ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಅನಧಿಕೃತ ಹೂವು-ಹಣ್ಣಿನ ಅಂಗಡಿ ತೆರವಿಗೆ ಆಗ್ರಹ…

Share Below Link

ಭದ್ರಾವತಿ : ನಗರದ ಬಿಹೆಚ್ ರಸ್ತೆಯ ಮುಖ್ಯ ಬಸ್ ನಿಲ್ದಾಣದ ಎದುರು ಇರುವ ವರ್ತಕರುಗಳು ೨೦೦೮-೦೯ರ ಸಾಲಿನಲ್ಲಿ ರಸ್ತೆ ಅಗಲೀಕರಣ ಮಾಡುವ ಹಾಗು ಸುಗಮ ಸಂಚಾರ ದೃಷ್ಟಿಯಿಂದ ಸುಮಾರು ೫ ರಿಂದ ೮ ಅಡಿ ಜಗವನ್ನು ತೆರವು ಮಾಡಿ ಅನುಕೂಲ ಮಾಡಿಕೊಡಲಾಗಿತ್ತು.
ಆದರೆ ಈ ಜಗ ಬಿಟ್ಟುಕೊಟ್ಟಿದ್ದು ಸುಗಮ ಸಂಚಾರಕ್ಕೆ ಅನುಕೂಲ ಆಗಲಿ ಎಂದು ಬಿಟ್ಟುಕೊಟ್ಟಿದ್ದರೆ ಆ ಜಗದಲ್ಲಿ ಅನಧಿಕೃತವಾಗಿ ಹಣ್ಣಿನ ಹೂವಿನ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಹಾಗು ಪಾದಚಾರಿಗಳ ಓಡಾಟಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಬಗ್ಗೆ ನಗರಸಭೆ ಸೇರಿದಂತೆ ಸಂಭಂಧಿಸಿದ ಆಡಳಿತಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ವರ್ತಕರುಗಳು ದೂರಿzರೆ.
ಆದರೆ ಈಗ ಇದ್ದಕ್ಕಿದ್ದಂತೆ ೧.೫.೨೪ರ ರಾತ್ರಿ ತಗಡಿನಿಂದ ಮಾಡಿದ ಸುಸುಜ್ಜಿತ ಹೂವಿನ ಅಂಗಡಿಯನ್ನು ಈ ಖಾಲಿ ಇರುವ ಜಗದಲ್ಲಿ ಹಾಕಲಾಗಿದೆ. ಈ ಬಗ್ಗೆ ನಗರಸಭೆಗೆ ದೂರು ನೀಡಿದರೂ ಯಾವುದೆ ಪ್ರಯೋಜನ ಆಗಿಲ್ಲ ಇದನ್ನು ತೆರವುಗೊಳಿಸಿ ಸುಗಮ ಸಂಚಾರ ಹಾಗು ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿ ಕೊಟ್ಟಿಲ್ಲ. ಈಗ ಈ ಬಗ್ಗೆ ಬಿಗಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾಯಿಕೊಡಗಳಂತೆ ಸಣ್ಣ ಅಂಗಡಿಗಳು ಏಳುತ್ತವೆ ಎಂದು ನಗರಸಭೆ ಆಯುಕ್ತರಿಗೆ ದೂರು ನೀಡಿzರೆ.