ಜಿಲ್ಲಾ ಸುದ್ದಿತಾಜಾ ಸುದ್ದಿ

ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಗೌರವ …

Share Below Link

ಸಾಗರ : ರೋಟರಿ ಸಂಸ್ಥೆ ಈ ವರ್ಷ ಆರೋಗ್ಯದ ಬಗ್ಗೆ ಆದ್ಯತೆ ನೀಡಿ ಹಲವು ಜನಸ್ನೇಹಿ ಕಾರ್ಯಕ್ರಮ ನಡೆಸಿದೆ ಎಂದು ರೋಟರಿ ಅಧ್ಯಕ್ಷೆ ಡಾ| ರಾಜನಂದಿನಿ ಕಾಗೋಡು ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ರೋಟರಿ ಸಂಸ್ಥೆಯಿಂದ ಏರ್ಪಡಿ ಸಿದ್ದ ಕುಟುಂಬ ಮಿಲನ ಕಾರ್ಯ ಕ್ರಮದಲ್ಲಿ ಇಬ್ಬರು ಪೌರಕಾರ್ಮಿಕ ರನ್ನು ಸನ್ಮಾನಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಆರೋಗ್ಯಕ್ಕೆ ಪೂರಕವಾದ ೮೫೦ ಹಿಮೋ ಗ್ಲೋಬಿನ್ ತಪಾಸಣೆ ಶಿಬಿರವನ್ನು ಈ ವರ್ಷ ನಡೆಸಿದ್ದೇವೆ ಎಂದರು.


ಊರನ್ನು ಸ್ವಚ್ಛವಾಗಿಡುವಲ್ಲಿ ಶ್ರಮಿಸುವ ಪೌರ ಕಾರ್ಮಿಕರನ್ನು ಯಾರೂ ಮರೆಯುವಂತಿಲ್ಲ. ಪೌರಕಾರ್ಮಿಕರೇನಾದರೂ ಮುಷ್ಕರ ನಡೆಸಿದರೆ ಇಡೀ ಊರೇ ತ್ಯಾಜ್ಯದಿಂದ ತುಂಬಿ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಊರನ್ನು ಸ್ವಚ್ಛ ವಾಗಿಡಲು ಅವರ ಕೆಲಸ ಶ್ಲಾಘನೀಯವಾದುದು ಎಂದರು.
ರೋಟರಿ ಸಂಸ್ಥೆ ಈ ಒಂದು ವರ್ಷದಲ್ಲಿ ಹಿಮೋಗ್ಲೋಬಿನ್ ತಪಾಸಣೆ ಶಿಬಿರದ ಜತೆ ಸಕ್ಕರೆ ಕಾಯಿಲೆ, ಬಿ.ಪಿ. ತಪಾಸಣೆ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ನಡೆಸಿದೆ. ಬಹುತೇಕ ಎಲ್ಲ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಹಿಮೋಗ್ಲೋಬಿನ್ ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಾಗಿದೆ. ರಕ್ತಹೀನತೆ ದೂರಮಾಡಲು ನುಗ್ಗೆಸೊಪ್ಪು ಸೇರಿದಂತೆ ಇತರೆ ಸೊಪ್ಪನ್ನು ಆಹಾರದಲ್ಲಿ ಬಳಸಬೇಕು. ಮೊಳಕೆ ಕಾಳನ್ನು ಸಂಜೆ ಶಾಲೆ ಯಿಂದ ಬಂದ ಮಕ್ಕಳಿಗೆ ಕೊಡಿ. ನಮ್ಮ ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೌರ ಕಾರ್ಮಿಕರಾದ ನಾಗರಾಜ ಮತ್ತು ರಾಮು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಕುರಿತು ರೋಟರಿ ಸಂಸ್ಥೆಯ ವೆಂಕಟರಾವ್ ಮಾತನಾಡಿದರು.
ರೋಟರಿ ಜಿ ಲೆಫ್ಟಿನೆಂಟ್ ಗೌರ್‍ನರ್ ಮಹೇಶ್ ಅಂಕದ ಮಾತನಾಡಿ, ರೋಟರಿ ಸಂಸ್ಥೆ ಜೊತೆಗೆ ರೋಟರಿ ಚಾರಿಟಬಲ್ ಟ್ರಸ್ಟ್ ಆರಂಭಿಸಲಾಗಿದೆ. ಇದರ ಮೂಲಕ ಪುರಪ್ಪೆಮನೆಯಲ್ಲಿ ಕೆರೆ ಹೂಳೆತ್ತಲು ಮತ್ತು ರಿಪ್ಪನ್‌ಪೇಟೆ ಯಲ್ಲಿ ಶಾಲಾ ಕಟ್ಟಡಕ್ಕೆ ಧನಸಹಾಯ ಹಾಗೂ ತಾಳಗುಪ್ಪ ನಾಲಂದ ಶಾಲೆಗೆ ಸುಮಾರು ೭.೫ ಲಕ್ಷ ರೂ. ವಸ್ತುಗಳನ್ನು ದೇಣಿಗೆ ಯಾಗಿ ನೀಡಲಾಗಿದೆ. ದಾನಿಗಳು ಈ ಟ್ರಸ್ಟ್‌ಗೆ ಧನಸಹಾಯ ಮಾಡಿದರೆ ತೆರಿಗೆ ರಿಯಾಯಿತಿ ಇದೆ. ಈ ಹಣ ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗ ವಾಗುತ್ತದೆ ಎಂದರು.
ರೋಟರಿ ಸದಸ್ಯ ಗುರು ಪ್ರಸಾದ್ ಮಾತನಾಡಿ, ರೋಟರಿ ಸಂಸ್ಥೆ ಸಾಗರದಲ್ಲಿ ಆರಂಭಗೊಂಡು ೬೫ ವರ್ಷದ ನಂತರ ಈ ವರ್ಷ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಡಾ. ರಾಜನಂದಿನಿ ಕಾಗೋಡು ಅವರು ದಕ್ಷತೆಯಿಂದ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿzರೆ. ಕಾರ್ಯದರ್ಶಿ ರಾಜೀವ್ ಅವರಿಗೆ ಉತ್ತಮ ಸಹಕಾರ ನೀಡಿzರೆ. ಇವರು ರೋಟರಿ ಸಂಸ್ಥೆಯ ಘನತೆ ಯನ್ನು ಹೆಚ್ಚಿಸಿzರೆ. ತಮ್ಮ ಸಾಮಾಜಿಕ, ರಾಜಕೀಯದ ಅನುಭವವನ್ನು ಹಂಚಿಕೊಂಡಿ zರೆ. ಅವರ ಸರಳತೆ ರೋಟರಿ ಸದಸ್ಯರಿಗೆ ಮಾದರಿಯಾಗಿದೆ. ಬರುವ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ರೋಟರಿ ಸಂಸ್ಥೆ ಗಮನ ಹರಿಸುತ್ತದೆ. ರಸ್ತೆ ಅಪಘಾತದಲ್ಲಿ ಸಾವಿಗೀಡಾಗು ತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆಯ ಜಿ.ಎಸ್. ವೆಂಕಟೇಶ ದಂಪತಿ, ನಿವೃತ್ತ ಪ್ರಾಧ್ಯಾಪಕ ಎಚ್.ಎಂ.ಶಿವಕುಮಾ ದಂಪತಿಯನ್ನು ಸನ್ಮಾನಿಸಲಾಯಿತು. ರೋಟರಿ ಸದಸ್ಯರಾದ ಅಶ್ವತ್ಥ ನಾರಾಯಣ, ಕೆ.ಎನ್.ಶ್ರೀಧರ್, ಶಾಂತಕುಮಾರ್ ಮತ್ತಿತರರು ಹಾಜರಿದ್ದರು.
ಮಾನ್ವಿತ ಪ್ರಾರ್ಥಿಸಿದರು. ರಾಜೀವ್ ವಂದಿಸಿದರು. ರೋಟರಿ ಸದಸ್ಯರಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.