ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮಾಜಿ ಸಂಸದ ಆಯ್ನೂರ್ ಹೇಳಿಕೆ ಖಂಡನೀಯ: ಬಿವೈಆರ್

Share Below Link

ಶಿವಮೊಗ್ಗ : ರಾಜ್ಯದಲ್ಲಿ ಕಾಂಗ್ರೆಸ್‌ಗೆ ೧೩೬ ಸ್ಥಾನವನ್ನು ಜನ ನೀಡಿ ಆರ್ಶೀವದಿಸಿzರೆ. ಈಗ ಅದೇ ಮತದಾರ ಕಾಂಗ್ರೆಸ್‌ನ ೧೪ ತಿಂಗಳ ಆಡಳಿತ ನೋಡಿ ಶಾಪ ಹಾಕುತ್ತಿzರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿzರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮೂಡ ಹಗರಣ, ವಾಲ್ಮೀಕಿ ನಿಗಮದ ಹಗರಣ ಹೀಗೆ ಅನೇಕ ಹಗರಣಗಳು ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿದೆ. ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಗೆ ಬೇಸತ್ತು ಸಬ್‌ಇನ್ಸ್‌ಫೆಕ್ಟರ್ ಒಬ್ಬರು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡರು. ಇದರ ನಡುವೆ ಮಾಜಿ ಸಂಸದ ಆಯನೂರು ಮಂಜುನಾಥ್, ನಮ್ಮ ಕುಟುಂಬದ ಬಗ್ಗೆ ಸುಳ್ಳು ಆರೋಪ ಮಾಡುತ್ತ ನೂರು ಸುಳ್ಳು ಹೇಳಿ, ಸುಳ್ಳನ್ನು ಸತ್ಯವನ್ನಾಗಿಸಲು ಹೊರಟಿರುವುದು ವಿಷಾದನೀಯ ಎಂದರು.


ನಮ್ಮಕುಟುಂಬ ಆಸ್ಪತ್ರೆಗೆ ಸೇರಿದ ಜಗವನ್ನು ಕೆಐಡಿಬಿಯ ಎ ನಿಯಮವಳಿಗಳ ಪ್ರಕಾರವೇ ಪಡೆದುಕೊಂಡಿದೆ ಮತ್ತು ನಮ್ಮ ಸಂಬಂಧಿಕರು ರೈತರಿಂದ ಆ ಜಗ ವನ್ನು ಖರೀದಿಸಿದ್ದು ಕೂಡ ನಿಯಮವಳಿಗಳ ಪ್ರಕಾರವೇ ಆಗಿದೆ. ಅದಕ್ಕೆ ಸೂಕ್ತ ದಾಖಲೆ ತೋರಿಸಿದ ಬಿವೈಆರ್, ಮಾಜಿ ಸಂಸದರು, ಬಿಜೆಪಿಯಲ್ಲಿzಗ ಕಾಂಗ್ರೆಸ್‌ನ ಜಿ ಮಂತ್ರಿ ಮಧು ಬಂಗಾರಪ್ಪ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬಗ್ಗೆ ಮಾಡಿದ ಟೀಕೆಗಳನ್ನು ಜಿಯ ಜನತೆ ನೋಡಿzರೆ. ಆಗ ಅವರು ಬಳಸಿದ ಶಬ್ದಗಳು ಕೂಡ ಹೇಳಲು ನಾಚಿಕೆ ಯಾಗುತ್ತದೆ. ಈಗ ಅದೇ ನಾಯಕರು ನಮ್ಮ ಕುಟುಂಬದ ಬಗ್ಗೆ ಸುಳ್ಳು ಟೀಕೆಗಳನ್ನು ಮಾಡುವುದು ಖಂಡನೀಯ ನಾವು ಸರ್ಕಾರದ ಕಾನೂನುಗಳಿಗೆ ಬದ್ಧವಾಗಿ ವ್ಯವಹಾರವನ್ನು ಮಾಡಿzವೆ. ಮೂಡ ಹಗರಣಕ್ಕೂ ನಮ್ಮ ಆಸ್ತಿಗು ಹೋಲಿಕೆ ಮಾಡುವುದೇ ತಪ್ಪುಎಂದರು.
ಸುಳ್ಳು ಆರೋಪ ಮಾಡುವು ದನ್ನು ಮೊದಲು ನಿಲ್ಲಿಸಲಿ, ಅವರ ವ್ಯಕ್ತಿತ್ವಕ್ಕೆ ಅದು ಶೋಭೆ ತರುವುದಿಲ್ಲ. ಕಾಂಗ್ರೆಸ್ ಭ್ರಷ್ಟಚಾರದ ವಿರುದ್ಧ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ರಾಜ್ಯದ ಜನರ ಗಮನ ಸೆಳೆಯಲು ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಕ್ಷದ ವತಿಯಿಂದ ಪಾದಯಾತ್ರೆ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಾವು ಹಿಂದೂಗಳು ಸ್ವತಂತ್ರ್ಯಾವಾಗಿ ಹಬ್ಬ ಆಚರಿಸಲು ಸರ್ಕಾರ ನೂರಾರು ಷರತ್ತುಗಳನ್ನು ಹಾಕುತ್ತದೆ. ಒಂದು ವರ್ಗವನ್ನು ಓಲೈಕೆ ಮಾಡುವ ಪ್ರಯತ್ನ ಮಾಡುತ್ತ ಬಂದಿದೆ. ಸಣ್ಣಕಿಡಿ ದೊಡ್ಡದಾಗಿ ಹತ್ತುವ ಮೊದಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ, ಹಬ್ಬ ಆಚರಣೆಗೆ ಅವಕಾಶ ನೀಡಲಿ ಎಂದರು.
ಮಾಜಿ ಎಂಎಲ್‌ಸಿ ಎಸ್. ರುದ್ರೇಗೌಡರು ಮಾತನಾಡಿ, ಆಯನೂರು ಮಂಜುನಾಥ್ ಆರೋಪಕ್ಕೆ ಸಂಸದರು ಉತ್ತರ ನೀಡಿzರೆ. ೨೦೧೧ರ ಎಂಪಿ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಹೈಕಮಾಂಡ್ ಆಯ್ಕೆ ಯನ್ನು ಪಕ್ಷ ಗೌರವಿಸಿ ಕೆಲಸ ಮಾಡಿದೆ ಎಂದರು.
ಶಾಸಕ ಚನ್ನಬಸಪ್ಪ ಮಾತನಾಡಿ, ಸರ್ಕಾರ ಹಿಂದೂ ಸಮಾಜದ ಮೇಲೆ ಗದಪ್ರಹಾರ ಮಾಡುತ್ತ ಬಂದಿದೆ. ಮಸೀದಿ ಯಿಂದ ಕಲ್ಲುಗಳು ತೋರಾಡಿದ್ದನ್ನು ಪೊಲೀಸರೇ ನೋಡಿzರೆ. ಕೈಯಲ್ಲಿ ತಲವಾರು ಹಿಡಿದು ಬೆದರಿಸಿದರೆ ಹಿಂದೂ ಸಮಾಜ ಹೆದರಲ್ಲ, ನಮ್ಮ ಎ ದೇವತೆಗಳ ಕೈಯಲ್ಲೂ ದುಷ್ಟರ ಸಂಹಾರಕ್ಕಾಗಿ ಆಯುಧ ಗಳು ಇರುವುದನ್ನು ನಾವೆಲ್ಲ ನೋಡಿzವೆ. ಗೃಹ ಸಚಿವರು, ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳದೆ ಸೂಕ್ತ ಕ್ರಮ ಕೈಗೊಳ್ಳಲಿ. ಜಿಯ ಎ ಮೆರವಣಿಗೆಗಳು ಶಾಂತಿಯುತ ವಾಗಿ ನಡೆಯುತ್ತವೆ ಆತಂಕ ಬೇಡ ಎಂದರು.
ಪ್ರಮುಖರಾದ ಶಿವರಾಜ್, ಬಿ.ಕೆ.ಶ್ರೀನಾಥ್, ಹರಿಕೃಷ್ಣ, ವಿಜಯೇಂದ್ರ, ಅಣ್ಣಪ್ಪ, ಚಂದ್ರಶೇಖರ್, ಶ್ರೀನಾಗ್, ಮಾಲತೇಶ್, ಬಸವರಾಜ್ ಉಪಸ್ಥಿತರಿದ್ದರು.