಯಣ ಮಹಾಕಾವ್ಯ ನಾಡಿಗೆ ಮಾತ್ರವಲ್ಲದೆ ಜಗತ್ತಿನ ಮಾನವ ಕುಲದ ಉzರಕ್ಕಾಗಿ ಮಹರ್ಷಿ ವಾಲ್ಮೀಕಿ ನೀಡಿದ ಬಹು ದೊಡ್ಡ ಕೊಡುಗೆಯಾಗಿದ್ದು,ಜಗತ್ತು ತಲೆದೂಗುವಂತೆ ಸುಂದರವಾಗಿ ರಚಿಸಿದ ರಾಮಾಯಣದಲ್ಲಿ ಶ್ರೀ ರಾಮಚಂದ್ರನ ಸಹಿತ ಅನೇಕ ಪುಣ್ಯ ಪುರುಷರು ದಾರ್ಶನಿಕರು ಸಂತರ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿzರೆ ಎಂದ ಅವರು, ರಾಮಾಯಣದಲ್ಲಿ ಕೌಟುಂಬಿಕ ವ್ಯವಸ್ಥೆ ಸಹಿತ ಆಚಾರ, ಸಂಸ್ಕೃತಿ, ಸಂಸ್ಕಾರದ ಮೂಲಕ ಮನುಕುಲದ ಉzರಕ್ಕಾಗಿ ಅಗತ್ಯವಾದ ಎಲ್ಲ ಸಂದೇಶವನ್ನು ನೀಡಿದ ಮಹರ್ಷಿ ವಾಲ್ಮೀಕಿ ಪುಣ್ಯ ಪುರುಷ ಎಂದು ಬಣ್ಣಿಸಿದರು.
ಕರ್ನಾಟಕ ರಾಜ್ಯ ಪ.ಜತಿ ಪಂಗಡ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಜೆ.ಪಲ್ಲವಿ ಮಾತನಾಡಿ,ಸಾಧನೆ ಪರಿಶ್ರಮದ ಮೂಲಕ eನ ಸಂಪಾದಿಸಿದಾಗ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಸಲ್ಲಿಸಲು ಸಾಧ್ಯ ಎಂಬುದನ್ನು ಮಹರ್ಷಿ ವಾಲ್ಮೀಕಿ ರಾಮಾಯಣ ಗ್ರಂಥ ರಚಿಸಿ ತೋರಿಸಿಕೊಟ್ಟಿzರೆ. ದಾರ್ಶನಿಕರು ಸಂತರು ಎಂದಿಗೂ ಸೀಮಿತ ಸಮಾಜ ಧರ್ಮದ ಉzರಕ್ಕಾಗಿ ಶ್ರಮಿಸದೆ ಮನುಕುಲದ ಸಮಗ್ರ ಏಳ್ಗೆಯ ವಿಶಾಲ ದೃಷ್ಟಿಕೋನ ಹೊಂದಿದ್ದರು ಎಂದ ಅವರು, ಜಯಂತಿ ಆಚರಣೆ ಸಾಂಕೇತಿಕವಾಗದೆ ಮಹಾತ್ಮರ ತತ್ವ,ಸಂದೇಶ ಬದುಕಿನಲ್ಲಿ ಅಳವಡಿಸಿ ಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕೆಡಿಪಿ ಸದಸ್ಯ ಉಮೇಶ್ ಮಾರವಳ್ಳಿ ಮಾತನಾಡಿ, ಜಯಂತಿ ಆಚರಣೆಯಿಂದ ಸಮಾಜದ ಉzರ ಸಾಧ್ಯವಿಲ್ಲ ಶೋಷಿತ ಜನಾಂಗಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಈ ದಿಸೆಯಲ್ಲಿ ಸಿದ್ದರಾಮಯ್ಯನವನರು ಎಸ್ಟಿಪಿ ಟಿಎಸ್ಪಿ ಕಾಯ್ದೆ ಜರಿಗೊಳಿಸಿದ್ದು ಮನಮೋಹನ್ ಸಿಂಗ್ ಪ್ರಧಾನಿಯಾಗಿ ಸಾಗುವಳಿದಾರ ಪರಿಶಿಷ್ಟರಿಗೆ ಹಕ್ಕುಪತ್ರ ನೀಡಲು ಆದೇಶಿಸಿದ ಮೇರೆಗೆ ಕಾಗೋಡು ತಿಮ್ಮಪ್ಪ ೬೧೦ ಸಾಗುವಳಿದಾರರಿಗೆ ನೀಡಿದ್ದು ನಂತರದಲ್ಲಿ ಸಮುದಾಯಕ್ಕೆ ನ್ಯಾಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸತೀಶ್ ನಾಯಕ್ ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ತಹಸೀಲ್ದಾರ್ ಮಶ್ ಪೂಜರ್, ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್, ಇಒ ನಾಗರಾಜ್, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹನುಮಂತಪ್ಪ,ಪುರಸಭೆ ಉಪಾಧ್ಯಕ್ಷೆ ರೂಪ ಪಾರಿವಾಳದ, ಮುಖಂಡ ಫಕೀರಪ್ಪ,ರಂಗಪ್ಪ,ಸುರೇಶ್ ಉಪಸ್ಥಿತರಿದ್ದರು.