ಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ಹಮಾರೇ ಬಾರಹ ಚಿತ್ರ ನಿಷೇಧ ಸರಿಯಲ್ಲ : ನಟ ಚೇತನ್

Share Below Link

ಶಿವಮೊಗ್ಗ : ತೀರ್ಥಹಳ್ಳಿಯ ಅಲೆಮಾರಿಗಳಿಗೆ ನ್ಯಾಯವೊದಗಿಸ ಬೇಕು, ಜತಿ ಗಣತಿ ಬಿಡುಗಡೆ ಮಾಡಬೇಕು. ಮತ್ತು ಹಮಾರೇ ಬಾರಹ ಚಿತ್ರವನ್ನು ನಿಷೇಧ ಮಾಡಿರುವುದು ಸರಿಯಲ್ಲ ಎಂದು ನಟ ಹಾಗೂ ಚಿಂತಕ ಚೇತನ್ ಅವರು ಸಿದ್ದರಾಮಯ್ಯ ಸರ್ಕಾರದ ನಿಲುವುಗಳನ್ನು ವಿರೋಧಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಚಿತ್ರವನ್ನು ನೋಡದೇ ಅದನ್ನು ನಿಷೇಧ ಮಾಡುವುದು ಸರಿಯಲ್ಲ. ಇದು ವಾಕ್ ಸ್ವಾತಂತ್ರ್ಯಕ್ಕೆ ವಿರೋಧವಾಗಿದೆ. ಕೇವಲ ಟ್ರೈಲರ್‌ನ್ನು ನೋಡಿ ಚಿತ್ರ ನಿಷೇಧ ಮಾಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಯಾಗಿದೆ ಮತ್ತು ಓಲೈಕೆಯ ತಂತ್ರವು ಆಗಿದೆ ಎಂದರು.
ಜತಿಗಣತಿ ೨೦೧೪ ರಿಂದಲೇ ಪ್ರಾರಂಭವಾಗಿತ್ತು. ಸುಮಾರು ೨೦೦ ಕೋಟಿಯನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಕೂಡ ಮಾತಿನಂತೆ ಜತಿಗಣತಿಯನ್ನು ಬಿಡುಗಡೆ ಮಾಡಿಲ್ಲ. ಜತಿಗಣತಿಯನ್ನು ಬಿಡುಗಡೆ ಮಾಡದೆ ಹೇಗೆ ದಲಿತರ ಶೋಷಿತರ ಆದಿವಾಸಿಗಳಿಗೆ ನ್ಯಾಯ ಸಿಗುತ್ತದೆ. ಈ ಸರ್ಕಾರಕ್ಕೆ ಅದೇಕೋ ಬಿಡುಗಡೆ ಮಾಡುವ ಮನಸ್ಸಿಲ್ಲವೇನೋ ಎಂದ ಅವರು, ಕಾಂಗ್ರೆಸ್ ಸರ್ಕಾರ ಕೂಡಲೇ ಇದನ್ನು ಬಿಡುಗಡೆ ಮಾಡಬೇಕು ಎಂದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬರುತ್ತದೆ. ದೇಶದಲ್ಲಿಯೂ ಕೂಡ ಇದುವರೆಗೂ ಜತಿ ಗಣತಿ ಆಗಿಲ್ಲ. ಎನ್‌ಡಿಎದೊಂದಿಗೆ ಹೆಜ್ಜೆ ಹಾಕಿರುವ ನಿತೀಶ್‌ಕುಮಾರ್ ಮತ್ತು ಚಂದ್ರಬಾಬುನಾಯ್ಡು ಅವರು ಒತ್ತಡ ತಂದು ದೇಶದಲ್ಲಿ ಜತಿಗಣತಿಯನ್ನು ಮಾಡಬೇಕು ಎಂದರು.
ದಲಿತ ಸಂಘರ್ಷ ಸಮಿತಿಯ ಹಾಲೇಶಪ್ಪ , ಶಿವುಕುಮಾರ್, ಹಾರೋಗುಳಿಗೆ ವಿಶ್ವನಾಥ್ ಇದ್ದರು.