ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತರ ಪ್ರತಿಭಟನೆ
ನ್ಯಾಮತಿ : ನ್ಯಾಮತಿ ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ರೈತರ ತರಕಾರಿ ಬೆಳೆಗೆ ಬಹಿರಂಗ (ಓಪನ್ ಮಾರ್ಕೇಟ್) ಹರಾಜು ಮೂಲಕ ಬೆಳೆಗಳನ್ನು ಖರಿದಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ತರಕಾರಿ ಬೆಳೆಗಾರರು ಮಾರುಕಟ್ಟೆ ಮುಖ್ಯದ್ವಾರವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಮಾರುಕಟ್ಟೆಗೆ ಬರುವ ರೈತರಿಗೆ ಸೂಕ್ತ ವಿಶ್ರಾಂತ ಗೃಹ, ಸಿಸಿ ಕ್ಯಾಮರ ಶುದ್ಧ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಇನ್ನಿತರ ಬೇಡಿಕಳನ್ನು ಮುಂದಿಟ್ಟಿರುವ ರೈತರು ಮಧ್ಯಾಹ್ನ ೨ಗಂಟೆಯಿಂದ ಸಂಜೆ ೬ಗಂಟೆಯ ವರೆಗೂ ತರಕಾರಿಗಳ ಬಹಿರಂಗ ಹರಾಜು ನೀಡುವಂತೆ ಒತ್ತಾಯಿಸಿ ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಮಂಜುನಾಥ ಅವರಿಗೆ ಮನವಿ ಪತ್ರ ನೀಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿ ಮಂಜುನಾಥ್ ಅವರು, ರೈತರು ನ್ಯಾಯಯುತ ಬೇಡಿಕಗಳನ್ನು ಮುಂದಿಟ್ಟಿzರೆ. ಅವುಗಳನ್ನು ಇಂದಿನಿಂದಲೇ ಜರಿಗೊಳಿಸುವು ದಾಗಿ ಭರವಸೆ ನೀಡಿದರು.
ಬೆಳಗ್ಗೆ ೧೧ಗಂಟೆಗೆ ಟೊಮೆಟೋ ಹರಾಜು ಪ್ರಕ್ರಿಯೆ ನಂತರ ವಿವಿಧ ತರಕಾರಿ ಬೆಳೆಗಳ ಬಹಿರಂಗ ಹರಾಜು ಪ್ರಕ್ರಿಯೇ ನಡೆಸಲಾಗುವುದು. ಈಗಾಗಲೆ ಕೋಠಡಿಗಳು ಇರುವ ಹಿನ್ನಲೆ ಅಲ್ಲಿ ವಿಶ್ರಾಂತಿಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ನೀರಿನ ವ್ಯವಸ್ಥೆ ಇದೆ, ಅಗತ್ಯ ಸ್ಥಳಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೋಳ್ಳಲಾಗುವುದು ಎಂದರು.

