ಬ್ರಹ್ಮ ಕುಮಾರಿ ಸಂಸ್ಥೆಯಿಂದ ಪರಿಸರ ದಿನ ಆಚರಣೆ
ಶಿವಮೊಗ್ಗ: ವಾಜಪೇಯಿ ಬಡಾವಣೆಯಲ್ಲಿ ನೂತನ ಬ್ರಹ್ಮಾಕುಮಾರಿ ಸಂಸ್ಥೆಯ ಬಳಿ ಪರಿಸರ ದಿನಾಚರಣೆ ಆಚರಿಸಲಾಯಿತು.
ನಿರ್ಮಲ ತುಂಗಾ ತಂಡದ ಬಾಲಕೃಷ್ಣ ನಾಯಿಡು ಮತ್ತು ಬ್ರಹ್ಮಾಕುಮಾರಿ ಅನಸೂಯಕ್ಕ ನವರ ನೇತೃತ್ವದಲ್ಲಿ ಗಿಡನೆಡುವ ಕಾರ್ಯಕ್ರಮ ನಡೆಯಿತು.
ಪರಿಸರ ತಜ್ಞ ಪ್ರೊ.ಶ್ರೀಪತಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತ್ಯಾಗರಾಜ ಮಿತ್ಯಾಂತ ಅವರು ಕೇವಲ ಗಿಡ ನೆಟ್ಟರೆ ಸಾಲದು , ಗಿಡಕ್ಕೆ ನೀರೆರೆದು ಬೆಳೆಸುವುದು ಮುಖ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಣ್ಣು , ಹೂವು ಮತ್ತು ನೆರಳು ಕೊಡುವ ನೂರಾರು ಮರದ ಸಸಿಗಳನ್ನು ಉದ್ಯಾನವನದಲ್ಲಿ ನೆಡಲಾಯಿತು.
ಅರಣ್ಯಾಧಿಕಾರಿಗಳಾದ ಮಂಜುನಾಥರವರು ಗಿಡನೆಡುವ ವಿಧಾನದ ಮಾರ್ಗದರ್ಶನ ನೀಡಿದರು.
ಪುಷ್ಪಾಶೆಟ್ಟಿ , ಮಂಜಪ್ಪ , ಡಾ.ವಿಮಲಾ, ಡಾ. ಚಂದ್ರಶೇಖರ್ ಇನ್ನಿತರರು ಭಾಗವಹಿಸಿದ್ದರು.