ನ. ೪ ರಿಂದ ಶೃಂಗೇರಿಯಿಂದ ಕಿಷ್ಕಿಂದೆವರೆಗೆ ನಿರ್ಮಲ ತುಂಗಭದ್ರ ಅಭಿಯಾನ…
ಶಿವಮೊಗ್ಗ: ರಾಷ್ಟ್ರೀಯ ಸ್ವಾಭಿಮಾನ ಆಂದೋ ಲನ ಮತ್ತು ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಲ ತುಂಗಭದ್ರ ಅಭಿಯಾ ನವು ನ.೪ರಿಂದ ಶೃಂಗೇರಿಯಿಂದ ಗಂಗಾವತಿ ಸಮೀಪದ ಕಿಷ್ಕಿಂದೆ ತನಕ ಬೃಹತ್ ಜಲಜಗೃತಿ-ಜನ ಜಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ತಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ ಅವರು ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ನಿರ್ಮಲ ತುಂಗಾ ಅಭಿಯಾ ನವು ನಗರದಲ್ಲಿ ತುಂಗಾ ನದಿಗೆ ನೇರವಾಗಿ ಸೇರುತ್ತಿದ್ದ ನಗರದ ತ್ಯಾಜ್ಯ ನೀರಿನ ಸಮಸ್ಯೆಗೆ ಸಂಪೂ ರ್ಣ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿ ನಿರಂತg ಜಿಲ್ಲಾಡಳಿತ, ಮಹಾ ನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳೊಂದಿಗೆ ಅನೇಕ ಸಭೆ ನಡೆಸಿ ಸಮಸ್ಯೆ ಪರಿಹಾ ರದ ದಿಕ್ಕಿನಲ್ಲಿ ಒಂದಿಷ್ಟು ಪ್ರಗತಿಯನ್ನು ಕಂಡುಕೊಳ್ಳಲಾಗಿದೆ ಎಂದರು.
ತುಂಗಾ ನದಿಯು ಶೃಂಗೇರಿ ಸಮೀಪದ ಗಂಗಡಿ ಕಲ್ಲು ಪ್ರದೇ ಶದಲ್ಲಿ ಹುಟ್ಟಿ, ಪ್ರಮುಖ ಪಟ್ಟಣ ಗಳಾದ ಶೃಂಗೇರಿ, ತೀರ್ಥಹಳ್ಳಿ ಮುಂತಾದ ಪಟ್ಟಣಗಳಲ್ಲಿ ಹರಿದು ಬರುವಾಗ ವಸತಿ ಪ್ರದೇಶದ ಮಲೀನ ನೀರು ಯಾವುದೇ ನೀರು ಶುದ್ದೀಕರಣ ಘಟಕ ವ್ಯವಸ್ಥೆ ಇಲ್ಲದೆ ನೇರ ನದಿಗೆ ಕಲುಷಿತ ನೀರು ಸೇರು ತ್ತಿರುವುದು ಶಿವಮೊಗ್ಗ ಭಾಗದವರಿಗೆ ದೊಡ್ಡ ಸಮಸ್ಯೆ ಯಾಗಿದೆ. ಅಂತೆಯೇ ಶಿವಮೊಗ್ಗದಿಂದ ಮುಂದಿನ ಪಟ್ಟಣ,ಗ್ರಾಮಗಳಲ್ಲೂ ತ್ಯಾಜ್ಯ ನೀರು ಸಂಸ್ಕರಣ ಘಟಕಗಳು ಇಲ್ಲದೆ ತುಂಗ ಭದ್ರಾ ನದಿಗೆ ನೇರವಾಗಿ ಸೇರುತ್ತಿರುವುದು ಆ ಭಾಗದ ಜನರು ನದಿಯ ನೀರನ್ನು ನೇರವಾಗಿ ಬಳಸಲು ಆಗದಂತೆ ಮಾಡಿವೆ. ಈ ಹಿಂದೆ ನಮ್ಮ ಸಂಸ್ಥೆಯು ತುಂಗಾ ನದಿಯ ನೀರು ಮತ್ತು ಕುಡಿಯುವ ಪೂರೈಕೆ ನೀರನ್ನು ಬೆಂಗಳೂರಿನ ಅತ್ಯಾಧುನಿಕ ಲ್ಯಾಬೋರೇಟರಿಯಲ್ಲಿ ಪರೀಕ್ಷೆಗೆ ನೀಡಿದಾಗ ತುಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ಅಂಶ ನಿಜಕ್ಕೂ ಆಘಾತಕಾರಿ ಎಂದರು.
ಈ ನಿಟ್ಟಿನಲ್ಲಿ ನಮ್ಮ ತಂಡವು ಸರ್ಕಾರದ ಹಾಗೂ ಸಾರ್ವಜನಿಕರ ಗಮನ ಸೆಳೆಯುವುದಕ್ಕಾಗಿ ಕಲು ಷಿತ ತುಂಗಭದ್ರೆಯನ್ನು ನಿರ್ಮಲ ತುಂಗಭದ್ರೆಯನ್ನಾಗಿಸುವ ಸಂಕಲ್ಪ ದೊಂದಿಗೆ ೪೦೦ ಕಿಮೀ. ಮಾರ್ಗದ ಬೃಹತ್ ಪಾದಯಾತ್ರೆಯನ್ನು ಹಮಿ ಕೊಳ್ಳಲಾಗಿದೆ ಎಂದರು.
ಈ ಪಾದಯಾತ್ರೆಯಲ್ಲಿ ಸಮಾಜದ ಎಲ್ಲಾ ಸ್ತರದ ಜನರು, ಸಂಘ- ಸಂಸ್ಥೆಗಳು, ಪರಿಸರಾಸಕ್ತರು, ತುಂಗಭದ್ರ ನೀರಿನ ಬಳಕೆದಾರರು ಅಭಿಯಾನದ ಭಾಗಿದಾರ ರಾಗಬೇ ಕೆಂದು ನಮ್ಮ ಅಪೇಕ್ಷೆ. ಈಗಾಗಲೇ ಅನೇಕ ಕಡೆ ಶಾಲಾ ಕಾಲೇಜು, ಮಠ ಮಂದಿರಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರನ್ನು ಭೇಟಿ ಮಾಡಿದಾಗ ಉತ್ತಮ ಪ್ರತಿಕ್ರಿಯೆಯೂ ಬಂದಿದೆ.
ಶೃಂಗೇರಿ, ಹರಿಹರಪುರ, ಬಾಳಗಾರು, ಕೂಡಲಿ, ಶಿವಮೊಗ್ಗ, ಹೊನ್ನಾಳಿ, ಹರಿಹರದ ವಿವಿಧ ಮಠಾ ಧೀಶರು ಈ ಪಾದಯಾತ್ರೆಗೆ ಬೆಂಬಲ ಸೂಚಿಸಿ ತಾವು ಪಾದ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಗೌರಿಗದ್ದೆ ಶ್ರೀ ವಿನಯ್ ಗುರೂಜಿ ಯವರು ಪರಿಸರದ ಈ ಕಾಳಜಿಯ ಕೆಲಸದಲ್ಲಿ ತಾವು ಭಾಗಿಯಾಗು ವುದಲ್ಲದೆ ತಮ್ಮ ಆಶ್ರಮದ ೨೦೦ ಕ್ಕೂ ಹೆಚ್ಚು ಪರಿಸರಾಸಕ್ತರು ಮತ್ತು ಹೊನ್ನಾಳಿಯ ಶ್ರೀ ರಾಘವೇಂದ್ರ ಮಠ ಹಾಗೂ ಹಿರೇಕಲ್ ಮಠದ ಶ್ರೀಗಳು ತಮ್ಮ ಭಾಗದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಗಳು, ಜನರು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಾರೆ ಎಂದರು.
ಪ್ರಮುಖರಾದ ಗಿರೀಶ್ ಪಟೇಲ್, ಅಶೋಕ್ ಕುಮಾರ್, ಎಂ. ಶಂಕರ್, ದಿನೇಶ್ ಶೆಟ್, ಬಾಲಕೃಷ್ಣ ನಾಯ್ಡು, ತ್ಯಾಗರಾಜ್, ಶ್ರೀಧರ್ ಇದ್ದರು.