ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಡೆಂಗ್ಯೂ: ರಾಜ್ಯ ಸರ್ಕಾರ ವೈಫಲ್ಯತೆ: ಸಚಿವರ ರಾಜೀನಾಮೆಗೆ ದತ್ತಾತ್ರಿ ಆಗ್ರಹ

Share Below Link

ಶಿವಮೊಗ್ಗ: ಡೆಂಗ್ಯೂ ನಿಯಂತ್ರಿಸು ವಲ್ಲಿ ವಿಫಲರಾದ ರಾಜ್ಯ ಸರ್ಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್ ರಾಜೀನಾಮೆ ನೀಡ ಬೇಕೆಂದು ಬಿಜೆಪಿ ಪ್ರಕೋಷ್ಟಗಳ ಸಂಯೋಜಕ ಎಸ್. ದತ್ತಾತ್ರಿ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.
ಡೆಂಗ್ಯೂ ಮಹಾಮಾರಿ ರಾಜ್ಯದಲ್ಲಿ ಕಾಡುತ್ತಿದೆ. ಆರೋಗ್ಯ ಇಲಾಖೆಗೆ ಗೊತ್ತಿದೆ. ಆದರೂ ಪೂರ್ವ ತಯಾರಿ ಮಾಡದ ಪರಿಣಾಮ ಹೆಚ್ಚವಾಗಿದ್ದು, ೧,೦೫ ಲಕ್ಷ ಶಂಕಿತ ಪ್ರಕರಣಗಳಿವೆ. ೪೮೨೭ ಪಾಸಿಟಿವ್, ೭ ಮಂದಿ ಮೃತ ಪಟ್ಟಿದ್ದಾರೆ. ಸಾಗರದ ಆರೋಗ್ಯ ಇಲಾಖೆ ಡಿ ದರ್ಜೆ ನೌಕರ ನಾಗರಾಜ್ ಕೂಡ ಡೆಂಗ್ಯೂಗೆ ಬಲಿಯಾಗಿದ್ದಾರೆ. ಹಾಸನದಲ್ಲಿ ಐದು ಡೆಂಗ್ಯೂ ಪೀಡಿತರು ಮೃತಪಟ್ಟಿದ್ದಾರೆ. ಆದರೂ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಆಂತರಿಕ ಕಚ್ಚಾಟದಲ್ಲಿ ತೊಡಗಿದೆ ಎಂದು ದೂರಿದ ಅವರು, ಡೆಂಗ್ಯೂ ಬಂದರೆ ಎಲಿಸಾ ಪರೀಕ್ಷೆ ಮಾಡಬೇಕು. ಶಿವಮೊಗ್ಗದಲ್ಲಿ ಕೇವಲ ಒಂದು ಕಡೆ ಮಾತ್ರ ಸೌಲಭ್ಯ ಇದೆ. ಇದನ್ನು ತಾಲೂಕು ವ್ಯಾಪ್ತಿಗೆ ವಿಸ್ತರಿಸಬೇಕು. ಜಿಲ್ಲೆಯಲ್ಲಿ ೫೯೨ ಶಂಕಿತ ಪ್ರಕರಣ ಗಳಿದ್ದು, ಝೀಕಾ ವೈರಸ್‌ಗೆ ಒಂದು ಬಲಿಯಾಗಿದ್ದು, ಎರಡು ಪ್ರಕರಣಗಳು ಪಾಸಿಟಿವ್ ಇದೆ ಎಂದರು.
ಸೊಳ್ಳೆಗಳ ಉತ್ಪಾದನಾ ಕೇಂದ್ರ ನಿರ್ಮೂಲನೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಫಾಗಿಂಗ್ ಮಾಡುತ್ತಿಲ್ಲ. ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾತ್ರ ಎಲಿಸಾ ಪರೀಕ್ಷೆ ಅವಕಾಶ ಇದೆ. ಪ್ರತಿದಿನ ೫೦ ಜನರಿಗೆ ಪರೀಕ್ಷೆ ಮಾಡಬಹುದು. ಮತ್ತೊಂದು ಪರೀಕ್ಷಾ ಕೇಂದ್ರ ಆರಂಭ ಮಾಡ ಬೇಕು. ಸರ್ಕಾರಿ ಆಸ್ಪತ್ರೆಯಲ್ಲೂ ೫೦೦ ರೂ. ಪರೀಕ್ಷೆ ಆಗುತ್ತಿದೆ. ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಪರೀಕ್ಷೆ ಮಾಡಬೇಕು. ಬಿಳಿ ರಕ್ತಕಣಗಳ ಪ್ರತ್ಯೇಕ ಮಾಡುವ ವ್ಯವಸ್ಥೆ ತಾಲೂಕು ಕೇಂದ್ರದಲ್ಲಿ ಇಲ್ಲ. ಬಿಪಿಎಲ್ ಕಾರ್ಡ್ ಇದ್ದವರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಪರೀಕ್ಷೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದವರು ಆಗ್ರಹಿಸಿದರು.
ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್ ಇನ್ನಿತರರು ಉಪಸ್ಥಿತರಿದ್ದರು.