ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ವಿಶ್ವ ದಾದಿಯರ ದಿನ…

Share Below Link

ಲೇಖನ: ಕೆ.ಎನ್. ಚಿದಾನಂದ
ಸೇವೆ – ಇದು ಒಂದು ರೀತಿಯ ಕೈಂಕರ್ಯ, ನಾವು ಆಗಾಗ ಮಾತನಾಡುತ್ತಾ ಇರುತ್ತೇವೆ ಅದೇನಂದ್ರೆ, ನಮ್ಮಲ್ಲಿ ಸೇವಾ ಮನೋಭಾವ ಇರಬೇಕು ಅಂತ. ನಿಷ್ಕಲ್ಮಶ ಮನಸ್ಸಿನಿಂದ ಮಾಡಿದ ಸೇವೆ ದೇವರ ಸೇವೆಯಾಗುತ್ತದೆ. ದೇಶ ಸೇವೆಯೇ ಈಶ ಸೇವೆ. ಜನ ಸೇವೆಯೇ ಜನಾರ್ಧನನ ಸೇವೆ ಎಂದೆ ಆಗಾಗ ನಮ್ಮ ಹಿರಿಯರು ಮತ್ತು ನಾವೂ ಹೇಳುತ್ತಿರುತ್ತೇವೆ. ಸೇವಾ ಭಾಗ್ಯ ದೊರೆಯುವುದು ನಮ್ಮ ಪುಣ್ಯವೆಂದು ಭಾವಿಸುತ್ತೇವೆ. ಒಳ್ಳೆಯ, ಸದಾ ಧನಾತ್ಮಕವಾಗಿ ಚಿಂತಿಸುವ, ಸಮಾಜದಲ್ಲಿನ ಜನರ ಆಗುಹೋಗುಗಳಿಗಾಗಿ ಮನ ಮಿಡಿಯುವ ಕೆಲವೊಂದಷ್ಟು ಜನರಿzರೆ. ಇಂತಹ ಜನರು ಸದಾ ಇತರರ ಸಹಾಯಕ್ಕಾಗಿ ಮತ್ತು ಸೇವೆಗಾಗಿ ಹಂಬಲಿಸುತ್ತಾರೆ.
ಸೇವಾ ಮನೋಭಾವ ಇರವಂತಹವರಲ್ಲಿ ಮೊದಲನೇ ಸಾಲಿನ ಮೊದಲ ದೈವ ಅಂದರೆ ತಾಯಿ. ತಾಯಿಯ ನಂತರದ ಸ್ಥಾನ ಸ್ವಾರ್ಥ ರಹಿತ ಸೇವೆ ಮಾಡುವ, ರೋಗಿಗಳ ಹೃದಯದಲ್ಲಿ ಮಾತೃ ಸ್ಥಾನ ಗಳಿಸುವ ದಾದಿಯರು. ಹಗಲಿರುಳೆನ್ನದೆ ತಮ್ಮ ಮನೆಯವರನ್ನೆ ಬಿಟ್ಟು ಬಂದು, ಆಸ್ಪತ್ರೆಗಳಲ್ಲಿ ರೋಗಿಗಳನ್ನು ಗುಣಮುಖರನ್ನಾಗಿಸುವ ಸೇವಾ ಕಾರ್ಯದಲ್ಲಿ ತೊಡಗಿರುವ ಪ್ರಪಂಚದ ಎ ದಾದಿಯರಿಗೂ ಇಂದಿನ ವಿಶ್ವ ದಾದಿಯರ ದಿನದ ಶುಭಾಶಯಗಳು ತಿಳಿಸಲು ಸಂತಸವಾಗುತ್ತದೆ.


ಕೊರೋನಾ ಸಾಂಕ್ರಾಮಿಕ ರೋಗವು ಇಡೀ ವಿಶ್ವವನ್ನೇ ನಡುಗಿದಸಿದ ಸಂದರ್ಭವನ್ನು ನಾವ್ಯಾರೂ ಮರೆಯುವಂತಿಲ್ಲ. ಕೊರೋನಾ ಕಾಲದ ಸನ್ನಿವೇಶದಲ್ಲಿ ರೋಗಿಗಳ ಪಾಲಿನ ದೈವವಾಗಿ , ಹಗಲು-ರಾತ್ರಿಗಳನ್ನದೇ ಅನಾರೋಗ್ಯ ಪೀಡಿತರನ್ನು ಕಾಪಾಡುವ ಸಲುವಾಗಿ, ಮನೆ ಮಂದಿಯನ್ನೆ ಬಿಟ್ಟು ಆಸ್ಪತ್ರೆಗಳಿಗೆ ಬಂದು ಸೇವಾ ಕರ್ತವ್ಯ ನಿರ್ವಹಿಸಿ ಶುಶ್ರೂಷೆ ಮಾಡಿದವರಲ್ಲಿ ಪ್ರಥಮಾದ್ಯ ಸ್ಥಾನ ದಾದಿಯರಿಗೆ ಸಲ್ಲುತ್ತದೆ. ಹೆಸರಿಗಾಗಿ ಸೇವೆ ಮಾಡದೆ , ಸೇವೆ ಮಾಡಿ ಹೆಸರು ಮಾಡದೆ , ಉಸಿರಿರುವ ತನಕವೂ ಸೇವೆಯನ್ನು ಕರ್ತವ್ಯವೆಂದು ಪರಿಗಣಿಸುವಂತಹ ಸೇವಾ ಮನೋಭಾವ ಹೊಂದಿರುವ ದಾದಿಯರೆಲ್ಲರನ್ನು ವಿಶ್ವ ದಾದಿಯರ ದಿನದಂದು ವಿಶ್ವ ವ್ಯಾಪಿಯಾಗಿ ಸ್ಮರಿಸುವಂತಾಗಲಿ.
ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ವಿಶ್ವ ದಾದಿಯರ ದಿನವೆಂದು ಆಚರಿಸಲಾಗುತ್ತದೆ. ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಆಧುನಿಕ ನರ್ಸಿಂಗ್‌ನ ಮಾತೆ ಎಂದು ಕರೆಯಲಾಗುತ್ತದೆ.
ಫ್ಲಾರೆನ್ಸ್ ನೈಟಿಂಗೇಲ್ ಆಧುನಿಕ ನರ್ಸಿಂಗ್ ವ್ಯವಸ್ಥೆಯನ್ನು ಹುಟ್ಟು ಹಾಕಿದವರಾಗಿzರೆ. ಯೂರೋಪಿನ ಇಟಲಿಯಲ್ಲಿ ವಿಲಿಯಂ ನೈಟಿಂಗೇಲ್ ರವರ ಮಗಳಾಗಿ ಕ್ರಿ.ಶ. ೧೮೨೦, ಮೇ ೧೨ ರಂದು ಜನಿಸಿದ ಫ್ಲಾರೆನ್ಸ್ ಬೆಳೆಯುವ ಸಿರಿ ಮೊಳಕೆಯ ಎಂಬ ಮಾತಿನಂತೆ ಚಿಕ್ಕಂದಿನ ಪುಟ್ಟ ಗೊಂಬೆಗಳಿಗೆ ಶುಶ್ರೂಷೆ ಮಾಡುವ ಆಟವನ್ನು ಬಹಳವಾಗಿ ಇಷ್ಟಪಡುತ್ತಿದ್ದರು. ಮುಂದೆ ನರ್ಸಿಂಗ್ ( ಶುಶ್ರೂಷೆ ) ಎಂಬ ಸೇವಾ ಕಾರ್ಯಕ್ಕೆ ಬಹಳಷ್ಟು ಘನತೆ ತಂದು ಕೊಟ್ಟರು.
ಜಗತಿಕ ಇತಿಹಾಸದಲ್ಲಿ ಕ್ರಿ. ಶ. ೧೮೫೩ ರಿಂದ ಕ್ರಿ. ಶ.೧೮೫೬ ರವರೆಗೆ ನಡೆದ ರಷ್ಯಾ ದೇಶದ ಕ್ರಿಮಿಯಾ ಯುದ್ಧದಲ್ಲಿ ಅಪಾರ ಸಂಖ್ಯೆಯಲ್ಲಿ ಸಾವುನೋವುಗಳು ಸಂಭವಿಸಿದವು. ಮಾತೃ ಹೃದಯದ ಸೇವಾಕರ್ತೆ ಫ್ಲಾರೆನ್ಸ್ ನೈಟಿಂಗೇಲ್ ರವರು ಯುದ್ದದಲ್ಲಿ ಗಾಯಗೊಂಡ ಗಾಯಾಳುಗಳನ್ನು ಮಿತ್ರರು ಶತೃಗಳು ಎಂಬ ಯಾವುದೇ ತಾರತಮ್ಯ ಮಾಡದೇ ಶುಶ್ರೂಷೆ ಮಾಡಿದರು. ಆ ಮೂಲಕ ತಮ್ಮ. ೧೭ನೇ ವಯಸ್ಸಿನಲ್ಲಿ ದಾದಿ ವೃತ್ತಿ ಅಥವಾ ಕೆಲಸಕ್ಕೆ ಪಾದಾರ್ಪಣೆ ಮಾಡಿದರು. ಹಗಲಿರುಳೆನ್ನದೆ ಗಾಯಾಳುಗಳ ಆರೋಗ್ಯ ಗುಣವಾಗುವತ್ತ ಶ್ರಮಿಸಿದರು. ರಾತ್ರಿಯ ವೇಳೆಯಲ್ಲಿ ದೀಪವನ್ನಿಟ್ಟುಕೊಂಡು ಒಬ್ಬೊಬ್ಬ ಗಾಯಾಳುವನ್ನು ಉಪಚರಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಲೇಡಿ ವಿತ್ ದಿ ಲ್ಯಾಂಪ್ ( ದೀಪ ಧಾರಿಣಿ ) ಎಂದೇ ಪ್ರಸಿದ್ಧರಾದರು.
ಫ್ಲಾರೆನ್ಸ್ ಬರುವವರೆಗೂ ದಾದಿಯರ ಕೆಲಸಕ್ಕೆ ವಿಶೇಷ ಮನ್ನಣೆ ಇರಲಿಲ್ಲ. ದಾದಿಯರಿಗೆ ವಿಶೇಷವಾದ ಗೌರವ ಪ್ರಾಪ್ತವಾಗುವಂತೆ ಫ್ಲಾರೆನ್ಸ್ ನೈಟಿಂಗೇಲ್ ತನ್ನ ಬದುಕಿನ ದಿನಗಳಲ್ಲಿ ನೋಡಿಕೊಂಡರು. ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು. ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜರಿಗೆ ತರಲು ಪ್ರಯತ್ನಿಸಿದರು.”NOTES ON HOSPITALS” , “NOTES ON NURSING : WHAT IT IS , WHAT IT IS NOT ” ಎಂಬ ಕೃತಿಗಳನ್ನು ಬರೆದರು. ಈ ಕೃತಿಗಳು ಇಂದಿಗೂ ಬಹಳ ಅಪರೂಪವೆನಿಸಿವೆ.


ಯೂರೋಪಿನ ದೇಶಗಳಲ್ಲಿ ಆಸ್ಪತ್ರೆಗಳ ಆರೋಗ್ಯ ಮತ್ತು ನೈರ್ಮಲ್ಯೀಕರಣ ಕುರಿತಂತೆ ಹೊಸ ನಕ್ಷೆಗಳನ್ನು ತಯಾರಿಸುವ ಬಗ್ಗೆ ಅಧ್ಯಯನ ಮಾಡಿದ್ದರು. ಈ ನಕ್ಷೆಯನ್ನು ಇಂಗ್ಲೆಂಡ್‌ನಲ್ಲಿ ಪ್ರಚಾರಮಾಡಿ ಆಸ್ಪತ್ರೆಗಳ ಸ್ವಚ್ಚತೆ ಕಾಪಾಡುವಲ್ಲಿ ಸಫಲರಾದರು. ಇದಕ್ಕಾಗಿ ತನ್ನ ಜೀವಮಾನ ವನ್ನೇ ಮುಡಿಪಾಗಿಟ್ಟರು. ತನ್ನ ಮರಣದ ನಂತರ ತನ್ನ ದೇಹವನ್ನು ಒಂದು ತರಬೇತಿ ಶಾಲೆಯಲ್ಲಿ ಅಧ್ಯಯನಕ್ಕೆ ಉಪಯೋಗವಾಗಬೇಕೆಂದು ಆಶಿಸಿದ್ದರು. ಇಂದಿಗೂ ಇವರು ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲ ಆಸ್ಪತ್ರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ. ಪ್ಲಾರೆನ್ಸ್ ನೈಟಿಂಗೇಲ್ ರವರು ಕ್ರಿ.ಶ. ೧೯೧೦ ರಲ್ಲಿ ತೀರಿಕೊಂಡರು.
ತಮ್ಮ ೯೦ ವರ್ಷಗಳ ತುಂಬು ಜೀವನದಲ್ಲಿ ಮಾನವ ಜನಾಂಗಕ್ಕೆ ಇವರು ಸಲ್ಲಿಸಿದ ಸೇವೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತು. ತನ್ನ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಇಂದು ಮುಂದು ಎಂದೆಂದೂ ಮಾನವ ಜನಾಂಗವನ್ನು ಸಲಹುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾಗಿ ಎಂದೆಂದೂ ನೆನಪಿನಲ್ಲಿ ಉಳಿಯುತ್ತಾರೆ. ಈ ಮಾತೆಗೆ ನಮ್ಮದೊಂದು ಹತ್ಪೂರ್ವಕ ನಮನ.
ದಾದಿಯರು ತಮ್ಮ ವೃತ್ತಿಯನ್ನು ಕೈಗೊಳ್ಳುವ ಮೊದಲು ಮಾಡಬೇಕಾದ ಪ್ರತಿe ; ದೇವರ ಮುಂದೆ, ಇಲ್ಲಿ ನೆರೆದಿರುವವರ ಸಮಕ್ಷಮದಲ್ಲಿ ನಾನು ವಿಧಿವಿಹಿತವಾಗಿ ಹೀಗೆ ವಾಗ್ದಾನ ಮಾಡುತ್ತೇನೆ…
ನನ್ನ ಜೀವನವನ್ನು ನಿಷ್ಕಳಂಕವಾಗಿಟ್ಟುಕೊಂಡು ನನ್ನ ವೃತ್ತಿಯನ್ನು ಶ್ರದ್ಧಾಭಕ್ತಿಯಿಂದ ನಡೆಸುವೆನು. ದೇಹಕ್ಕೆ ಹಾನಿ ಮತ್ತು ಕೇಡು ತರುವ ಎಲ್ಲದರಿಂದಲೂ ನಾನು ದೂರವಿರುತ್ತೇನೆ. ಯಾವ ಕೆಟ್ಟ ಮದ್ದನ್ನೂ ಸೇವಿಸುವುದಿಲ್ಲ. ಗೊತ್ತಿದ್ದು ಇನ್ನೊಬ್ಬರಿಗೆ ಕೊಡುವುದೂ ಇಲ್ಲ. ನನ್ನ ವೃತ್ತಿಯ ಗುಣಮಟ್ಟವನ್ನು ಉನ್ನತೀಕರಿಸಲು ನನ್ನ ಕೈಲಾದುದನ್ನೆಲ್ಲ ಮಾಡುತ್ತೇನೆ. ವೃತ್ತಿಯಲ್ಲಿ ನನ್ನ ಗಮನಕ್ಕೆ ಬರುವ ಕುಟುಂಬ ವ್ಯವಹಾರಗಳನ್ನೂ ನನಗೆ ಹೇಳಿದ ಸ್ವಂತ ವಿಷಯಗಳನ್ನೂ ಗುಟ್ಟಾಗಿರಿಸುವೆನು.
ವೈದ್ಯರಿಗೆ ಅವರ ಕೆಲಸದಲ್ಲಿ ನೆರವಾಗಲು ಯತ್ನಿಸಿ, ನನ್ನ ಪೋಷಣೆಗೊಳಪಟ್ಟು ಬರುವವರ ಹಿತಕ್ಕಾಗಿ ಶ್ರದ್ಧೆ ವಹಿಸುತ್ತೇನೆ.
ಕೋವಿಡ್-೧೯ ವ್ಯಾಪಕ ಸಾಂಕ್ರಾಮಿಕ ರೋಗವಾಗಿದ್ದು ಇಂದು ಜಗತ್ತಿನ ಎ ಜನ ಸಮುದಾಯವನ್ನು ಭಯಭೀತ ರನ್ನಾಗಿಸಿ, ಸಾವಿನೆಡೆಗೆ ಒಯ್ಯುತ್ತಿದ್ದುದು ಈಗಲೂ ಮೈ ಝುಂ ಎನ್ನಿಸುತ್ತದೆ. ಇಂತಹ ಸಂಕಷ್ಟ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ದಾದಿಯರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕೊರೋನ ಸೋಂಕಿತರನ್ನು ಗುಣಮುಖರಾಗಿಸುವಲ್ಲಿ ಪ್ರಯತ್ನ ಮಾಡುತ್ತಿzರೆ. ವಿಶ್ವ ದಾದಿಯರ ದಿನದಂದು ಜಗತ್ತಿನಾದ್ಯಂತ ದಾದಿಯರ ಸೇವೆಯನ್ನು ಶ್ಲಾಘಿಸಿ ಅಭಿನಂದನೀಯ ಪುರಸ್ಕಾರಗಳನ್ನು ನೀಡಿ ಗೌರವಿಸಿ ಸನ್ಮಾನಿಸಲಾಗುತ್ತದೆ.
ದಾದಿಯರನ್ನು ಧರೆಯ ಮೇಲಿನ ದೇವತೆಗಳು ಎನ್ನಲಾಗಿದೆ. ಇಂದು ನರ್ಸಿಂಗ್ ಅಧ್ಯಯನಕ್ಕೆ ವ್ಯಾಪಕ ಬೇಡಿಕೆ ಇದ್ದು ವಿಶೇಷ ಮಾನ್ಯತೆಯನ್ನು ಪಡೆದಿದೆ. ವಿಶ್ವದಾದ್ಯಂತ ದಾದಿಯರ ಸೇವೆ ಸದಾ ಸ್ಮರಣೀಯ. ಪ್ರಪಂಚದ ಎ ದಾದಿಯರಿಗೂ ಮತ್ತು ದಾದಿಯರ ಮನೋಭಾವವುಳ್ಳವರಿಗೂ ದಾದಿಯರ ದಿನದ ಹಾರ್ದಿಕ ಶುಭಾಶಯಗಳು.

This image has an empty alt attribute; its file name is Arya-coll.gif