ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕುಮಾರಸ್ವಾಮಿ ಅವರಿಂದ ವಿಐಎಸ್‌ ಎಲ್ ಕಾರ್ಖಾನೆಗೆ ಕಾಯಕಲ್ಪದ ಭರವಸೆ…

Share Below Link

ಭದ್ರಾವತಿ : ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರ ಸ್ವಾಮಿ ಅವರು ವಿಐಎಸ್‌ಎಲ್ ಕಾರ್ಖಾನೆಯನ್ನು ಅಭಿವೃಧ್ಧಿ ಪಡಿಸುವ ಕುರಿತು ಸಂಪೂರ್ಣ ಭರವಸೆ ನೀಡಿzರೆ ಎಂದು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ತಿಳಿಸಿದರು.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಷ್ಟಿತ ಉಕ್ಕಿನ ಕಾರ್ಖಾನೆಯಾದ ವಿಐಎಸ್‌ಎಲ್ ಕಾರ್ಖಾನೆಯು ನಷ್ಟದಲ್ಲಿ ನಡೆಯುತ್ತಿದ್ದು ೧೯೯೭ರಲ್ಲಿ ಅಂದಿನ ಜನತಾದಳ ಸರ್ಕಾರವು ಕೇವಲ ಒಂದು ರೂ ಮುಖ ಬೆಲೆಗೆ ಕೇಂದ್ರ ಸರ್ಕಾರದ ಸೈಲ್ ಆಡಳಿತಕ್ಕೆ ವಹಿಸಿಕೊಟ್ಟಿತು. ನಂತರ ೧೯೯೮ರಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರು ಕಾರ್ಖಾನೆಯನ್ನು ಪೂರ್ಣ ಪ್ರಮಾಣದಲ್ಲಿ ಉಕ್ಕು ಪ್ರಾಧಿಕಾರದಲ್ಲಿ ವಿಲೀನಗೊಳಿಸಿ ೬೫೦ ಕೋಟಿ ರೂಗಳನ್ನು ಬಂಡವಾಳ ತೊಡಗಿಸಿ ಆಧುನೀಕರಣಗೊಳಿಸಿ ಲಾಭ ಧಾಯಕವಾಗಿ ಮುನ್ನಡಸಬೇಕು ಎಂಬ ಷರತ್ತಿನೊಂದಿಗೆ ತಮ್ಮ ಅಧಿಕಾರದ ಕೊನೆಯಗಳಿಗೆಯಲ್ಲಿ ಅಂಕಿತ ಹಾಕಿದ್ದರು.
ಈಗ ಯೋಗಾಯೋಗ ಅವರ ಪುತ್ರ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದು ಅಧಿಕಾರ ವಹಿಕೊಂಡ ಪ್ರಾರಂಭದಲ್ಲಿ ಪ್ರಥಮವಾಗಿ ಭದ್ರಾವತಿ ಕಾರ್ಖಾನೆಯ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಪ್ರಥಮ ಸುತ್ತಿನ ಮಾತುಕತೆ ನಡೆಸಿzರೆ. ಇದು ಕಾರ್ಖಾನೆ ಹಾಗು ಕಾರ್ಮಿಕರ ಬಗ್ಗೆ ಅವರಿಗಿರುವ ಕಳಕಳಿ ತೋರಿಸುತ್ತದೆ ಎಂದು ತಿಳಿಸಿದರು.
ಭದ್ರಾವತಿ ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ ಅವರು ಮಾತನಾಡಿ, ಕಾರ್ಖಾನೆಗೆ ಕೇವಲ ಬಂಡವಾಳ ತೊಡಗಿಸಿ ಅಭಿವೃದ್ಧಿ ಪಡಿಸುವುದರ ಜೊತೆಗ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಾಗು ಭವಿಷ್ಯದ ೫೦ ವರ್ಷಗಳ ಮುಂದಾಲೋಚನೆ ನಡೆಸಿ ಕಾರ್ಖಾನೆ ಪ್ರಾರಂಭ ಮಾಡುವ ಸ್ಪಷ್ಟ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.


ಗುತ್ತಿಗೆ ಕಾರ್ಮಿಕ ಸಂಘದ ರಾಕೇಶ್ ಮಾತನಾಡಿ, ಕಾರ್ಖಾನೆ ಯಲ್ಲಿ ಈಗ ಹಾಲಿ ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ ಕೇವಲ ೧೩- ೧೫ ದಿನಗಳ ಕಾಲ ಕೆಲಸ ದೊರೆಯುತ್ತಿದೆ. ಈ ಕೆಲಸದ ಅವಧಿ ಹೆಚ್ಚಬೇಕು ಎಂದು ಆಗ್ರಹಿಸಲಾಗಿದೆ. ಇದರ ಜೊತೆಗೆ ಕಾರ್ಮಿಕರು ಕುಟುಂಬದವರು ಮತ್ತು ಮಕ್ಕಳ ಪರಿಸ್ಥಿತಿ ಬಹಳ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಶಾಲಾ ಪ್ರಾರಂಭದ ದಿನಗಳ ಕಾರಣ ಶಾಲಾ ಶುಲ್ಕವನ್ನು ತುಂಬುವುದು ಕಷ್ಟ ವಾಗಿದೆ. ಇದರ ಜೊತೆಗೆ ಗುತ್ತಿಗೆ ಕಾರ್ಮಿಕರಿಗೆ ಕಾರ್ಖಾನೆಯಲ್ಲಿ ಸರಿಯಾದ ಕೆಲಸ ಇಲ್ಲದ ಕಾರಣ ಅವರಿಗೆ ಸರಿಯಾಗಿ ಸಂಬಳ ಬರುವುದಿಲ್ಲ. ಹಾಗಾಗಿ ಮಕ್ಕಳ ಶಾಲೆಯ ಫೀಸ್ ಕಟ್ಟುವುದಿಲ್ಲ ಎಂಬ ಮುಂದಾಲೋಚನೆಯಿಂದ ಶಾಲೆಗೆ ಮಕ್ಕಳನ್ನು ಸೇರಿಸಿಕೊಳ್ಳುತ್ತಿಲ್ಲ ಎಂದು ಅವಲತ್ತುಕೊಂಡರು.
ಕಾರ್ಖಾನೆಗೆ ಸುಮಾರು ೧೫ ರಿಂದ ೨೦ ಸಾವಿರ ಕೋಟಿ ರೂಗಳ ಬಂಡವಾಳ ಹೂಡಿ ಕಾರ್ಖಾನೆಯ ಯಂತ್ರೋಪಕರಣಗಳನ್ನು ಬದಲಾವಣೆ ಮಾಡಿ ಆಧುನೀಕರ ಮಡಿದರೆ ಮಾತ್ರ ಕಾರ್ಖಾನೆಗೆ ಹೊಸ ದಿಕ್ಕು ಕಾಣಲು ಸಾಧ್ಯ ಎಂದರು.
ಜೆಡಿಎಸ್ ಜಿ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ತಿಮ್ಮೇಗೌಡ, ರಾಮಕೃಷ್ಣ, ರವಿ ಕುಮಾರ್, ಉಮೇಶ್, ನರಸಿಂಹಾಚಾರ್, ಭಾಗ್ಯಮ್ಮ, ಮಂಜುಲಮ್ಮ, ಉದಯ್, ವಿಶಾಲಾಕ್ಷಿ, ಕುಮಾರ್ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.