ಜಿಲ್ಲಾ ಸುದ್ದಿತಾಜಾ ಸುದ್ದಿ

ಕೃಷಿ ಕ್ಷೇತ್ರದಲ್ಲಿ ಗ್ರಾಮೀಣ ನಾಯಕತ್ವ ರೂಪಿಸಲು ರಾಜ್ಯಮಟ್ಟದ ಶಿಬಿರ…

Share Below Link

ಶಿಕಾರಿಪುರ : ಕೃಷಿ ಕ್ಷೇತ್ರದಲ್ಲಿ ಬದಲಾವಣೆಯ ವೇಗ ವಿಪರೀತವಾಗಿದ್ದು, ಕಾಲಕ್ಕೆ ತಕ್ಕಂತೆ ಬದಲಾವಣೆ ಮೂಲಕ ಯುವ ಪೀಳಿಗೆಗೆ ವೈಚಾರಿಕತೆ, ಬದ್ದತೆಯ ಜತೆಗೆ ಕೃಷಿ ಕ್ಷೇತ್ರದಲ್ಲಿ ಗ್ರಾಮೀಣ ನಾಯಕತ್ವವನ್ನು ರೂಪಿಸಲು ಮೇ ೩೧ರಿಂದ ಸತತ ೩ ದಿನಗಳ ಕಾಲ ತಾಲೂಕಿನ ಶಿರಾಳಕೊಪ್ಪ ಸಮೀಪದ ತಡಗುಣಿಯ ಅಕ್ಕಮಹಾದೇವಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಕುಟುಂಬದ ಕುಡಿಗಳಿಗೆ ರೈತ ಚಳುವಳಿಯ ನಾಯಕತ್ವದ ರಾಜ್ಯ ಮಟ್ಟದ ೨ನೇ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ ಗಂಗಾಧರ್ ತಿಳಿಸಿದರು.

This image has an empty alt attribute; its file name is Arya-coll.gif


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಕೃಷಿ ಪದ್ದತಿ ಜಗತ್ತಿನಲ್ಲಿ ವಿಶಿಷ್ಟವಾಗಿದ್ದು ಪ್ರಕೃತಿಯು ಶೇ.೭೫ ಸಹಕಾರ ನೀಡಿದರೆ ಕೃಷಿಕರ ಶ್ರಮ ಶೇ.೨೫ ಇದೆ. ಆದರೆ ಇತ್ತೀಚಿನ ವರ್ಷದಲ್ಲಿ ಬದಲಾವಣೆಯಾಗಿದ್ದು ೧೯೯೨ರ ನಂತರದಲ್ಲಿ ವಿಶ್ವ ವಾಣಿಜ್ಯ ಒಪ್ದಂದಕ್ಕೆ ಭಾರತದ ಕೃಷಿಯನ್ನು ಸೇರ್ಪಡೆಗೊಳಿಸಲಾಗಿದೆ ಆಗ್ರೋ ಎಕಾನಮಿಯಲ್ಲಿ ಮಹತ್ತರ ಬದಲಾವಣೆಯಾಗಿದ್ದು ಆ ನಂತರದಲ್ಲಿನ ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಈ ಬಗ್ಗೆ ಸೂಕ್ತವಾದ ಯೋಜನೆ ರೂಪಿಸುವ ಜತೆಗೆ ರಾಜಕೀಯ ಸಂಘರ್ಷವನ್ನು ಮೀರಿ ಕೃಷಿ ಕ್ಷೇತ್ರದ ಅಭಿವೃದ್ದಿ ಮೂಲಕ ಕೃಷಿಕರನ್ನು ಸದಡಗೊಳಿಸಬೇಕಾಗಿದೆ ಎಂದ ಅವರು, ಕೃಷಿಯಲ್ಲಿನ ಬೆಳೆ ವೈವಿಧ್ಯತೆ, ಗೋಸಂಪತ್ತು, ಸಾವಯವ ಕೃಷಿ ಬಗ್ಗೆ ಯೋಜನಾ ಬದ್ದವಾಗಿ ತರಬೇತಿ ನೀಡಿ ಮೂಲ ಬಂಡವಾಳ, ಆದಾಯ ಹೆಚ್ಚಳ ಬಗ್ಗೆ ರೈತರಿಗೆ ಸೂಕ್ತ ತರಬೇತಿ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕೃಷಿಕರ ಮಕ್ಕಳಿಗೆ ವೈಚಾರಿಕತೆ, ಬದ್ದತೆಯ ಜತೆಗೆ ಕೃಷಿ ಕ್ಷೇತ್ರದಲ್ಲಿ ಗ್ರಾಮೀಣ ನಾಯಕತ್ವ ರೂಪಿಸುವುದು ಅತ್ಯಗತ್ಯವಾಗಿದೆ ಅಗ್ರಿಕಲ್ಚರಲ್ ಇಂಜಿನಿಯರಿಂಗ್, ಆಗ್ರೋ ಇಂಜಿನಿಯರಿಂಗ್, ವಾಟರ್ ಮ್ಯಾನೇಜಮೆಂಟ್ ಬಗ್ಗೆ ಸೂಕ್ತ ಮಾಹಿತಿ ದೊರಕಿಸಿ ಕೊಡುವುದು, ಕೃಷಿಯಲ್ಲಿನ ಸಮಸ್ಯೆ ಗಳ ಬಗ್ಗೆ ಹೋರಾಟದ ಮೂಲಕ ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸಲು ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದಲ್ಲಿ ಶ್ರಮಿಸುತ್ತಿದೆ. ಈ ದಿಸೆಯಲ್ಲಿ ಈ ಹಿಂದೆ ರಾಮನಗರದ ಜನಪದ ಲೋಕದಲ್ಲಿ ರೈತ ಕುಟುಂಬದ ಕುಡಿಗಳಿಗೆ ರೈತ ಚಳುವಳಿಯ ನಾಯಕತ್ವದ ಪ್ರಥಮ ಶಿಬಿರವನ್ನು ನಡೆಸಲಾಗಿದ್ದು ಈ ಬಾರಿ ದಾವಣಗೆರೆಯ ಕೊಂಡಜ್ಜಿ ಬಳಿ ಹಮ್ಮಿಕೊಳ್ಳಲು ನಿರ್ದರಿಸಲಾಗಿದ್ದ ಶಿಬಿರ ಜಿಯ ರೈತ ನಾಯಕರ ಒತ್ತಾಯದ ಮೇರೆಗೆ ಬದಲಾಯಿಸ ಲಾಗಿದೆ ಎಂದ ಅವರು, ರಾಜ್ಯದಲ್ಲಿ ಶಿವಮೊಗ್ಗ ಜಿ ರೈತ ಚಳುವಳಿ, ಸಮಾಜವಾದಿ ಚಳುವಳಿ, ಗೇಣಿದಾರರ ಚಳುವಳಿ, ದಲಿತ ಚಳುವಳಿ ಸಹಿತ ಹಲವು ಹೋರಾಟದ ಉಗಮ ಸ್ಥಾನವಾಗಿ ಗುರುತಿಸಿಕೊಂಡಿದೆ ಈ ಹಿನ್ನಲೆ ಯಲ್ಲಿ ತಾಲೂಕಿನ ಶಿರಾಳಕೊಪ್ಪ ಸಮೀಪದ ತಡಗುಣಿಯ ಅಕ್ಕಮಹಾದೇವಿ ಪ್ರೌಢಶಾಲೆಯಲ್ಲಿ ಮೇ ೩೧ ರಿಂದ ಸತತ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದರು.
ಶಿಬಿರದಲ್ಲಿ ರಾಜ್ಯದ ೨೦ ಜಿಯ ನೋಂದಾಯಿತ ೧೦೦ಕ್ಕೂ ಅಧಿಕ ಸಕ್ರೀಯ ಆಸಕ್ತ ಯುವ ಕೃಷಿಕರು ಪಾಲ್ಗೊಳ್ಳಲಿzರೆ ಎಂದು ತಿಳಿಸಿದ ಅವರು, ನಿತ್ಯ ನಡೆಯುವ ೨ ಗೋಷ್ಠಿಯಲ್ಲಿ ಸ್ವಾತಂತ್ರ ಪೂರ್ವ ದಲ್ಲಿನ ಅಗ್ರಿಕಲ್ಚರಲ್ ಎಕಾನಮಿ, ಸ್ವಾತಂತ್ರಾ ನಂತರದಲ್ಲಿ ಪಂಚವಾರ್ಷಿಕ ಯೋಜನೆ ಜರಿ ನಂತರ ಕೃಷಿ ಬಿಕ್ಕಟ್ಟಿನ ಬಗ್ಗೆ ತಜ್ಞರಿಂದ ಮಾಹಿತಿ ಕಾರ್ಯಾಗಾರ ಪರಿಹಾರೋಪಾಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಕೃಷಿಕರು, ರೈತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿ ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಜಿಧ್ಯಕ್ಷ ಹಾಲೇಶಪ್ಪಗೌಡ್ರು, ಕಾರ್ಯಾಧ್ಯಕ್ಷ ಪುಟ್ಟಣ್ಣಗೌಡ್ರು, ಭದ್ರಾವತಿ ಘಟಕ ಅಧ್ಯಕ್ಷ ಹಿರಣ್ಣಯ್ಯ, ಶಿಕಾರಿಪುರ ಅಧ್ಯಕ್ಷ ರಾಜಣ್ಣ ಮುಗಳಿಕೊಪ್ಪ, ಸೊರಬ ಅಧ್ಯಕ್ಷ ಚಂದ್ರಶೇಖರ ಬಾಪಟ್, ಶಿವಮೊಗ್ಗ ಅಧ್ಯಕ್ಷ ಗಿರೀಶ್, ಜಗದೀಶ್ ನಾಯ್ಕ, ಪ್ರ.ಕಾ ಎಚ್.ಎಸ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.