ಜಿಲ್ಲಾ ಸುದ್ದಿತಾಜಾ ಸುದ್ದಿ

ಜತಿ ಗಣತಿ ವರದಿ ಜರಿಗೆ ಶಾಮನೂರು ವಿರೋಧ ಅಹಿಂದ ಸಂಘಟನೆಯ ಆಕ್ರೋಶ…

Share Below Link

ಶಿವಮೊಗ್ಗ: ಶಾಮನೂರು ಶಿವಶಂಕರಪ್ಪರಿಗೆ ತಾವು ಶಾಸಕ ರಾಗಲು, ತಮ್ಮ ಮಗ ಶಾಸಕನಾಗಲು , ತಮ್ಮ ಸೊಸೆ ಸಂಸದರಾಗಲು ಅಹಿಂದ ಮತಗಳು ಬೇಕು. ಆದರೆ ಅಹಿಂದ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕಾಂತರಾಜ್ ವರದಿ ಬೇಡವಾಗಿದೆ ಎಂದು ಅಹಿಂದ ಸಂಘಟನೆಯ ಜಿಲ್ಲಾ ಮುಖ್ಯ ಸಂಚಾಲಕ ಜಿ.ಪರಮೇಶ್ವರಪ್ಪ ಅವರು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ೧೩ ಲಕ್ಷಗಳಿರುವ ಅಹಿಂದ ಮತಗಳು ಕೈ ತಪ್ಪಿಹೋಗುವ ಆತಂಕದಿಂದ ಶಾಮನೂರು ಶಿವಶಂಕರಪ್ಪ ಅವರು ಜತಿಗಣತಿ ವರದಿ ಜರಿಗೆ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜತಿಗಣತಿಯ ಕಾಂತರಾಜ್ ವರದಿ ಜರಿಯಿಂದ ಎಲ್ಲಾ ಜತಿಯ ಬಡವರಿಗೆ ನ್ಯಾಯ ಸಿಗುತ್ತದೆ. ಜನಸಂಖ್ಯೆಗನುಗುಣವಾಗಿ ಸೌಲತ್ತು ಗಳು ಸಿಗುತ್ತವೆ. ಆದರೆ ಅಹಿಂದ ಸಮುದಾಯಗಳಿಗೆ ನ್ಯಾಯ ಸಿಗುವುದು ಕೆಲವು ಬಲಾಢ್ಯ ಜತಿಗಳಿಗೆ ಇಷ್ಟವಿಲ್ಲ. ಬದಲಾಗಿ ಅನಗತ್ಯ ಆತಂಕವನ್ನು ವ್ಯಕ್ತಪಡಿಸುತ್ತಿವೆ ಎಂದರು.
ಅಹಿಂದ(ರಿ) ಸಂಘಟನೆಯ ರಾಜ್ಯ ಜಂಟಿ ಸಂಚಾಲಕ ಮೊಹಮ್ಮದ್ ಸನಾವುಲ್ಲಾ ಮಾತನಾಡಿ ಕಾಂತರಾಜ್ ವರದಿ ಮತ್ತು ಪರಿಶಿಷ್ಟಜತಿಗಳ ಒಳಮೀಸಲಾತಿಯ ಜಸ್ಟೀಸ್ ಸದಾಶಿವ ಆಯೋಗದ ವರದಿಯನ್ನು ಜರಿಗೊಳಿಸುವಂತೆ ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಶಂಕರರಾವ್, ಪ್ರಮುಖರಾದ ಅತ್ತಿಗುಂದ ಚಂದ್ರ ಶೇಖರಪ್ಪ, ಜೆ. ಭಾಸ್ಕರ್, ಹಸನ್ ಆಲಿಖಾನ್ ಆಫ್ರಿದಿ, ಚನ್ನವೀರಪ್ಪ, ಮಹಮದ್ ಇಕ್ಬಾಲ್ ನೇತಾಜಿ ಮತ್ತಿತರರು ಉಪಸ್ಥಿತರಿದ್ದರು.