ಜಿಲ್ಲಾ ಸುದ್ದಿತಾಜಾ ಸುದ್ದಿ

ಮೇ ೨೬: ಕ್ಷತ್ರೀಯ ಮರಾಠ ವಿದ್ಯಾರ್ಥಿ ನಿಲಯ ಲೋಕಾರ್ಪಣೆ…

Share Below Link

ಶಿವಮೊಗ್ಗ: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಶಿವಮೆಗ್ಗ ಜಿ ಶಾಖೆ ವತಿಯಿಂದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿ ನಿಲಯದ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಭೂಮಿ ಪೂಜೆ ಕಾರ್ಯಕ್ರಮ ಮೇ ೨೬ರ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ಜಿ ಉಪಾಧ್ಯಕ್ಷ ಹೆಚ್.ಬಿ. ರಮೇಶ್ ಬಾಬು ಜದವ್ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿರುವ ಗೋಸಾಯಿ ಮರಾಠ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಅವರು ದಿವ್ಯ ಸಾನಿಧ್ಯವಹಿಸಿ ವಿದ್ಯಾರ್ಥಿನಿಲಯ ಉದ್ಘಾಟಿಸಲಿzರೆ ಎಂದರು. ಮುಖ್ಯ ಅತಿಥಿಯಾಗಿ ಪರಿಷತ್‌ನ ರಾಜ್ಯ ಗೌರ್‍ನಿಂಗ್ ಕೌನ್ಸಿಲ್ ಛೇರ್ಮನ್ ಎಸ್.ಆರ್.ಸಿಂಧ್ಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ಸುನೀಲ್ ಚವಾಣ್, ಖಜಂಚಿ ಟಿ.ಆರ್. ವೆಂಕಟರಾವ್ ಚವಾಣ್, ಕರ್ನಾಟಕ ಮರಾಠ ಸಮುದಾಯಗಳ ಅಭಿವದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ್ ಆರ್.ಪಾಗೋಜಿ ಆಗಮಿಸಲಿದ್ದು, ಛತ್ರಾಪತಿ ಶಿವಾಜಿ ಮರಾಠ ಟ್ರಸ್ಟ್‌ನ ಅಧ್ಯಕ್ಷ ಹೆಚ್.ಸಿದ್ಧೋಜಿರಾವ್ ಜಧವ್, ಶಿವಮೆಗ್ಗದ ಕ್ಷತ್ರಿಯ ಮರಾಠ ಸಹಕಾರ ಸಂಘದ ಆರ್.ಬಿ. ಸುರೇಶ್ ಬಾಬು ಮೋರೆ, ಪರಿಷತ್‌ನ ನಗರಾಧ್ಯಕ್ಷ ಬಿ.ಕೆ. ದಿನೇಶ್‌ರಾವ್ ಚವಾಣ್, ಶಿವಮೆಗ್ಗ ತಾಲ್ಲೂಕು ಗ್ರಾಮಾಂತರ ಅಧ್ಯಕ್ಷರು ದೇವರಾಜ್ ಶಿಂಧೆ ಎಂ.ಡಿ. ಆಗಮಿಸಲಿzರೆ ಎಂದರು.
ಕಾರ್ಯಕ್ರಮದಲ್ಲಿ ಇಂದಿರಾಬಾಯಿ ಲಕ್ಷ್ಮೀಕಾಂತ್ ಪವಾರ್ ಹಾಗೂ ಮಿಥುನ್ ಜೆ.ಜಗದಾಳೆ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್‌ನ ರಾಜಧ್ಯಕ್ಷೆ ಎಸ್. ಸುರೇಶ್‌ರಾವ್ ಸಾಠೆ ವಹಿಸಲಿzರೆ ಎಂದರು.
ಪರಿಷತ್‌ನ ಜಿ ಪ್ರಧಾನ ಕಾರ್ಯದರ್ಶಿ ಆರ್.ಬಿ.ಸುರೇಶ್‌ಬಾಬು ಮೋರೆ ಮಾತನಾಡಿ, ಸೂಡಾದಿಂದ ನಿವೇಶನ ಖರೀದಿಸಲಾಗಿದ್ದು, ಸುಮಾರು ೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿ ನಿಲಯದಲ್ಲಿ ೨೯ ಕೊಠಡಿಗಳಿದ್ದು, ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೀಡಲಾಗುವುದು. ನಿವೇಶನದ ಖಾಲಿ ಜಗದಲ್ಲಿ ಸಮುದಾಯ ಭವನಕ್ಕೆ ಅಂದು ಭೂಮಿ ಪೂಜೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ನ ಜಿಧ್ಯಕ್ಷ ಆರ್.ಚಂದ್ರರಾವ್ ಘಾರ್ಗೆ, ಕಾರ್ಯಾಧ್ಯಕ್ಷ ಇ.ಚೂಡಾಮಣಿ ಪವಾರ್, ಉಪಾಧ್ಯಕ್ಷರಾದ ಹೆಚ್.ಸಿದ್ಧೋಜಿರಾವ್ ಜಧವ್, ಪ್ರಮುಖರಾದ ಡಿ.ಎಂ. ರಾಜ್‌ಕುಮಾರ್ ಜಗತಾಪ್, ಬಿ.ಕೆ.ದಿನೇಶ್‌ರಾವ್ ಚವಾಣ್, ಡಿ.ತುಕಾರಾಂ ಮಾನೆ ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif