ಸರ್ಕಾರದ ವಿರುದ್ಧ ಜೈಲ್‌ಬರೋ ಹೋರಾಟ: ಈಶ್ವರಪ್ಪ ಎಚ್ಚರಿಕೆ…
ಶಿವಮೊಗ್ಗ(ಹೊಸನಾವಿಕ): ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದಿದ್ದರೆ ಜೈಲ್‌ಬರೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರ ಭಕ್ತರ ಬಳಗದ ಕೆ.ಎಸ್. ಈಶ್ವರಪ್ಪ ಅವರು ಸುದ್ದಿಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದರು.
ತಳ ಸಮುದಾಯದ ಅಭಿ ವೃದ್ಧಿಗೆ ನಿಗದಿಪಡಿಸಿದ್ದ ಹಣದ ದುರುಪಯೋಗ ವನ್ನು ಬಯಲಿ ಗೆಳೆದ ಅಧಿಕಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದು ಅವರ ಕುಟುಂಬ ತೀವ್ರ ಸಂಕಷ್ಟದಲ್ಲಿದ್ದು ರಾಜ್ಯ ಸರ್ಕಾರ ತಾನು ಘೋಷಿಸಿದಂತೆ ೨೫ ಲಕ್ಷ ರೂ. ಹಣವನ್ನು ಬಿಡು ಗಡೆ ಮಾಡಬೇಕು ಎಂದು ಒತ್ತಾ ಯಿಸಿದರು.
ಸಮಾಜ ಕಲ್ಯಾಣ ಸಚಿವ ಮಹದೇವಪ್ಪರೊಂದಿಗೆ ಈ ಹಿಂದೆ ನಾನು ಮಾತುಕತೆ ನಡೆಸಿದ್ದೆ, ಅವರು ಮುಖ್ಯಮಂತ್ರಿಗಳೊಂ ದಿಗೆ ಮಾತುಕತೆ ನಡೆಸಿ ೧೦ ದಿನ ದೊಳಗೆ ಹಣ ಬಿಡುಗಡೆ ಮಾಡು ವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಹಣ ಬಿಡು ಗಡೆ ಮಾಡಿಲ್ಲ. ನಾವು ಇನ್ನೂ ಮೂರ್ನಾಲ್ಕು ದಿನ ಕಾಯುತ್ತೇವೆ ನಂತರ ಅವರು ಹಣ ಬಿಡುಗಡೆ ಮಾಡದಿದ್ದರೆ ೫ಲಕ್ಷ ಹಣ ವನ್ನು ಕೂಡಿಸಿ ಚಂದ್ರಶೇಖರ್ ಕುಟುಂಬಕ್ಕೆ ನೀಡುತ್ತೇವೆ. ೨೦ನೇ ತಾರೀಖಿನ ನಂತರ ಸರ್ಕಾರ ಹಣ ಬಿಡುಗಡೆ ಮಾಡದಿದ್ದರೆ ಜೈಲ್ ಬರೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರಭಕ್ತರ ಬಳಗದ ವತಿ ಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ನಮ್ಮನ್ನ ಬಂಧಿಸಿ ಠಾಣೆಗೆ ಕರೆದು ಕೊಂಡು ಹೋಗಿ ನಂತರ ಬಿಡು ಗಡೆ ಮಾಡಿದರೆ ನಾವು ಅದನ್ನು ಒಪ್ಪುವುದಿಲ್ಲ. ಜೈಲಿಗೆ ಹಾಕಬೇ ಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಸಿಎಂ ವಿರುದ್ಧ ಪ್ರಾಸಿಕ್ಯೂ ಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವು ದನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿದ್ದು ಇಂದು ಅದರ ತೀರ್ಪು ಹೊರಬರುವ ಸಾಧ್ಯತೆ ಇದೆ. ಅವರ ವಿರುದ್ಧ ತೀರ್ಪು ಬಂದರೆ ನೈತಿಕವಾಗಿ ರಾಜೀನಾಮೆ ಕೊಟ್ಟು ಈ ನೆಲದ ಕಾನೂನನ್ನ ಗೌರವಿ ಸಬೇಕಾಗುತ್ತದೆ. ಆದರೆ ಯಾವು ದೇ ಕಾರಣಕ್ಕೂ ಅವರು ರಾಜೀ ನಾಮೆ ಕೊಡುವುದಿಲ್ಲ ಎಂದಿ ದ್ದಾರೆ. ಇದು ಸರಿಯಲ್ಲ ನ್ಯಾ ಯವನ್ನ ಗೌರವಿಸದಂತಾಗು ವುದಿಲ್ಲ ಎಂದರು.
ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ಸಂಪು ಟದ ಸಚಿವ ಜರ್ಜ್ ವಿರುದ್ಧ ಆರೋಪ ಕೇಳಿ ಬಂದಾಗ ಅವರ ರಾಜೀನಾಮೆಯನ್ನು ಪಡೆಯಲಾ ಗಿತ್ತು. ನಾನು ಸಚಿವನಾಗಿದ್ದಾಗ ನನ್ನ ಮೇಲೆ ಆರೋಪ ಬಂದಾ ಗಲೂ ಸಹ ನಾನು ರಾಜೀನಾಮೆ ನೀಡಿ ದ್ದೆ. ನಮ್ಮಿಬ್ಬರಿಗೆ ಒಂದು ಕಾನೂನು ಸಿದ್ದರಾಮಯ್ಯನವರಿಗೆ ಇನ್ನೊಂ ದು ಕಾನೂನೇ ಎಂದು ಪ್ರಶ್ನಿಸಿದ ಅವರು, ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಆದ್ದರಿಂದ ಅವರು ರಾಜೀನಾಮೆ ನೀಡಬೇಕಾ ಗುತ್ತದೆ ಆರೋಪ ಮುಕ್ತರಾಗಿ ಹೊರ ಬರಲಿ ಎಂಬುದು ನನ್ನ ಆಶಯ ಎಂದ ಈಶ್ವರಪ್ಪ ಅವರು, ತಾಯಿ ಚಾಮುಂಡೇಶ್ವರಿ ಆ ಬಗ್ಗೆ ಅವರಿಗೆ ಆಶೀರ್ವದಿಸಲಿ ಎಂಬು ದು ಕೂಡ ನನ್ನ ಬಯಕೆಯಾಗಿದೆ ಆದರೆ ನ್ಯಾ ಯಾಲಯದ ತೀರ್ಪಿಗೆ ಗೌರವ ಕೊಡಬೇಕಾಗುತ್ತದೆ ಎಂದರು.
ಮೂಡ ಹಗರಣ ಬೆಳಕಿಗೆ ಬಂದ ನಂತರ ೨೫೨ . ೧೦ ಎಕರೆ ಜಮೀನಿಗೆ ೮೪೮ ನಿವೇಶನಗಳನ್ನ ಒಂದೇ ದಿನ ಅಂದಿನ ಆಯುಕ್ತರು ಮಂಜೂರು ಮಾಡಿದ್ದಾರೆ ಎಂಬ ಮಾಹಿತಿ ಇದೀಗ ಹೊರ ಬರುತ್ತಿ ದೆ. ಅಭಿವೃದ್ಧಿ ಪ್ರಾಧಿಕಾರಗಳ ಮು ಖಾಂತರ ಹಣ ಲೂಟಿ ಹೊಡೆ ಯಲು ರಾಜ್ಯ ಸರ್ಕಾರ ನಿಶ್ಚಯಿಸಿ ದೆಯೇ ಎಂದು ಖಾರವಾಗಿ ಪ್ರಶ್ನಿ ಸಿದರು. ರಾಜ್ಯದ ಎಲ್ಲಾ ನಗರಾ ಭಿವೃದ್ಧಿ ಪ್ರಾಧಿಕಾರಗಳ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ದರು.
ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಳಕ್ಕೆ, ಮೈಲಾರ ದೇವಸ್ಥಾನಕ್ಕೆ ಭೇಟಿ ನೀಡುವುದು ಅತ್ಯಂತ ಒಳ್ಳೆಯ ಬೆಳವಣಿಗೆ ಆದರೆ ಇದೇ ಮುಖ್ಯಮಂತ್ರಿಗಳು ಕುಂಕುಮ ಹಚ್ಚಲು ಬಂದರೆ ಕೇಸರಿ ಪೇಟ ಕಟ್ಟಲು ಬಂದರೆ ಮೈಮೇಲೆ ದೇವರು ಬಂದಂತೆ ಆಡುತ್ತಿದ್ದರು ಎಂದು ವ್ಯಂಗ್ಯವಾಡಿದ ಅವರು, ಮುಸ್ಲಿಂ ಮತಗಳನ್ನು ಓಲೈಸುವುದ ಕ್ಕಾಗಿ ಅವರ ಪರವಾಗಿ ನಿಯಮ ಗಳನ್ನು ರೂಪಿಸುವುದು ಆ ಸಮು ದಾಯದ ಪರವಾದ ಹೇಳಿಕೆಗ ಳನ್ನು ಕೊಡುವುದು, ಅವರಂತೆ ಟೋಪಿ ಹಾಕುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಲ್ಲವೂ ಕುರ್ಚಿ ಉಳಿಸಿಕೊಳ್ಳು ವುದಕ್ಕಾಗಿ ಎಂದು ಟೀಕಿಸಿದರು.
ಸಾರ್ವಜನಿಕ ಗಣಪತಿ ಕಾರ್‍ಯ ಕ್ರಮಗಳಲ್ಲಿ ನಡೆಯುತ್ತಿರುವ ಅನ್ನಸಂತರ್ಪಣೆ ಕಾರ್ಯಕ್ರಮ ದಲ್ಲಿ ವಿತರಿಸುವ ಆಹಾರವನ್ನು ಆಹಾರ ಇಲಾಖೆಯಿಂದ ಪರೀಕ್ಷಿಸಿ ವಿತರಿಸಬೇಕು ಎಂಬ ರಾಜ್ಯ ಸರ್ಕಾ ರದ ಆದೇಶ ಸಂಪೂರ್ಣ ಅವೈ ಜನಿಕವಾಗಿದ್ದು, ಭಕ್ತರು ಪ್ರಸಾz ವನ್ನು ಪ್ರಸಾದವಾಗಿಯೇ ಸ್ವೀಕರಿ ಸುತ್ತಾರೆ. ಆದ್ದರಿಂದ ಅವರುಗಳಿಗೆ ಏನೂ ಆಗುವುದಿಲ್ಲ ಇಂತಹ ನಿಯಮಗಳನ್ನ ಮಾಡುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಹೇಳಿದರು.
ಪ್ರಮುಖರಾದ ಸುವರ್ಣ ಶಂಕರ್, ಎಂ ಶಂಕರ್, ಬಾಲು, ಶಿವು ಶಂಕರ್ ನಾಯಕ್, ಚನ್ನಬ ಸಪ್ಪ, ನಾಗರಾಜ್ ಜಧವ್ ಉಪಸ್ಥಿತರಿದ್ದರು