ಮಣ್ಣೆತ್ತಿನ ಅಮವಾಸ್ಯೆಯ ಮಹತ್ವ …
ಪ್ರತಿ ವರ್ಷದಂತೆ ಉತ್ತರಾಯಣ ದಕ್ಷಿಣಾಯಣಗಳ ಹೊಸ್ತಿಲಲ್ಲಿ ಬರುವ ಜೇಷ್ಠ ಮಾಸವು ನಮ್ಮ ಸಂಸ್ಕೃತಿಯಲ್ಲಿ ಬಹು ಮುಖ್ಯ ಮಾಸವಾಗಿದೆ. ಫಾಲ್ಗುಣ ಮಾಸವು ಶುಕ್ಲವರ್ಣದ ೞದ್ಯುೞ ಯಂಬ ಆಕಾಶ ತತ್ವದ ಶುರುವಾತು ಆದರೆ, ಜೇಷ್ಠ ಮಾಸವು ಕಷ್ಣ ವರ್ಣದ ೞಭೂೞ ಎಂಬ ಭೂತತ್ವದ ಶುರುವಾತನ್ನು ತರುತ್ತದೆ. ಈ ಮಾಸವು ನಿರ್ಜಲ ಏಕಾದಶಿ ಸೌರ ನರಸಿಂಹ ಜಯಂತಿ, ಭೂಮಿ ಪೂರ್ಣಿಮಾ ಶುಕ್ಲಾದೇವಿ, ಗಂಗಾವತರಣ ಅಷ್ಟಮಿ, ಮೊದಲಾದ ಪವಿತ್ರ ಆಚರಣೆಗಳಿಂದ ಕೂಡಿ ಕೊನೆಗೆ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಮುಗಿಯುವುದು.
ಜೇಷ್ಠ -ಆಷಾಢಗಳು ದುರ್ಗ ಮಾಸವೆಂದೇ ಸಂಪ್ರದಾಯ ಖ್ಯಾತವಾಗಿದೆ. ಆಷಾಢದ ಗಾಳಿ ಮಳೆಗೆ ಮುನ್ನ ಭೂಮಿಯ ಮಣ್ಣನ್ನು ಚಂದ್ರಕಲೆಗಳು ಬೆರೆತು ಫಲವತ್ತಾಗಿಸುತ್ತವೆ, ಅದರ ಸೌಲಭವನ್ನು ಉತ್ತಿ-ಬಿತ್ತಿ ಬೆಳೆ ತಗೆಯುವುದು ಮನುಷ್ಯರ ಕೆಲಸ ಮತ್ತು ಅದರಿಂದಲೇ ಸಮಸ್ತರಿಗೂ ಅನ್ನೋತ್ಪತ್ತಿ. ಈ ತೆರನಾದ ಕೊಂಡಿತಂತು ಪ್ರಕೃತಿಗೂ ಕಾಲಕಾಲಕ್ಕೂ ಭೂಮಿಗೆ ಇದೆ ಎಂಬ ವಿಸ್ಮಯ ವಿಚಾರವನ್ನು ಸಹಸ್ರಾರು ವರ್ಷದ ಹಿಂದೆಯೇ ನಮ್ಮ ದೇಶಗರು ಕಂಡುಕೊಂಡಿದ್ದರು. ಆ ಸಮಯದಲ್ಲಿ ತತ್ಸಂಬಂದಿ ಪೂಜ ವಿಧಿಗಳನ್ನು ವ್ರತಗಳನ್ನು ನಿರೂಪಿಸಿ ಸಮಸ್ತ ಜನರಿಗೆ ಆಯಾ ಕಾಲದ ಕರ್ತವ್ಯದ ಬಗ್ಗೆ ತಿಳಿವು ಮೂಡುವಂತೆ ಮಾಡಿದ್ದು, ಈ ತಿಳುವಿನ ಮೂಲ ಜಾಲವೇ ನಮ್ಮ ಹಬ್ಬ ಹರಿದಿನಗಳೆಂಬವವು ಭಾರತೀಯತೆಯ ಪ್ರತೀಕವಾಗಿದೆ.
ಏಳುತ ನೆನೆದೇನ ಏಳೆಂಟು ದೇವರ /
ಎಳ್ಳು ಜೀರಿಗೆ ಬೆಳೆಯೋಳ /
ಭೂತಾಯಿನ ಎzಂದು ಘಳಿಗೆ ನೆನೆದೇನೆ/
ಎಂದು ದಿನನಿತ್ಯ ರೈತಾಪಿ ಜನರು ಭೂಮಾತೆಯನ್ನು ನೆನೆಸಿ ಸಾಂಪ್ರದಾಯಿಕವಾಗಿ ಹಾಡುವ ಹಾಡು ಇದಾಗಿದೆ. ಸೂರ್ಯನಿಂದ ಸಮಸ್ತ ಜಗತ್ತು ಶಾಖ, ಬೆಳಕು ಹಾಗೂ ಚಂದ್ರನಿಂದ ನೀರು ತಂಪು ಪಡೆದ ಭೂಮಿಯ ಇಂತಹ ಭೂಮಣ್ಣನ್ನು ಜೇಷ್ಠದ ಅಮಾವಾಸ್ಯೆಯಂದು ಪೂಜಿಸಿ ಆ ಮಣ್ಣಿನಿಂದ ಉಳುವ ನೇಗಿಲು ಎತ್ತುಗಳಿಗೆ ಲೇಪ ಮಾಡಿ ಗೋಧೂಳಿ ಸಮಯದಲ್ಲಿ ಫಲ-ಪುಷ್ಪ ಆರತಿಗಳಿಂದಲೂ, ಬಲಿ ಹಿರಣದಿಂದಲೂ, ಹಣತೆಯಿಂದಲೂ ಪೂಜಿಸುವ ದಿನವಿದು.
ಹೀಗೆ ಸೂರ್ಯ, ಚಂದ್ರ, ಭೂಮಿ ಉಳುಮೆಗಳು ಪರಸ್ಪರ ಕೂಡಿಕೊಂಡಿವೆ. ಆ ಕೂಡಿಕೆಯಿಂದಲೇ ಅನ್ನ, ನೀರು ದೊರೆಯುವುದಲ್ಲವೇ ! ಹಾಗಿzಗ ಸಕಲ ಜೀವಿಗಳಿಗೆ ಅನ್ನಧಾತೆಯಾದ ಭೂದೇವಿಯನ್ನು ಪೂಜಿಸಬೇಕು. ಎತ್ತುಗಳು ಪರಮೇಶ್ವರನ ಸ್ವರೂಪ, ನೇಗಿಲು ಈಶ್ವರನ ಆಯುಧದ ಸ್ವರೂಪ ಹೀಗೆ ಜೇಷ್ಠದ ಅಮಾವಾಸ್ಯೆಯ ಪೂಜ ದಿನಗಳ ಹಿಂದಿನ ಅನುಸಂಧಾನವಿದೆ. ಇನ್ನೂ ಈ ಪರ್ವಕಾಲದ ಆಚರಣೆಯನ್ನು ಅಮಾವಾಸ್ಯೆಯ ದಿನವೇ ಏಕೆ ಪೂಜಿಸುತ್ತಾರೆಂದರೆ ? ಅಮವಾಸೆಯು ಭೂಮಿಯ ಸಂಬಂಧಿ ದಿನ, ಹುಣ್ಣಿಮೆಯೋ ಚಂದ್ರನ ಸಂಬಂಧಿ ದಿನ, ಆಯಾ ದಿನಗಳಿಗೆ ಅದರದೇ ಆದ ಮಹತ್ವವಿದೆ ಎಂದು ಈ ಪರ್ವ ದಿನಗಳ ಆಚರಣೆಯು ನಡೆದು ಬಂದಿದೆ.
ರೈತನ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತುಗಳನ್ನು ಮಣ್ಣಿನ ರೂಪದಲ್ಲಿ ಪೂಜಿಸುವ ಹಬ್ಬವೇ ಈ ಮಣ್ಣೆತ್ತಿನ ಅಮಾವಾಸ್ಯೆ ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ರೈತನ ಬೆನ್ನೆಲುಬು ಆಗಿ ಜಮೀನು ಹದಗೊಳಿಸುವಲ್ಲಿ, ಉತ್ತುವ-ಬಿತ್ತುವ ಹಾಗೂ ಧವಸ-ಧಾನ್ಯಗಳ ಹೊತ್ತೊಯುವ ಕಾರ್ಯದಲ್ಲಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬ ಇದಾಗಿದೆ ರೈತಾಪಿ ಜನರು ತಮ್ಮ ಜನುವಾರಗಳಿಗೆ ಯಾವುದೇ ರೋಗರುಜನೆಗಳು ಬಾರದಂತೆ ದೇವರಲ್ಲಿ ಪ್ರಾರ್ಥಿಸುವ ಒಂದು ಹಬ್ಬವೂ ಕೂಡ ಇದಾಗಿದೆ. ಇಂತಹ ಮಹತ್ವಪೂರ್ಣ ಹಬ್ಬಗಳು ಇತ್ತೀಚಿನ ಕಾಲಗಳಲ್ಲಿ ಕಣ್ಮರೆಯಾಗುತ್ತಲಿವೆ .
ಎಂತ್ರೋಪಕರಣಗಳ ಈಗಿನ ಜಗತ್ತು ಜನುವಾರಗಳ ಅವಸಾನಕ್ಕೆ ಕಾರಣವಾಗಿದೆ. ಆದ್ದರಿಂದ ಆದಷ್ಟೂ ಯೆಂತ್ರಗಳ ಮಿತ ಬಳಕೆಯಾಗಿ, ಜನುವಾರುಗಳ ಒಡನಾಟವು ಹೆಚ್ಚಿಸಿ, ಸಾಕು ಪ್ರಾಣಿಗಳ ಉಳಿವಿಗೆ ಕಾರಣ ವಾಗಬೇಕಾಗಿದೆ. ಅಲ್ಲದೆ ಪೂರ್ವಜರ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾರ್ಯವು ಉಚಿತವಾಗಿ ಸಾಗಬೇಕಾಗಿದೆ ಹೀಗಿzಗ ಮಾತ್ರ ನಮ್ಮ ಅಳಿವಿನಂಚಿನಲ್ಲಿರುವ ಹಬ್ಬ ಹರಿ ದಿನಗಳಿಗೆ ಪುನರ್ ಜೀವ ಬಂದಂತಾಗುವುದು.