ಜಿಲ್ಲೆಯ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಬಿವೈಆರ್
ಭದ್ರಾವತಿ : ನಾಡಹಬ್ಬ ದಸರಾ ಮಹೋತ್ಸವ ವನ್ನು ಜಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಅತ್ಯಂತ ವಿಜೃಂಭಣೆ ಯಿಂದ ಅಚರಿಸುತ್ತಿರುವುದು ಭದ್ರಾವತಿಯಲ್ಲಿ ಮಾತ್ರ ಎಂಬುದು ಸಂತೋಷದ ಸಂಗತಿ ಎಂದು ಸಂಸದ ಬಿ.ವೈ.ರಾಘವೇಂದ್ರ ಶ್ಲಾಘಿಸಿದರು.
ನಗರಸಭೆ ವತಿಯಿಂದ ಹಳೇ ನಗರದ ಕನಕ ಮಂಟಪ ಮೈದಾನ ದಲ್ಲಿ ಏರ್ಪಡಿಸಿದ್ದ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದ ಬಹು ಜನರ ಬೇಡಿಕೆಯಾದ ಕಡದಕಟ್ಟೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು ಡಿಸೆಂಬರ್ ಅಂತ್ಯಕ್ಕೆ ಉದ್ಘಾಟನೆ ಮಾಡಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿ ಕೊಡಲಾಗು ವುದು. ತುಮಕೂರು ಶಿವಮೊಗ್ಗ ರಾಷ್ಟ್ರೀಯ ಹೆzರಿ ಕಾಮಗಾರಿ ನಡೆಯುತ್ತಿದ್ದು ೩೨ ಸ್ಥಳಗಳಲ್ಲಿ ಭೂಮಿ ವಶಪಡಿಸಿಕೊಳ್ಳುವಿಕೆ ಯಲ್ಲಿ ಕೆಲ ಸಮಸ್ಯೆಗಳು ಉಂಟಾಗಿದೆ. ಅದನ್ನು ನಿವರಿಸಲು ಸಿಎಂ ಹಾಗು ರಾಜ್ಯದ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ವಿವಾದ ಬಗೆಹರಿದಿ ನಂತರ ಕಾಮಗಾರಿ ವೇಗೆ ಪಡೆದು ಕೊಳ್ಳಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೇಶದ ಬೇರೆ ಬೇರೆ ರಾಜ್ಯಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲಾ ಗುವುದು. ಆ ಮೂಲಕ ರಸ್ತೆ, ರೈಲು, ವಿಮಾನಯಾನದ ಮೂಲಕ ಜಿಯ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ವತಿಯಿಂದ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಭಾರ ಅಧ್ಯಕ್ಷ ಮಣಿ, ಆಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಹಾಗೂ ನಗರಸಭಾ ಸದಸ್ಯರುಗಳು, ಅಧಿಕಾರಿ ಮತ್ತು ಸಿಬ್ಬಂದಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.