ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಭೋಜೇಗೌಡ- ಡಾ| ಸರ್ಜಿಗೆ ಮತ ನೀಡಿ: ಮಧು-ನಿಖಿಲ್

Share Below Link

ಶಿವಮೊಗ್ಗ : ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದಿಂದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ದಿಂದ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳ ಗೆಲುವು ಖಚಿತ ಎಂದು ಜಿ ಯುವ ಜನತಾ ದಳದ ಅಧ್ಯಕ್ಷ ಮಧುಕುಮಾರ್ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮೈತ್ರಿಕೂಟದಿಂದ ಶಿಕ್ಷಕರ ಕ್ಷೇತ್ರಕ್ಕೆ ಎಸ್.ಎಲ್. ಭೋಜೇಗೌಡ ಹಾಗೂ ಪದವೀಧರ ಕ್ಷೇತ್ರದಿಂದ ಡಾ. ಧನಂಜಯ ಸರ್ಜಿ ಅವರು ಸ್ಪರ್ಧಿ ಸಿzರೆ. ಇಬ್ಬರು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಮತದಾರರ ಸಂಪರ್ಕದಲ್ಲಿzರೆ. ಅವರ ಸಮಸ್ಯೆಗಳನ್ನು ಬಗೆಹರಿಸು ವುದಾಗಿ ತಿಳಿಸಿ ಮೆಚ್ಚುಗೆಗೆ ಪಾತ್ರರಾಗಿ zರೆ. ಹಾಗಾಗಿ ಈ ಇಬ್ಬರ ಗೆಲುವು ನಿಶ್ಚಿತ ಎಂದ ಅವರು, ವಿಶೇಷವಾಗಿ ಭೋಜೇಗೌಡ ಅವರು ಈಗಾಗಲೇ ವಿಧಾನ ಪರಿಷತ್ ಸದಸ್ಯರಾಗಿ ಉತ್ತಮವಾಗಿ ಕಾರ್ಯನಿರ್ವ ಹಿಸುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಜನಮನ್ನಣೆ ಗಳಿಸಿದ್ದಾರೆ. ಈಗ ಅವರು ಮತ್ತೊಮ್ಮೆ ಸ್ಪರ್ಧಿಸಿzರೆ. ತಮ್ಮ ಅಧಿಕಾರದ ಅವಧಿಯಲ್ಲಿ ಹಲವು ಕೆಲಸಗಳನ್ನು ಮಾಡಿzರೆ. ಶಿಕ್ಷಕರಿಗೆ ವಿಶೇಷ ಬಡ್ತಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಸಮಸ್ಯೆಗಳು, ಕೋವಿಡ್ ಸಂದರ್ಭದಲ್ಲಿ ಅನಾರೋಗ್ಯಕ್ಕೆ ಒಳಗಾದ ಶಿಕ್ಷಕ ಕುಟುಂಬಕ್ಕೆ ಸಹಾಯ ಮಾಡಿರುವುದು ಹೀಗೆ ಹಲವು ಕೆಲಸಗಳನ್ನು ಮಾಡಿzರೆ. ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಧನಂಜಯ ಸರ್ಜಿ ಅವರು ಕೂಡ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿzರೆ. ಹೀಗಾಗಿ ಈ ಇಬ್ಬರು ಗೆಲ್ಲುತ್ತಾರೆ ಎಂದರು.
ಜೆಡಿಎಸ್ ಯುವ ಘಟಕದ ಜಿಲ್ಲಾ ಕಾರ್‍ಯಾಧ್ಯಕ್ಷ ನಿಖಿಲ್ ಅವರು ಮಾತನಾಡಿ, ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಭೋಜೇಗೌಡರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಸಹ ವೈಯಕ್ತಿಕವಾಗಿ ನೆರವು ನೀಡಿ ಜನಮನ ಗೆದ್ದಿದ್ದಾರೆ. ಅಂತೆಯೇ ಪದವೀಧರ ಅಭ್ಯರ್ಥಿಯಾಗಿರುವ ನಗರದ ಖ್ಯಾತ ಮಕ್ಕಳ ತಜ್ಞವೈದ್ಯ ಡಾ| ಧನಂಜಯ ಸರ್ಜಿ ಅವರು ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿ ನಿರತರಾ ಗಿದ್ದು, ಈ ಹಿಂದೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವಘಡ ಉಂಟಾದಾಗ ಆಸ್ಪತ್ರೆಯಲ್ಲಿದ್ದ ರಕ್ಷಣೆಗೆ ಮುಂದಾಗಿ ಮೆಗ್ಗಾನ್‌ನಲ್ಲಿ ದಾಖಲಾಗಿದ್ದ ಮಕ್ಕಳನ್ನು ತಮ್ಮ ಆಸ್ಪತ್ರೆಗೆ ಶಿಫ್ಟ್ ಮಾಡಿ ಎಲ್ಲಾ ಮಕ್ಕಳ ಜೀವ ರಕ್ಷಣೆ ಮಾಡುವ ಮೂಲಕ ಇಡೀ ರಾಜ್ಯದಲ್ಲೇ ಹೆಸರು ಗಳಿಸಿದ್ದಾರೆ. ಕೋವಿಡ್ ಸಂದರ್ಭ ದಲ್ಲಿ ವೈಯಕ್ತಿಕವಾಗಿ ಫುಡ್‌ಕಿಟ್ ವಿತರಣೆ, ಆರೋಗ್ಯ ಸೇವೆ ಸಲ್ಲಿಸುವ ಮೂಲಕ ತಾವು ಎಂದಿಗೂ ಜನಪರ ಮತ್ತು ಜೀವಪರ ಎಂದು ಸಾಬೀತುಪಡಿಸಿದ್ದಾರಲ್ಲದೇ ಇಂದಿಗೂ ಸಹ ತಮ್ಮ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ತಮ್ಮ ಕೈಲಾದ ನೆರವು ಹಾಗೂ ಸೇವೆ ಸಲ್ಲಿಸುವ ಮೂಲಕ ಜನಮನ ಗೆದ್ದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮೈತ್ರಿ ಅಭ್ಯರ್ಥಿಗಳಾದ ಭೋಜೇಗೌಡ ಮತ್ತು ಡಾ| ಸರ್ಜಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಆಶೀರ್ವದಿಸಬೇಕೆಂದ ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಕಾರ್‍ಯಾಧ್ಯಕ್ಷ ದಾದಾಪೀರ್, ಪ್ರಮುಖರಾದ ಸಿದ್ದಪ್ಪ, ದಾನೇಶ್, ಪ್ರೇಮ್‌ಕುಮಾರ್, ಸಂಜಯ್, ನಿಹಾಲ್ ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif