ಜಿಲ್ಲಾ ಸುದ್ದಿತಾಜಾ ಸುದ್ದಿ

ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನ : ಕಾರ್ಯಕರ್ತರ ಸಂಭ್ರಮ – ವಿವಿಧ ದೇವಳಗಳಲ್ಲಿ ವಿಶೇಷ ಪೂಜೆ

Share Below Link

ಬೆಂಗಳೂರು : ಭಾರತದ ೧೧ನೇ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಇಂದು ೯೧ ವರ್ಷ ಪೂರೈಸಿದ್ದು, ೯೨ನೇ ವರ್ಷಕ್ಕೆ ಪಾದಾರ್ಪಣೆ ಮಾಡಿzರೆ. ಇಂದು ಬೆಳಿಗ್ಗೆ ದೇವೇಗೌಡರು ತಮ್ಮ ಹುಟ್ಟುಹಬ್ಬದ ನಿಮಿತ್ತ ಜೆ.ಪಿ. ನಗರದ ತಿರುಮಲಗಿರಿ ವೆಂಕಟ ರಮಣ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ದೇವೇ ಗೌಡರ ಪುತ್ರ ಬಾಲಕೃಷ್ಣೇಗೌಡ ಅವರು ಗೌಡರ ಜೊತೆಗಿದ್ದರು. ಕಾರಣಾಂತರಗಳಿಂದ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ. ಜೆಡಿಎಸ್‌ನ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾವಿದ್ದಲ್ಲಿಯೇ ಹಾರೈಸಬೇಕು ಎಂದು ಗೌಡರು ಕೋರಿದ್ದರು. ಅಲ್ಲದೆ, ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸ ಬೇಕು ಹಾಗೂ ಬದ್ಧತೆಯಿಂದ ಪಕ್ಷ ಸಂಘಟನೆಯ ಕರ್ತವ್ಯ ನಿರ್ವಹಿಸ ಬೇಕು ಎಂದು ಕೋರಿದ್ದರು.
ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯದ ಹಲವು ಗಣ್ಯರು ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿzರೆ. ದೇವೇಗೌಡರು ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಅವರು, ಕೃಷಿ, ಗ್ರಾಮೀಣಾಭಿವೃದ್ಧಿ ಕುರಿತಂತೆ ಗೌಡರು ಹೊಂದಿರುವ ಒಲವು ಗಮನಾರ್ಹವಾಗಿದೆ. ಅವರಿಗೆ ದೀರ್ಘವಾದ ಆಯಸ್ಸು, ಆರೋಗ್ಯ ದೊರೆಯಲಿ ಎಂದು ಪ್ರಾರ್ಥಿಸಿzರೆ.
ಶಿವಮೊಗ್ಗ ಜಿ ಯುವ ಜನತಾ ದಳ(ಜ) ವತಿಯಿಂದ ಜಿಲ್ಲಾಧ್ಯಕ್ಷ ಮಧು ಕುಮಾರ್ ನೇತೃತ್ವದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್ ಡಿ ದೇವೇಗೌಡ ರವರ ಜನ್ಮದಿನದ ಪ್ರಯುಕ್ತ ಜಿ ಘಟಕದ ಅಧ್ಯಕ್ಷ ಕಡಿದಾಳ್ ಗೋಪಾಲಗೌಡ ಅವರು ಪಕ್ಷದ ಕಛೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಜೆಡಿಎಸ್ ನಗರ ಘಟಕದಿಂದ ಶಿವಮೊಗ್ಗ ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ದೀಪಕ್ ಸಿಂಗ್ ಅವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನ ಆಚರಿಸಲಾಯಿತು.
ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್, ಜೆಡಿಎಸ್ ಜಿ ಕಾರ್ಯಧ್ಯಕ್ಷ ದಾದಾಪೀರ್, ಯುವ ಜನತಾ ದಳದ ಜಿ ಕಾರ್ಯಧ್ಯಕ್ಷ ಎಸ್ ಎಲ್ ನಿಖಿಲ್, ಅಲ್ಪಸಂಖ್ಯಾತ ಘಟಕದ ಜಿ ಅಧ್ಯಕ್ಷರಾದ ಮಹಮ್ಮದ್ ಯೂಸುಫ್, ನಗರಧ್ಯಕ್ಷರಾದ ದೀಪಕ್ ಸಿಂಗ್, ನಗರ ಮಹಾ ಪ್ರಧಾನ ಕಾರ್ಯದರ್ಶಿ ವಿನಯ್, ಪ್ರಧಾನ ಕಾರ್ಯದರ್ಶಿ ಗೋವಿಂದ್‌ರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಯ್ಯ, ಪ್ರಚಾರ ಸಮಿತಿಯ ಅಧ್ಯಕ್ಷ ಸಿದ್ದಪ್ಪ, ಜಿ ವಕ್ತಾರ ನರಸಿಂಹ ಗಂಧದ ಮನೆ, ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷ ಸಂತೋಷ್, ಗೋಪಿ, ಲೋಹಿತ್ ಮತ್ತು ಮಾಧವ ಮೂರ್ತಿ, ಪ್ರಮುಖರಾದ ಕೃಷ್ಣಪ್ಪ ದಯಾನಂದ್, ಚಂದ್ರು, ಶ್ಯಾಮ್ ಸಿzಶ್, ಪ್ರಶಾಂತ್ ಮಹಿಳಾ ಪ್ರಮುಖರಾದ ಜ್ಯೋತಿ, ಲಕ್ಷ್ಮಿ ನರಸಿಂಹ ಮತ್ತಿತರರು ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif