ಜಿಲ್ಲಾ ಸುದ್ದಿತಾಜಾ ಸುದ್ದಿ

ಹಜರತ್ ಸೈಯ್ಯದ್ ಸಾದತ್ ಷಾ ಖಾದ್ರಿ ದರ್ಗಾದಿಂದ ೪ ದಿನಗಳ ಕಾಲ ಸಂದಲ್, ಉರುಸ್…

Share Below Link

ಭದ್ರಾವತಿ : ನಗರದ ತರೀಕೆರೆ ರಸ್ತೆಯ ಹಜರತ್ ಸೈಯ್ಯದ್ ಸಾದತ್ ಷಾ ಖಾದ್ರಿ ದರ್ಗಾದಿಂದ ಈ ಬಾರಿ ೪ ದಿನಗಳ ಕಾಲ ಸಂದಲ್ ಮತ್ತು ಉರುಸ್ ವಿಜಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದರ್ಗಾ ಕಮಿಟಿ ಅಧ್ಯಕ್ಷ ಮಹಮದ್ ಆದಿಲ್ ಹೇಳಿದರು.


ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮೇ ೧೮ರವರೆಗೆ ವಿಶೇಷವಾಗಿ ಕಾರ್ಯ ಕ್ರಮ ಆಚರಿಸಲಾಗುತ್ತಿದೆ.
ಮೇ ೧೭ರ ನಾಳೆ ಸಂಜೆ ೬.೫೦ಕ್ಕೆ ಹಜರತ್ ಸೈಯ್ಯದ್ ಸಾದತ್ ಷಾ ಖಾದ್ರಿರವರ ಸರ್ವ ಧರ್ಮ ಕಾರ್ಯಕ್ರಮ ನಡೆಯ ಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿzರೆ. ದರ್ಗಾ ಕಮಿಟಿ ಮಾಜಿ ಅಧ್ಯಕ್ಷ ಮಹಮದ್ ಯೂನುಸ್ ಮತ್ತು ಶಿವಮೊಗ್ಗ (ಎಐಎಂಐಎಂ) ಜಿಧ್ಯಕ್ಷ ಅಬ್ದುಲ್ ನವೀದ್ ಅಧ್ಯಕ್ಷತೆ ವಹಿಸಲಿzರೆ. ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜ ಖಾನ್, ಜಿ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಮಲಾನಾ ಷಾಹುಲ್ ಹಮೀದ್, ಡಾ. ಮಹಾಂತ ಸ್ವಾಮೀಜಿ, ಮಲಾನ ಸೈಯ್ಯದ್ ಗೌಸ್ ರಜ್ವಿ, ಡಾ. ದೇವನೇಸನ್ ಸ್ಯಾಮ್ಯುಯಲ್, ಮುನವರ್ ಪಾಷಾ, ಶ್ರೀಪಾಲ್, ನೌಫೀಖ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಾಗು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಅಂದು ರಾತ್ರಿ ೯ ಗಂಟೆಗೆ ಉರುಸ್ ಕಾರ್ಯಕ್ರಮ ನಡೆಯ ಲಿದ್ದು, ಸಾದತ್ ಕಾಲೋನಿ ಏ ಅಲ್ ಹಜರತ್ ಮಸೀದಿಯ ಮಲಾನ ಮಹಮದ್ ನಿಝಾಮುದ್ದೀನ್ ರಜ್ವಿ ಪ್ರಾರ್ಥಿಸ ಲಿದ್ದು, ಸೈಯದ್ ಮುಜಹಿದ್ ರಝಾ ನಜ್ಮಿ ಸ್ವಾಗತಿಸಲಿzರೆ. ಹಾನ್‌ಗಲ್ ಸಲೀಂ ಮಖ್‌ಬೂಲಿ ಉಪಸ್ಥಿತರಿರುವರು. ದಾವಣಗೆರೆ ಅಲ್ಲಮಾ ಮಲಾನಾ ಇಲ್ಯಾಸ್ ಖಾದ್ರಿ ಮುಖ್ಯ ಭಾಷಣಕಾರರಾಗಿ ಹಾಗು ಬೆಂಗಳೂರಿನ ಅಲ್ಲಮಾ ಮಲಾನಾ ಇಲ್ಯಾಸ್ ಖಾದ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿzರೆ ಎಂದರು.
ಮೇ ೧೮ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ಸುನ್ನತ್-ಎ-ಇಬ್ರಾಹೀಮಿ ಕಾರ್ಯಕ್ರಮ ಮೆಹ್ಫೀಲೆ ಸಮಾ ನಡೆಯಲಿದ್ದು, ವಾಸ್ಕೋ ಗೋವಾ ಚಾಂದ್ ಅತೀಷ್ ಖವ್ವಾಲ್ ಮತ್ತು ಬೆಂಗಳೂರಿನ ಮುಜಮ್ಮಿಲ್ ದರಾಜ್ ಹಾಗು ನಗರದ ವಿವಿಧ ಮಸೀದಿಗಳ ಪ್ರಮುಖರು ಉಪಸ್ಥಿತರಿರುವರು.
ಎ ಕಾರ್ಯಕ್ರಮಗಳಿಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಯಶಸ್ವಿಗೊ ಳಿಸುವಂತೆ ಕೋರಿದರು.
ಪ್ರಮುಖರಾದ ಮುರ್ತು ಜಖಾನ್, ಮಹಮದ್ ಯೂ ನುಸ್, ಅಬ್ದುಲ್ ನವೀದ್, ಅಫ್ತಾಬ್ ಅಹಮದ್, ಮಹ ಮದ್ ಯೂಸೂಫ್ (ಹೈದರ್), ಇಬ್ರಾಹಿಂ ಖಾನ್, ಅಬ್ದುಲ್ ಖದೀರ್, ಮೆಹ್ಸಿನ್ ಖಾನ್, ಜಮೀಲ್ ಅಹಮದ್, ಶೌಕತ್, ಬಿ. ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif