ಸಿಎಂ ವಿರುದ್ಧ ಪಾದಯಾತ್ರೆ ವಿರೋಧಿಸಿ ಅಹಿಂದ ಒಕ್ಕೂಟದಿಂದ ಮುಷ್ಕರ…
ಶಿವಮೊಗ್ಗ: ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯರನ್ನು ದುರ್ಬಲ ಗೊಳಿಸುವ ಕುತಂತ್ರ ಖಂಡಿಸಿ ಇಂದು ಡಿಸಿ ಕಛೇರಿ ಎದುರು ಹಿಂದುಳಿದ ವರ್ಗಗಳ ಒಕ್ಕೂಟ ಅಹಿಂದ ಒಕ್ಕೂಟ ಜನಪರ ಸಂಘಟನೆಗಳ ಒಕ್ಕೂಟ ಶೋಷಿತ ಸಮುದಾಯಗಳ ಒಕ್ಕೂಟದಿಂದ ಸಾಂಕೇತಿಕ ಉಪವಾಸ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು.
ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮೂಡ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಆದರೂ ಮೈಸೂರು ಪಾದಯಾತ್ರೆ ನಡೆಸುತ್ತಿರುವುದು ಸರ್ಕಾರ ಬೀಳಿಸುವ ಹುನ್ನಾರ ಎಂದು ಧರಣಿ ನಿರತರು ಆರೋಪಿಸಿದರು.
ಸಿದ್ದರಾಮಯ್ಯ ವಿರುದ್ಧದ ಷಡ್ಯಂತರ ಇಲ್ಲಿಗೆ ನಿಲ್ಲಬೇಕು. ಇಲ್ಲದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು. ಶೀಘ್ರದಲ್ಲೇ ರಾಜ್ಯಮಟ್ಟದ ಶೋಷಿತರ ಅಹಿಂದ ಮತ್ತು ಹಿಂದುಳಿದ ವರ್ಗದವರ ಎಚ್ಚರಿಕೆ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು. ಜಿ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಬಿಜಿಪಿ ಮತ್ತು ಜೆಡಿಎಸ್ ವಿರುದ್ಧ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎಸ್ ಪಿ ಶೇಷಾದ್ರಿ, ಪ್ರಮುಖರಾದ ಇಕ್ಕೆರಿ ರಮೇಶ್ ಚಂದ್ರಭೂಪಲ್, ನಾಜೀಮಾ, ಕಲಗೋಡು ರತ್ನಾಕಾರ್, ಎಸ್.ಬಿ.ಆಶೋಕ್ ಕುಮಾರ್, ಮಮತಾ ಸಿಂಗ್, ಸ್ಟೆಲ್ಲಾ ಮಾರ್ಟಿನ್, ಅಫ್ರೀದಿ ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.