ಜಿಲ್ಲಾ ಸುದ್ದಿತಾಜಾ ಸುದ್ದಿ

ಜ್ಞಾನ ಹೊಂದಿದವರು ಜಗತ್ತನ್ನೇ ಗೆಲ್ಲಬಲ್ಲರು…

Share Below Link

ಶಿವಮೊಗ್ಗ: ಪ್ರಸ್ತುತ ಜಗತ್ತಿನಲ್ಲಿ ಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಜ್ಞಾನ ಹೆಚ್ಚು ಹೊಂದಿರುವ ಜನರು ಜಗತ್ತನ್ನೇ ಗೆಲ್ಲಬಲ್ಲರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹೇಳಿದರು.
ನಗರದ ಕುವೆಂಪು ರಂಗಮಂದಿರ ದಲ್ಲಿ ಮಹಾನಗರ ಪಾಲಿಕೆ ಹಾಗೂ ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಜ್ಞಾನ ದಸರಾ ಪ್ರಯುಕ್ತ ಆಯೋಜಿ ಸಿದ್ದ `ಬದುಕಿನ ಅವಕಾಶಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾಲೇಜು ಶಿಕ್ಷಣ ಪಡೆಯುತ್ತಿರುವಾಗಲೇ ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಂಕಲ್ಪ ಹೊಂದಬೇಕು. ಪದವಿ ಪಡೆಯುವ ಅವಧಿಯು ಜೀವನದ ಅಮೂಲ್ಯ ಸಮಯ. ಈ ಹಂತದಲ್ಲಿ ನೀವು ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕು. ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಬದುಕಿನಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಅತ್ಯಂತ ಮುಖ್ಯ. ಎಂತಹ ಕಷ್ಟಕರ ಸನ್ನಿವೇಶ ಎದುರಾದರೂ ಸಮರ್ಥವಾಗಿ ನಿಭಾಯಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಮೌಲ್ಯ ಆಧಾರಿತ ಜೀವನ ಕಟ್ಟಿಕೊಳ್ಳಲು ಯುವಜನರು ಆಲೋಚನೆ ನಡೆಸಬೇಕು. ಹಿರಿಯರು ತೋರಿಸಿರುವ ಮಾರ್ಗದರ್ಶನದಲ್ಲಿ ಸಂಸ್ಕೃತಿ ಪರಂಪರೆಯ ಆಚರಣೆಗಳನ್ನು ಪಾಲಿಸಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ, ಉದ್ಯಮಿ ಎಸ್.ರುದ್ರೇಗೌಡ, ಸಾಧನಾ ಮಂಜುನಾಥ್, ಡಾ. ಪ್ರೀತಿ ವಿ. ಶಾನಭಾಗ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ದುರ್ಗಪ್ಪ ಅಂಗಡಿ, ಅಂತರಾಷ್ಟ್ರೀಯ ತರಬೇತುದಾರ ಎಸ್.ವಿ.ವೆಂಕಟೇಶ್ ಅವರು ಬದುಕಿನ ಅವಕಾಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಕೌಶಲ್ಯ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ್, ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ , ಶಶಿಧರ್ ಇನ್ನಿತರರಿದ್ದರು.