ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬದುಕು ಕಟ್ಟಿಕೊಳ್ಳಲು ಸ್ವ ಉದ್ಯೋಗ ತರಬೇತಿ ಪೂರಕ…

Share Below Link

ಶಿವಮೊಗ್ಗ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿeನಗಳ ವಿವಿ , ಕೃಷಿ ಮಹಾವಿದ್ಯಾಲಯ ಮತ್ತು ಐಸಿಎಆರ್-ಕೃಷಿ ವಿeನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಬೇಕರಿ ಹಾಗೂ ಕನ್ಫೆಕ್ಷನರೀಸ್ ಮತ್ತು ಹೈಟೆಕ್ ಅಣಬೆ ಬೇಸಾಯ ಕುರಿತ ೧೦ ದಿನಗಳ ತರಬೇತಿ ಶಿಬಿರವನ್ನು ವಿವಿ ಶಿಕ್ಷಣ ನಿರ್ದೇಶಕ ಡಾ. ಬಿ. ಹೇಮಲ ನಾಯಕ್ ಉದ್ಘಾಟಿಸಿ ಮಾತನಾ ಡಿದರು.


ರೈತರಿಗೆ, ಮುಖ್ಯವಾಗಿ ಯುವಕ ಯುವತಿಯರಿಗೆ ಬದು ಕು ಕಟ್ಟಿಕೊಳ್ಳಲು ಈ ರೀತಿಯ ಶಿಬಿರಗಳು ಉಪಯುಕ್ತವಾಗಲಿದೆ. ಹಾಗೂ ಆರೋಗ್ಯಕರ ತಿಂಡಿ ತಿನಿಸುಗಳನ್ನು ಮಾಡಲು ಬೇಕರಿ ಉದ್ಯಮ ಮತ್ತು ಅಪೌಷ್ಟಿಕತೆ ಯನ್ನು ನಿರ್ವಹಣೆ ಮಾಡುವಲ್ಲಿ ಅಣಬೆ ಬೇಸಾಯ ಉದ್ಯಮಗಳು ಬಹಳ ಪ್ರಾಮುಖ್ಯತೆ ಹೊಂದಿದೆ. ಪೂರಕ ಮಾರುಕಟ್ಟೆ ಸಂಪರ್ಕದೊ ಂದಿಗೆ ರೈತ ಮತ್ತು ರೈತ ಮಹಿಳೆ ಯರು ಯಶಸ್ವಿ ಉದ್ಯಮಿಗಳು ಆಗಬಹ್ಮದು ಎಂದರು.
ವಿವಿ ಕುಲಪತಿಗಳಾದ ಡಾ. ಆರ್. ಸಿ. ಜಗದೀಶ್ ಮಾತನಾಡಿ, ವಿವಿ ೪ ಲಕ್ಷ ರೈತರಿಗೆ ಕೃಷಿ ಹಾಗೂ ಕೃಷಿಯೇ ತರ ತಂತ್ರeನಗಳನ್ನು ತಲುಪಿ ಸುವ ಗುರಿ ಹೊಂದಿದೆ. ಬೇಕರಿ ಮತ್ತು ಅಣಬೆ ಉದ್ಯಮ ಗಳು ಸ್ವ ಉದ್ಯೋಗವನ್ನು ಸೃಷ್ಟಿ ಸ್ಮತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂ ತಹ ಆಹಾರಗಳನ್ನು ಪೂರೈಸಲು ಹಾಗೂ ಸುಸ್ಥಿರ ಜೀವನಕ್ಕಾಗಿ ಸೂಕ್ತ ಕೌಶಲ್ಯಾಭಿವೃದ್ಧಿ ತರಬೇತಿಯು ಅತ್ಯಗತ್ಯವಾಗಿದೆ.
ಬೇಕರಿಯಲ್ಲಿ ಮೈದಾ ಹಿಟ್ಟು ಹಾಗೂ ಗೋಧಿ ಹಿಟ್ಟಿನ ಬದಲಾಗಿ ಇತರ ಪೋಷಕಾಂಶಯುಕ್ತ ಪದಾ ರ್ಥಗಳು ಮತ್ತು ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಬೇಕು. ಅಣಬೆ ಸ್ವ ಉದ್ಯೋಗದ ಬಗ್ಗೆ, ಮಲ್ಯವರ್ಧನೆಯ ಬಗ್ಗೆ ಯುವಕ ಯುವತಿಯರಲ್ಲಿ eನವನ್ನು ಹೆಚ್ಚಿಸುವುದರೊಂದಿಗೆ, ಸ್ವ- ಉದ್ಯೋಗ ಪ್ರಾರಂಭಿಸಲು ದೊರೆ ಯುವ ಹಣಕಾಸಿನ ಸೌಲಭ್ಯಗಳು, ಖರ್ಚು-ವೆಚ್ಚಗಳ ನಿರ್ವಹಣೆ, ಮಾರುಕಟ್ಟೆಯ ಮಾರ್ಗಗಳ ಬಗ್ಗೆ ತರಬೇತಿಯಲ್ಲಿ ಶಿಬಿರಾರ್ಥಿಗಳು ಆಸಕ್ತಿಯಿಂದ ಕಲಿಯಬೇಕು ಮತ್ತು ತರಬೇತಿಯನ್ನು ಪಡೆದ ನಂತರ ಇತರರಿಗೂ ಮಾರ್ಗ ದರ್ಶಕರಾಗಿ ಸೇವೆ ಸಲ್ಲಿಸಬಹುದು ಎಂದರು.
ಕೃಷಿ ವಿಸ್ತರಣಾ ನಿರ್ದೇಶಕ ಡಾ. ಕೆ. ಟಿ. ಗುರುಮೂರ್ತಿ ಮಾತನಾಡಿ, ಶುಲ್ಕ ಸಹಿತ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ವನ್ನು ಆಯೋಜಿಸುವುದು ವಿವಿ ಹಲವು ವರ್ಷಗಳ ಪರಿಶ್ರಮ ವಾಗಿದೆ. ಹಾಗಾಗಿ ಈ ತರಬೇತಿ ಯಿಂದ ಸಿಗುವ ಮಾಹಿತಿಯನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟದ ಉದ್ಯಮ ಶೀಲರಾಗಿ ಎಂದರು.
ಈ ಸಂದರ್ಭದಲ್ಲಿ ಸ್ನಾತಕೋ ತ್ತರ ವಿಭಾಗದ ಡೀನ್ ಡಾ. ಎಂ. ದಿನೇಶ್ ಕುಮಾರ್, ಆಯೋಜಕ ಡಾ. ನಂದೀಶ್ ಎಂ. ಎಸ್, ಡಾ. ಸುಧಾರಾಣಿ, ಡಾ. ಜಿ. ಕೆ. ಗಿರಿಜೇಶ್ ವಿವಿಧ ತಾಲೂಕು ಗಳಿಂ ದ ಆಗಮಿಸಿದ ಶಿಭಿರಾರ್ಥಿಗಳು ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif