ಜಿಲ್ಲಾ ಸುದ್ದಿತಾಜಾ ಸುದ್ದಿ

7ನೇ ವೇತನ ಆಯೋಗದಲ್ಲಿ ಅನ್ಯಾಯ ಖಂಡಿಸಿ ನಿವೃತ್ತ ನೌಕರರ ಪ್ರತಿಭಟನೆ

Share Below Link

ಶಿವಮೊಗ್ಗ: ನಿವೃತ್ತರಾದವರಿಗೆ ೭ನೇ ವೇತನದ ಆಯೋಗದ ಲೆಕ್ಕಾಚಾರದ ಅನುಸಾರ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಇಂದು ವಿಶ್ವ ಹಿರಿಯ ನಾಗರಿಕ ದಿನಾಚರಣೆ ಸಂದರ್ಭ ದಲ್ಲಿ ಜಿಧಿಕಾರಿಗಳ ಕಚೇರಿ ಮುಂದೆ ಕಪ್ಪುಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
೧.೦೭.೨೦೨೨ರಿಂದ ೩೧.೭.೨೦೨೪ರ ಅವಧಿಯಲ್ಲಿ ನಾವುಗಳು ನಿವೃತ್ತರಾಗಿದ್ದು, ನಮಗೆ ೬ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ. ಆರ್.ಜಿ.ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿ ದ್ದು, ೭ನೇ ವೇತನ ಆಯೋಗ ದಲ್ಲಿ ಆರ್ಥಿಕ ಸೌಲಭ್ಯ ಸಿಗದೆ ಅನ್ಯಾಯವಾಗಿದೆ ಎಂದು ಧರಣಿ ನಿರತರು ಆರೋಪಿಸಿದರು.
೭ನೇ ವೇತನದ ಆಯೋಗದಲ್ಲಿ ಆಗಿರುವ ಸುಮಾರು ೧೨ ರಿಂದ ೨೨ಲಕ್ಷ ರೂ. ನಷ್ಟ ವುಂಟಾಗಿ ಅನ್ಯಾಯಕ್ಕೆ ಒಳಗಾಗಿರುವ ನಾವು ಗಳು ರಾಜ್ಯದ ಕಾರ್ಯಾಂಗದಲ್ಲಿ ೭.೫೦ ಲಕ್ಷ ನೌಕರರಲ್ಲಿ ೧.೫೦ಲಕ್ಷಕ್ಕೂ ಹೆಚ್ಚು ಖಾಲಿ ಹು zಗಳಿಗೆ ೩೦ರಿಂದ ೪೦ ವರ್ಷ ಸುದೀರ್ಘ ಸೇವೆ ಸಲ್ಲಿಸಿದ ನಮ್ಮನ್ನು ಕಡೆಗಾಣಿಸಲಾ ಗುತ್ತಿದೆ ಎಂದು ದೂರಿದರು.
ಧರಣಿ ಸತ್ಯಾಗ್ರಹದಲ್ಲಿ ಜಿ ಸಂಚಾಲಕರಾದ ನಾಗಪ್ಪ, ಕೆ.ಕೃಷ್ಣ ಮೂರ್ತಿ, ಅಶೋಕ್ ಎಂ. ಸಜ್ಜನ್, ಹೆಚ್. ಪರಮೇಶ್ವರಪ್ಪ, ಷಣ್ಮುಖಪ್ಪ, ವಜೀರ್ ಅಹಮ್ಮದ್, ಸುರೇಂದ್ರ ಪಾ ಟೀಲ್, ಎಂ.ಎನ್. ಸುರೇಶಪ್ಪ, ಗಜೇಂದ್ರಪ್ಪ, ಎನ್. ಮಂಜುಳ, ಎನ್.ಎಸ್. ಸುಕನ್ಯಾ ಭಾಗವಹಿಸಿದ್ದರು.