ನಗರ ಬಿಜೆಪಿಯಿಂದ ಲಕ್ಷ ಸದಸ್ಯತ್ವದ ಗುರಿ…
ಶಿವಮೊಗ್ಗ : ನಗರದಲ್ಲಿ ಒಂದು ಲಕ್ಷ ಸದಸ್ಯತ್ವದ ಗುರಿ ಇತ್ತು. ಈಗಾಗಲೇ ೪೦ ಸಾವಿರ ಮಾಡಲಾಗಿದೆ. ಇನ್ನು ೬೦ ಸಾವಿರ ಮಾಡಬೇಕಿದೆ. ಶೀಘ್ರದಲ್ಲಿ ಈ ಗುರಿಮುಟ್ಟಲಾಗುತ್ತದೆ ಎಂದು ಬಿಜೆಪಿ ನಗರಾಧ್ಯಕ್ಷ ಮೋಹನ ರೆಡ್ಡಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಕಳೆದ ಬಾರಿ ೬೮ ಸಾವಿರ ಸದಸ್ಯತ್ವ ಮಾಡಲಾಗಿತ್ತು. ಈ ಬಾರಿ ಇದರ ಗುರಿ ಹೆಚ್ಚಾಗಿದೆ. ಹೀಗಾಗಿ ಮನೆಮನೆಗೆ ಕಾರ್ಯಕರ್ತರು ಬರಲಿzರೆ. ಸಾರ್ವಜನಿಕರು ಪ್ರೋತ್ಸಾಹಿಸಿ ಸದಸ್ಯತ್ವ ಪಡೆಯುವಂತೆ ನುಡಿದರು.
ಪ್ರಧಾನಿ ಮೋದಿ ಅವರ ೭೪ನೇ ಜನ್ಮದಿನಾಚರಣೆ ನಿಮಿತ್ತ ನಗರದಲ್ಲಿ ಸೆ. ೧೨ ರಿಂದ ಅ.೨ ರವರೆಗೆ ವಿವಿಧ ಸೇವಾ ಕಾರ್ಯ ನಡೆಸಲಾಗು ತ್ತಿದ್ದು, ಆರೋಗ್ಯ ತಪಾಸಣಾ ಶಿಬಿರ, ಕಣ್ಣಿನತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಿಸಲಾ ಗುತ್ತದೆ. ಪ್ರಧಾನಿಯವರ ತಾಯಿ ಹೆಸರಲ್ಲಿ ಗಿಡ ನೆಟ್ಟು ಪೋಷಿಸುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಯುವ ಮೋರ್ಚಾದಿಂದ ನಾಳೆ ಬೊಮ್ಮನಕಟ್ಟೆಯ ಅನ್ನಪೂರ್ಣೇಶ್ವರಿ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಎಸ್ಸಿ ಮೋರ್ಚಾದಿಂದ ಶಾಲೆ ಹಾಗೂ ಪಾರ್ಕ್ ಗಳ ಸ್ವಚ್ಛತೆ ಹಮ್ಮಿಕೊಳ್ಳಲಾ ಗುತ್ತಿದೆ ಎಂದರು.
ಶಾಸಕಎಸ್.ಎನ್ ಚನ್ನಬಸಪ್ಪ ಮಾತನಾಡಿ, ಸಿಎಂ ಮೇಲೆ ಎಫ್‌ಐಆರ್ ದಾಖಲಾಗಿದೆ. ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡು ವಂತೆ ನ್ಯಾಯಾಲಯ ಆದೇಶಿಸಿದ್ದರೂ ಕೂಡ ಕಾಂಗ್ರೆಸ್ ನ್ಯಾಯಾಲಯದ ಆದೇಶಕ್ಕೆ ದಿಕ್ಕಾರದ ಧೋರಣೆ ಅನುಸರಿ ಸುತ್ತಿದೆ. ಇದು ಆ ಪಕ್ಷದ ನೀತಿಯಾಗಿದೆ. ಕಾಂಗ್ರೆಸ್ ಮಂತ್ರಿ ಮಂಡಲ ಸಿಎಂ ಏನೂ ಮಾಡಿಲ್ಲ ವೆಂದು ತೀರ್ಪು ನೀಡುತ್ತಿದೆ. ಸಚಿವರೆ ರಾಜೀನಾಮೆ ನೀಡಿ ಜಡ್ಜ್ ಆಗಿ ಎಂದು ಹರಿಹಾಯ್ದರು.
ಈ ಹಿಂದೆ ಭ್ರಷ್ಟಾಚಾರದ ಆರೋಪ ಬಂದಾಗ ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ, ಯಡಿಯೂರಪ್ಪ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದರು. ಆದರೆ ಈಗ ಸಿಎಂ ಸಿದ್ದರಾಮಯ್ಯನವರು ಖೊಟ್ಟಿತನ ಮಾಡುತ್ತಿzರೆ ಎಂದು ದೂರಿದರು.
ಗೋಷ್ಠಿಯಲ್ಲಿ ಮಂಜುನಾಥ್ ಎನ್.ಜಿ .ನಾಗರಾಜ್, ಕೆ.ವಿ. ಅಣ್ಣಪ್ಪ ಇನ್ನಿತರರಿದ್ದರು.