ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ರಕ್ತದಾನ ಜೀವದಾನಕ್ಕೆ ಸಮ : ಎಸ್.ಪಿ.

Share Below Link

ಭದ್ರಾವತಿ : ರಕ್ತದಾನ ಮಾಡುವುದು ಎಷ್ಟು ಅವಶ್ಯಕವೆಂದರೆ, ಇದರಿಂದ ತುರ್ತು ಪರಿಸ್ಥಿತಿಯಲ್ಲಿರುವ ವ್ಯಕ್ತಿಗೆ ಜೀವದಾನ ಮಾಡುವುದಕ್ಕೆ ಸಮ ನಾಗಿರುತ್ತದೆ ಎಂದು ಎಸ್‌ಪಿ ಮಿಥುನ್ ಕುಮಾರ್ ಹೇಳಿದರು.
ನಿಯಮಿತವಾಗಿ ರಕ್ತದಾನ ಮಾಡುತ್ತಾ ಬಂದರೆ, ದೇಹದಲ್ಲಿ ಹೊಸ ರಕ್ತ ವೃದ್ಧಿಯಾಗಿ ನಮ್ಮ ಆರೋಗ್ಯವೂ ಉತ್ತಮವಾಗಿರು ತ್ತದೆ ಮತ್ತು ಇನ್ನೊಂದು ಜೀವವನ್ನು ಉಳಿಸಿದ ಸಾರ್ಥಕತೆ ಸಹಾ ಸಿಗುತ್ತದೆ ಎಂದವರು ಹೇಳಿದರು.
ರಕ್ತಕ್ಕೆ ಯಾವುದೇ ಮೇಲು ಕೀಳು ಹಾಗೂ ಬೇದ ಭಾವ ಇರುವುದಿಲ್ಲ. ಈ ವಿಚಾರದಲ್ಲಿ ಎಲ್ಲರೂ ಒಂದಾಗಿ ರೋಣ ಎಂದ ಅವರು, ಪೊಲೀಸ್ ಇಲಾಖೆ ಈ ರೀತಿಯ ಕಾರ್ಯ ಕ್ರಮ ಆಯೋಜಿಸುವ ಮೂಲಕ ನಾವು ಸಮಾಜಕ್ಕೆ ಇನ್ನೂ ಹತ್ತಿರ ವಾಗಿ, ಅವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸಮಾಜ ಮುಖಿಯಾಗಿ ಕಾರ್ಯಮಾಡಲು ಸಾಧ್ಯವಿರುತ್ತದೆ ಎಂದ ಅವರು, ಮುಂದೆಯೂ ಕೂಡ ಪೊಲೀಸ್ ಇಲಾಖೆಯಿಂದ ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಲಾಗುತ್ತದೆ ಎಂದರು.
ಭದ್ರಾವತಿ ಗ್ರಾಮಾಂತರ ಮತ್ತು ಪೇಪರ್ ಟೌನ್ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಮೆಗ್ಗಾನ್ ರಕ್ತ ಕೇಂದ್ರದ ಸಹಯೋಗದೊಂದಿಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮೇಲಿನಂತೆ ನುಡಿದರು.
ಈ ಸಂದರ್ಭದಲ್ಲಿ ಭದ್ರಾವತಿ ಸಂಚಾರಿ ಠಾಣೆಯ ಹೆಚ್.ಸಿ. ಹಾಲೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಜಗದೀಶ್ ಹಂಚಿನಾಳ್ ಇನ್ನಿತರರು ಉಪಸ್ಥಿತರಿದ್ದರು. ಪೊಲೀಸರು ಮತ್ತು ಸಾರ್ವಜನಿಕರು ಸೇರಿದಂತೆ ೬೦ ಜನ ರಕ್ತದಾನ ಮಾಡಿದರು.