ಹಿಟ್ಲರ್ ಶೈಲಿಯ ಆಡಳಿತಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ…
ಭದ್ರಾವತಿ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಜನರ ಮನೆ ಮನೆಗೆ ತಲುಪಿ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಅದೇ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಲಕ್ಷ ರೂ.ಗಳನ್ನು ಎ ಮಹಿಳೆಯರಿಗೆ ಕೊಡುವ ಬಗ್ಗೆ ಗ್ಯಾರಂಟಿ ನೀಡಿದ್ದರ ಫಲ ಈ ಭಾರಿಯ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳು ಗೆಲ್ಲುವುದು ನಿಶ್ಚಿತ ಎಂದು ಉತ್ತರ ಕರ್ನಾಟ ಭಾಗದ ಚುನಾವಣಾ ಉಸ್ತುವಾರಿ, ತಮಿಳುನಾಡು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೊಯಮತ್ತೂರು ಮೂಲದ ರಾಜ ಜಯಕುಮಾರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೀಡಿದ ಗ್ಯಾರಂಟಿಗಳನ್ನು ಜನ ಸ್ವಾಗತಿಸಿದ್ದು ಅವರ ಜೀವನ ಮಟ್ಟ ಸುಧಾರಿಸಿದೆ. ಇದರ ಫಲ ಇದು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಹಾಗಾಗಿ ಒಂದು ಲಕ್ಷ ರೂಗಳನ್ನು ನೀಡುವ ಬಗ್ಗೆ ಮತದಾರರಿಗೆ ಭರವಸೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ವಂಚನೆಗಳು ರಾಜ್ಯಕ್ಕೆ ಬರಬೇಕಾದ ಅನುದಾನಗಳನ್ನು ಬಿಡುಗಡೆ ಮಾಡದಿರುವುದು ಜನಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಕಳೆದ ೧೦ ವರ್ಷಗಳ ಬಿಜೆಪಿ ಆಡಳಿತದ ಪರಿಣಾಮ ಜನರಿಗೆ ಜನರಿಗೆ ಖಾಲಿ ಚೊಂಬು ಕೊಟ್ಟಿದೆ. ಇವರು ನೀಡಿದ ಯಾವ ಭರವಸೆಗಳೂ ಈಡೇಇಲ್ಲ. ಬ್ರಿಟೀಷರ ರೀತಿ ಆಡಳಿತ ಮಾಡಿzರೆ. ಇಡಿ-ಸಿಬಿಐ ನಂತಹ ಇಲಾಖೆಗಳು ಇವರ ಕಪಿ ಮುಷ್ಟಿಯಲ್ಲಿದೆ. ಇದರ ಮೂಲಕ ತನ್ನ ವಿರೋಧಿಗಳನ್ನು ಹಣಿಯು ತ್ತಿದೆ. ಸುಮಾರು ೬ ಸಾವಿರ ಕೋಟಿ ರೂಗಳನ್ನು ಲಪಟಾಯಿಸಿzರೆ. ತಮ್ಮ ಬೇಡಿಕೆಗಳ ಬಗ್ಗೆ ಹೋರಾಟ ಮಾಡುತ್ತಿದ್ದ ರೈತರ ಪ್ರತಿಭಟನೆ ಯನ್ನು ಹತ್ತಿಕ್ಕಿದ ರೀತಿಯನ್ನು ನೋಡಿದರೆ ಸಾಮನ್ಯ ಜನರು ಹೆದರುತ್ತಾರೆ. ಇದರ ಪರಿಣಾಮ ಇವರನ್ನು ಈ ಚುನಾವಣೆಯಲ್ಲಿ ಮತದರರು ಬಿಜೆಪಿಯನ್ನು ಗಾಳಿಗೆ ತೂರುತ್ತಾರೆ ಎಂದು ಲೇವಡಿ ಮಾಡಿದರು.
ಇನ್ನು ತಮಿಳುನಾಡಿನಲ್ಲಿ ನಡೆದ ಮತದಾನ ಸಂಪೂರ್ಣ ಯಶಸ್ವಿ ಯಾಗಿದ್ದು, ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಲಿದೆ. ಇದರ ಮೂಲಕ ಮೋದಿ ವಿರುದ್ಧ ಅಭೂತ ಪೂರ್ವ ಗೆಲುವು ಸಾಧಿಸಲಿದೆ. ಮೋದಿಯ ಹಿಟ್ಲರ್ ಶೈಲಿಯ ಆಡಳಿತಕ್ಕೆ ದಕ್ಷಿಣ ಭಾರತದ ಬಗ್ಗೆ ಇವರು ಮಾಡುತ್ತಿರುವ ತಾರತಮ್ಯ ಜನಕ್ಕೆ ಗೋತ್ತಾಗಿದೆ. ಯಾವುದೆ ಅನುದಾನಗಳನ್ನು ಬಿಡುಗೆ ಮಾಡು ತ್ತಿಲ್ಲ ಎಂದು ಆರೋಪಿಸಿದರು.
ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಅಣ್ಣಮಲೈ ಜನಪ್ರಿಯತೆ ಬಗ್ಗೆ ಪ್ರಶ್ನಿಸಿದಾಗ ಅತನಿಂದ ಏನೂ ಉಪಯೋಗ ಇಲ್ಲ. ಅತ ಒಂದು ರೀತಿಯಲ್ಲಿ ಹುಚ್ಚ ಎಂದು ಮೂದಲಿಸಿದರು.
ಶಾಸಕ ಬಿ.ಕೆ.ಸಂಗಮೇಶ್ವರ, ಕಣ್ಣಪ್ಪ, ನಗರಸಭಾ ಸದಸ್ಯ ಸುದೀಪ್, ಮಣಿ ಸೇರಿದಂತೆ ತಮಿಳು ಸಮಾಜದ ಇತರ ಮುಖಂಡರುಗಳು, ಸಂಘ ಸಂಸ್ಥೆಗಳ ಗಣ್ಯರುಗಳು ಉಪಸ್ಥಿತರಿದ್ದರು.