ಒಕ್ಕಲೆಬ್ಬಿಸುತ್ತಿರುವ ಅಧಿಕಾರಿಗಳು ಮತ್ತು ಸಚಿವರ ವಿರುದ್ಧ ಕಾನೂನು ಭಂಗ ಚಳುವಳಿ…
ಶಿವಮೊಗ್ಗ (ಹೊಸನಾವಿಕ): ಮುಳುಗಡೆ ಸಂತ್ರಸ್ಥರನ್ನು ಕಡೆಗಾ ಣಿಸಿದ ಸಾಗುವಳಿದಾರರಿಗೆ ಕಿರು ಕುಳ ನೀಡಲು ಕಾರಣವಾಗಿರುವ ಅರಣ್ಯ ಸಚಿವ ರಾಕ್ಷಸನಾದರೆ, ಜಿಲ್ಲಾ ಉಸ್ತುವಾರಿ ಸಚಿವ ಸೊನ್ನೆ ಯಾಗಿದ್ದಾರೆ ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾ ಲಕ ತಿ.ನಾ.ಶ್ರೀನಿವಾಸ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾ ಗಲೂ ಸಾಗುವಳಿದಾರರ ಮತ್ತು ಮುಳುಗಡೆ ಸಂತ್ರಸ್ಥರ ಸಮಸ್ಯೆ ಗಳು ಬಗೆಹರಿಯಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊ ದಲೇ ಪ್ರಣಾಳಿಕೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿತ್ತು. ಆದರೂ ಕೂಡ ಬಗೆಹರಿಸಲಿಲ್ಲ. ಮಾತು ಮರೆತ ಸರ್ಕಾರದ ವಿರು ದ್ಧ ಹಾಗೂ ಬಗರ್ ಹುಕುಂದಾ ರರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಚಿವರ ವಿರುದ್ಧ ಕಾನೂನು ಭಂಗ ಚಳುವಳಿ ನಡೆಸಲಿದ್ದೇವೆ ಎಂದರು.
ಶಿವಮೊಗ್ಗ ತಾಲ್ಲೂಕಿನ ಹುಬ್ಳೆ ಬೈಲು ಕಾಚಿನ ಕಟ್ಟೆ ಹಾಲು ಲಕ್ಕ ವಳ್ಳಿ, ಎರಗನಾಳು, ತೋಟದಕೆರೆ ಕಡೆಕಲ್ಲು ಕುಸ್ಕೂರು ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಈಗಾ ಗಲೇ ಅರಣ್ಯ ಇಲಾಖೆ ನೋಟೀ ಸ್ ಕೊಡುತ್ತಿದೆ. ಆದರೆ ಸರ್ಕಾರ ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಕಂದಾಯ ಇಲಾಖೆ ಯವರು ಕೊಟ್ಟಿರುವ ಹಕ್ಕುಪತ್ರ ಗಳಿಗೆ ಬೆಲೆ ಇಲ್ಲ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಅರಣ್ಯ ಮಂತ್ರಿಗೆ ಮಲೆನಾಡಿನ ಸಮಸ್ಯೆ ಗಳ ಅರಿವು ಸ್ವಲ್ಪವೂ ಇಲ್ಲವಾಗಿದೆ. ರೈತರ ಪಾಲಿಗೆ ಅವರು ರಾಕ್ಷಸ ನಂತೆ ಕಾಣುತ್ತಿ ದ್ದಾರೆ. ಹಾಗೆಯೇ ಮಲೆನಾಡಿಗರ ಸಮಸ್ಯೆಗಳ ಬಗ್ಗೆ ಗಂಧವೂ ಗೊತ್ತಿಲ್ಲದ ಜಿಲ್ಲಾ ಉಸ್ತು ವಾರಿ ಸಚಿವ ಮಧು ಬಂಗಾರಪ್ಪ ಸೊನ್ನೆಯಾಗಿದ್ದಾರೆ ಎಂದು ಟೀಕಿಸಿ ದರು.ಭದ್ರಾ, ತುಂಗಾ, ಶರಾವತಿ ಮುಂತಾದ ಸಂತ್ರಸ್ಥರು ಜಮೀನು ಕಳೆದುಕೊಂಡಿದ್ದಾರೆ. ೪೦ ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಕಂದಾಯ ಭೂಮಿಯೇ ಆಗಿದ್ದು, ರೈತರ ಹೆಸರಿನಲ್ಲಿ ದಾಖಲೆಗಳು ಇದ್ದರೂ ಕೂಡ ಅರಣ್ಯ ಇಲಾಖೆ ಅವುಗಳನ್ನೆಲ್ಲ ರದ್ದುಮಾಡಿ ಈಗ ರೈತರಿಗೆ ನೋಟೀಸ್ ಕೊಡುತ್ತಿ ದ್ದಾರೆ. ರಾಜ್ಯ ಸರ್ಕಾರ ಮಾತ್ರ ರೈತರನ್ನು ಒಕ್ಕಲೆಬ್ಬಿಸುತ್ತಿದ್ದರು ಸುಮ್ಮನಿದೆ ಎಂದು ದೂರಿದ ಅವರು, ಆದಷ್ಟು ಬೇಗ ಮಲೆನಾ ಡು ರೈತರ ಸಮಸ್ಯೆಗಳನ್ನು ಬಗೆ ಹರಿಸಬೇಕು. ಒಕ್ಕಲೆಬ್ಬಿಸುವುದನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ದರು.
ಪ್ರಮುಖರಾದ ಎಸ್.ಟಿ. ಕೃಷ್ಣೇಗೌಡ, ಎಂ.ಬಿ.ಕೃಷ್ಣಪ್ಪ, ಮಹಾದೇವ ಇನ್ನಿತರರಿದ್ದರು.