ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ವಿರೋಧಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ದಾರ್ಷ್ಯತನ ಬೆಳೆಸಿಕೊಳ್ಳಿ: ಬಿವೈಆರ್

Share Below Link

ಶಿಕಾರಿಪುರ : ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಅಗತ್ಯವಾದ ಸಕಲ ಸೌಲಭ್ಯವನ್ನು ಕಲ್ಪಿಸಿಕೊಟ್ಟರೂ ಚುನಾವಣೆಯಲ್ಲಿ ವಿರೋಧಿ ಅಭ್ಯರ್ಥಿ ಜಯಗಳಿಸುವ ಬಗ್ಗೆ ಬಹಿರಂಗ ಸವಾಲು ಹಾಕುವ ವಿರೋಧಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ದಾರ್ಷ್ಯತನವನ್ನು ಪಕ್ಷದ ಕಾರ್ಯಕರ್ತರು ಬೆಳೆಸಿಕೊಳ್ಳುವಂತೆ ಸಂಸದ ಬಿ.ವೈ ರಾಘವೇಂದ್ರ ಸಲಹೆ ನೀಡಿದರು.


ಪಟ್ಟಣದ ಕುಮದ್ವತಿ ವಸತಿ ಶಾಲೆಯ ಒಳಾಂಗಣ ಕ್ರೀಡಾಂಗಣ ದಲ್ಲಿ ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ನಡೆದ ಪಕ್ಷದ ಮುಖಂಡರು ಪ್ರಮುಖ ಕಾರ್ಯ ಕರ್ತರು, ಮಹಿಳಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜದ್ಯಂತ ಲೋಕಸಭಾ ಚುನಾವಣೆ ಪೂರ್ಣ ಗೊಂಡಿದ್ದು, ಇದರೊಂದಿಗೆ ವಿಧಾನಪರಿಷತ್ತಿನ ಚುನಾವಣೆಗಳು ಘೋಷಣೆಯಾಗಿದೆ. ಮತದಾರರ ಮನವೊಲಿಕೆಗೆ ಹೆಚ್ಚಿನ ಸಮಯಾವ ಕಾಶವಿಲ್ಲವಾಗಿದೆ ಜೂ.೩ ರಂದು ಚುನಾವಣೆ ನಿಗದಿಯಾಗಿದ್ದು ಕಡಿಮೆ ಅವಧಿಯಲ್ಲಿ ಕಾರ್ಯಕರ್ತರು ಮತದಾರರನ್ನು ಭೇಟಿಯಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಗೆಲುವಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕಾಗಿದೆ ಎಂದರಲ್ಲದೇ, ಲೋಕಸಭಾ ಚುನಾವಣೆ ಹಿನ್ನಲೆ ಯಲ್ಲಿ ಮುಖಂಡರು ಕಾರ್ಯಕರ್ತರು ದಣಿದಿದ್ದು ಕುಟುಂಬದ ಜತೆ ಸಮಯ ನೀಡದೆ ಪಕ್ಷಕ್ಕಾಗಿ ಅಮೂಲ್ಯ ಸಮಯ ನೀಡಿದ್ದನ್ನು ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ಡಾ| ಧನಂಜಯ ಸರ್ಜಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಯಾಗಿದ್ದು ಇದರೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಶಿಕ್ಷಕರ ಕ್ಷೇತ್ರಕ್ಕೆ ಭೋಜೆಗೌಡ ಅವರು ಸ್ಪರ್ಧಿಸಲಿದ್ದು ಮೈತ್ರಿ ಕೂಟದ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಮತದಾರರ ಮನವೊಲಿಕೆ ಮೂಲಕ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಎಸ್.ಎಂ ಕಷ್ಣ ನಂತರದಲ್ಲಿ ಎಲ್ಲ ೪ ಶಾಸನಸಭೆಗೆ ಪಕ್ಷದ ಮೂಲಕ ಸದಸ್ಯರಾದ ಆಯನೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಕಣದಲ್ಲಿದ್ದು ಈ ಬಾರಿ ಸೂಕ್ತ ಉತ್ತರ ನೀಡಬೇಕಾದ ಸವಾಲಿನ ಚುನಾವಣೆಯಾಗಿದೆ. ಪರಿಷತ್ತಿನಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಬಹು ಮುಖ್ಯವಾದ ವಿಧಾನ ಪರಿಷತ್ ಸ್ಥಾನವನ್ನು ಪಕ್ಷ ಗೆಲ್ಲುವುದು ಅನಿವಾರ್ಯವಾಗಿದ್ದು, ಈ ದಿಸೆ ಯಲ್ಲಿ ಮುಂದಿನ ೧೫ ದಿನ ಹೆಚ್ಚಿನ ರೀತಿಯಲ್ಲಿ ಶ್ರಮವಹಿಸುವಂತೆ ಕರೆ ನೀಡಿದರು.
ಸಾಮಾಜಿಕ ಜಲತಾಣದಲ್ಲಿ ತಾಲೂಕಿನ ಕಲ್ಮನೆ ಗ್ರಾಮದ ವ್ಯಕ್ತಿಯೋರ್ವ ಕಾಂಗ್ರೆಸ್ ಅಭ್ಯರ್ಥಿ ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲಿzರೆ. ಈ ಬಗ್ಗೆ ಟ್ರಾಕ್ಟರ್ ಪಣಕ್ಕಿಟ್ಟಿರುವುದಾಗಿ ಬಹಿರಂಗವಾಗಿ ಸವಾಲು ಹಾಕಿದ್ದು ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಗ್ರಾಮಕ್ಕೆ ರಸ್ತೆ, ನೀರಾವರಿ, ಶಾಲೆ ಸಹಿತ ಅಗತ್ಯವಾದ ಸಕಲ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಸತತ ೪೦ ವರ್ಷಗಳ ತಪಸ್ಸಿಗೆ ಬೆಲೆ ಇಲ್ಲವಾ ಎಂದು ಪ್ರಶ್ನಿಸಿದರು.
ಅನಾರೋಗ್ಯ ಪೀಡಿತರು ಗರ್ಭಿಣಿಯರನ್ನು ಹಗಲು ರಾತ್ರಿಯ ಪರಿವಿಲ್ಲದೆ ಆಸ್ಪತ್ರೆಗೆ ದಾಖಲಿಸಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಇದು ಅಪಮಾನವಾಗಬೇಕು. ಅವರು ಹಳೆ ಟ್ರಾಕ್ಟರ್ ಪಣಕ್ಕಿಟ್ಟರೆ ನಾವು ಹೊಸ ಟ್ರಾಕ್ಟರ್ ಪಣಕ್ಕಿಡೋಣ. ಬಿಜೆಪಿ ಗೆಲುವಿನ ಬಗ್ಗೆ ಸಂದೇಹ ಬೇಡ. ಬಹಿರಂಗ ಸವಾಲು ಹಾಕುವ ವಿರೋಧಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವ ದಾರ್ಷ್ಯತನವನ್ನು ಕಾರ್ಯಕರ್ತರು ಬೆಳೆಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ವೇದಿಕೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಉಪಾಧ್ಯಕ್ಷ ವಸಂತಗೌಡ ಜೆಡಿಎಸ್ ಅಧ್ಯಕ್ಷ ಯೋಗೀಶ ಬೆಂಕಿ, ಮುಖಂಡ ಗುರುಮೂರ್ತಿ, ಟಿ.ಎಸ್ ಮೋಹನ, ಹಾಲಪ್ಪ, ಮಹೇಶ್ ಹುಲ್ಮಾರ್, ಗಾಯತ್ರಿದೇವಿ, ಭೂಕಾಂತ್, ಚಂದ್ರಪ್ಪ, ಬಂಗಾರಿನಾಯ್ಕ, ಸಿದ್ರಾಮಪ್ಪ, ಶಶಿಧರ ಚುರ್ಚುಗುಂಡಿ, ಶಿವಪ್ಪ, ಈರಾನಾಯ್ಕ,ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif