ಸೆ.೪: ಕೊಳಲೆ ಕೆ.ಎನ್. ರುದ್ರಪ್ಪ ಮತ್ತು ಮಲೆನಾಡು ಕಥಾನಕ ಪುಸ್ತಕ ಬಿಡುಗಡೆ
ಶಿವಮೊಗ್ಗ: ಕೊಳಲೆ ಕೆ.ಎನ್. ರುದ್ರಪ್ಪ ಮತ್ತು ಮಲೆನಾಡು ಕಥಾನಕ ಪುಸ್ತಕ ಬಿಡುಗಡೆ ಸಮಾರಂಭ ಸೆ. ೪ರ ಬುಧವಾರ ಸಂಜೆ ೫ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಪುಸ್ತಕದ ಸಹ ಸಂಪಾದಕ ಡಾ. ಕಲೀಂಉಲ್ಲಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಬಿ. ಎಲ್. ಶಂಕರ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಡಿವಿಎಸ್ ಸಮಿತಿ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ, ಮತ್ತು ಅವರ ಪತ್ನಿ ಎ.ಬಿ. ಸರೋಜ ಕೊಳಲೆ ಉಪಸ್ಥಿತಿ ಇದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಪುಸ್ತಕದ ಕುರಿತು ಸಂಪಾದಕ ಡಾ.ಹೆಚ್.ಟಿ. ಕೃಷ್ಣಮೂರ್ತಿ ಮಾತನಾಡಲಿದ್ದು, ಡಿವಿಎಸ್ ಕಾರ್ಯದರ್ಶಿ ಎಸ್. ರಾಜಶೇಖರ್ ಉಪಸ್ಥಿತರಿರುತ್ತಾರೆ. ಖ್ಯಾತ ಹಿಂದೂಸ್ತಾನಿ ಗಾಯಕ ವಿ. ನೌಷದ್ ಹರ್ಲಾಪುರ್ ಮತ್ತು ವಿ. ನಿಷಾದ್ ಹರ್ಲಾಪುರ್ ಅವರಿಂದ ಸಂಜೆ ೫ರಿಂದ ೬ ರವರೆಗೆ ಸಂಗೀತ ಸಂಜೆ ನಡೆಯಲಿದೆ ಎಂದರು.
ಕೊಳಲೆ ಪುಸ್ತಕ ಕೆ.ಎನ್. ರುದ್ರಪ್ಪ ಅವರ ಬದುಕಿನ ವಿವರ ಸಾಧನೆಗಳ ಮತ್ತು ಕಾರ್ಯಕ್ಷೇತ್ರವಾದ ಮಲೆನಾಡಿನ ಭೌಗೋಳಿಕ, ಸಾಂಸ್ಕೃತಿಕ, ರಾಜಕೀಯ, ವಾಣಿಜ್ಯ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸಂಕತನಗಳ ಕಥಾನಕವಾಗಿದೆ ಎಂದರು.
ಎಲ್ಲಾ ಸನ್ಮಿತ್ರರು ಈ ಕಾರ್ಯಕ್ರಮಕ್ಕೆ ಆಗಮಿಸಿ ಸಹಕರಿಸಬೇಕೆಂದು ಪುಸ್ತಕ ಬಿಡುಗಡೆ ಸಮಾರಂಭ ಸಮಿತಿಯಿಂದ ಮನವಿ ಮಾಡಲಾಗಿದೆ.
ಡಿವಿಎಸ್ ಕಾರ್ಯದರ್ಶಿ ಎಸ್. ರಾಜಶೇಖರ್, ಪ್ರಾಂಶುಪಾಲ ಡಾ. ಎಂ. ವೆಂಕಟೇಶ್, ರಾಜಶೇಖರ್, ಡಿ. ಮಂಜುನಾಥ್ ಇದ್ದರು.