ಮತದಾನ ಮಾಡೋಣ ಬನ್ನಿ …!
ನಮ್ಮೊಳಗೆ ಈ ಜಗತ್ತನ್ನು ಬದಲಿಸುವ ಶಕ್ತಿಯಿದೆ ಎಂದು ಹೇಳಿದರೆ ನಿಮ್ಮಲ್ಲಿ ಎಷ್ಟು ಜನ ನಂಬುವಿರಿ? ಖಂಡಿತ ಸಂಶಯ ಬೇಡ. ನಮ್ಮೆಲ್ಲರಿಗೂ ಇದ್ದೇ ಇದೆ. ಅದು ಹೇಗೆ ಎನ್ನುವಿರೇ? ನಮ್ಮ ಒಂದು ಮತಕ್ಕೆ ಆ ಶಕ್ತಿ ಇದೆ. ಮತ ಚಲಾಯಿಸಿದರೆ, ಆ ಶಕ್ತಿ ಉಪಯೋಗಿಸಿದಂತೆ.
ಬರುವ ಮೇ ೭ನೇ ತಾರೀಖು, ಆ ಶಕ್ತಿ ಉಪಯೋಗಿಸಬೇಕಾದ ದಿನ. ಭಾರತಕ್ಕೆ ಸ್ವಾತಂತ್ರ ಬಂದಿದ್ದು ೧೯೪೭ರಲ್ಲಿ. ಆದರೆ, ೧೯೫೦ರಲ್ಲಿ ಸಂವಿಧಾನ ರಚಿತವಾದಾಗ, ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ಸಿಕ್ಕಿತು. ಜಗತ್ತಿನಾದ್ಯಂತ, ಇನ್ನೂ ಹಲವಾರು ರಾಷ್ಟ್ರಗಳಲ್ಲಿ, ರಾಜರಿಂದ ನಡೆಯುವ, ಸರ್ವಾಧಿಕಾರಿ ನೇತೃತ್ವದ, ಕಮ್ಯೂನಿಸ್ಟ್ ಮಾದರಿಯ ಆಡಳಿತ ವ್ಯವಸ್ಥೆಯುಂಟು. ಅಲ್ಲಿ ಪ್ರಜೆಗಳಿಗೆ ಮತ ಹಾಕುವ ಹಕ್ಕು ಇಲ್ಲ, ಅದರಿಂದಾಗಿ, ದೇಶದಲ್ಲಿ ತೆಗೆದುಕೊಳ್ಳುವ ಮಹತ್ವದ ನಿರ್ಧಾರಗಳಲ್ಲಿ ಅವರ ಧ್ವನಿ ಕೂಡ ಇಲ್ಲ. ಅಂತದ್ದರಲ್ಲಿ, ವೋಟು ಹಾಕುವ, ಅದರ ಮೂಲಕ ದೇಶದ ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ನಮ್ಮದಿರುವಾಗ ನಾವೆಲ್ಲರೂ ಮತ ಚಲಾಯಿಸಲೇಬೇಕಲ್ಲವೆ?
ಬೆಳಗಾಗೆದ್ದು, ನೂರಾರು ದೂರುಗಳನ್ನು ಹೇಳುತ್ತೇವೆ. ದೇಶದ ಅಭಿವೃದ್ಧಿಗಾಗಿ ಹಲವಾರು ಉಚಿತ ಸಲಹೆಗಳನ್ನು ಕೊಡುತ್ತೇವೆ. ಈ ರೀತಿ ಮಾಡಿದ್ದರೆ ಚೆನ್ನಾಗಿತ್ತು, ಹಾಗೆ ಮಾಡಿದ್ದು ತಪ್ಪು ಎಂದು ಟೀಕೆ ಮಾಡುತ್ತೇವೆ. ಆದರೆ, ಮತ ಹಾಕುವ ದಿನ, ಕೆಲಸದ ಸ್ಥಳದಲ್ಲಿ / ಕಾಲೇಜಿನಲ್ಲಿ ಚುನಾವಣೆಯ ನಿಮಿತ್ತ ರಜೆ ಕೊಟ್ಟಾಗ, ಮಜ ಮಾಡಲು, ಯಾವುದೋ ಪ್ರೇಕ್ಷಣೀಯ ಸ್ಥಳಕ್ಕೆ ಹೊರಟುಬಿಡುತ್ತೇವೆ. ನಾನೊಬ್ಬನು/ಳು ವೋಟು ಹಾಕದಿದ್ದ ರೇನು?’ ಎಂಬ ಅಲಕ್ಷ್ಯದ ಧೋರಣೆ ಹೆಚ್ಚಿನವರದು. ಶಿಕ್ಷಿತ ವರ್ಗ ಮತ್ತು ನಗರ ವಾಸಿ ಜನರೇ ವೋಟು ಹಾಕುವುದಿಲ್ಲ ಎಂಬ ಆರೋಪ ಬೇರೆ ಇದೆ. ಈ ಎ ಆರೋಪಗಳನ್ನು ಸುಳ್ಳು ಮಾಡಬೇಕು.
ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂದು ಮತದಾರರು, ವೋಟರ್ ಹೆಲ್ಪ್ ಲೈನ್ ಆಪ್ ಡೌನ್‌ಲೋಡ್ ಮಾಡಿ ಪರಿಶೀಲಿಸಬಹುದು. ಎಂಭತ್ತೈದು ವರ್ಷಕ್ಕೆ ಮೇಲ್ಪಟ್ಟ ಹಿರಿಯರಿಗೆ ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಮತ ಹಾಕುವ ಅವಕಾಶವಿದೆ.
ಅಯ್ಯೋ.. ಈ ಚುನಾವಣಾ ಸಮಯದಲ್ಲಿ ಬಹಳ ಅಕ್ರಮ ನಡೆಯುತ್ತೆ ರೀ… ಎಂದು ಬೇಸರಿಸುವವರಿಗೆ, ಇರುವುದೇ ಸಿ ವಿಜಿಲ್ ಆಪ್. ಚುನಾವಣೆಗೆ ಸಂಬಂಧಿಸಿದ ಎ ಅಕ್ರಮ ಚಟುವಟಿಕೆಗಳನ್ನು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯನ್ನು, ಈ ಆಪ್‌ನಲ್ಲಿ, ನಿಮ್ಮ ಹೆಸರು ಯಾರಿಗೂ ತಿಳಿಯದಂತೆ ವರದಿ ಮಾಡಬಹುದು. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರು ಇದ್ದರೂ, ೧೯೫೦ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು.
ಈ ಬಾರಿಯ ಲೋಕಸಭಾ ಚುನಾವಣೆಯ ಘೋಷವಾಕ್ಯ, ಚುನಾವಣಾ ಪರ್ವ, ದೇಶದ ಗರ್ವ ಎನ್ನುವುದು. ಈ ಚುನಾವಣೆಯ ಪರ್ವ, ನಮಗೆ ಗರ್ವದ ವಿಷಯವಾಗಬೇಕೆಂದರೆ, ನಾವು ಈ ಸಮಯವನ್ನು ಹಬ್ಬದಂತೆ ಸಂಭ್ರಮಿಸಬೇಕು. ಒಟ್ಟಾಗಿ ಹೋಗಿ ಮತ ಚಲಾಯಿಸಬೇಕು. ನಾನೊಬ್ಬನೇ/ಳೇ ಹೋದರೆ ಸಾಲದು, ನನ್ನ ಅಕ್ಕಪಕ್ಕದ ಮನೆಯವರನ್ನು, ಬಂಧು- ಬಾಂಧವರನ್ನು, ಉದ್ಯೋಗಿಗಳನ್ನು, ಸ್ನೇಹಿತರನ್ನು ಮತ ಚಲಾಯಿಸಲು ಪ್ರೇರೇಪಿಸಬೇಕು.
ಜಗತ್ತಿನ ಬಹುದೊಡ್ಡ ಪ್ರಜಪ್ರಭುತ್ವ ವ್ಯವಸ್ಥೆಯಾದ ನಮ್ಮ ದೇಶದ ಸಾಮಾನ್ಯ ಪ್ರಜೆಗಳಾದ ನಮ್ಮಲ್ಲಿ ಇರುವುದು ಈ ವೋಟು ಎಂಬ ಪ್ರಭಾವಿ ಅಸ್ತ್ರ. ಅದನ್ನು ಅಮೆರಿಕಾದ ಮಾಜಿ ಪ್ರಧಾನಿ ಅಬ್ರಹಾಂ ಲಿಂಕನ್ (ಆZಟಠಿo Zಛಿ oಠ್ಟಿಟ್ಞಜಛ್ಟಿ ಠಿeZ ಚ್ಠ್ಝ್ಝಿಛಿಠಿo) ಮತಚೀಟಿಗಳು ಗುಂಡುಗಳಿಗಿಂತ ಶಕ್ತಿಯುತ ಎಂದು ಹೇಳಿzರೆ. ಆದರೆ ಈ ಅಸ್ತ್ರ ಸರಿಯಾದ ಸಮಯದಲ್ಲಿ ಉಪಯೋಗಿಸುವುದು ಅತ್ಯವಶ್ಯಕ.
ಯಾವುದೇ ಆಮಿಷಕ್ಕೆ ಒಳಗಾಗದೇ, ಧರ್ಮ-ಜತಿ-ಜನಾಂಗ-ಸಮುದಾಯದ ಭೇದವನ್ನು ಮಾಡದೇ ಅರ್ಹ ವ್ಯಕ್ತಿಗೆ ಮತ ಚಲಾಯಿಸುತ್ತೀರಿ ತಾನೇ?
ಮರೆಯದಿರಿ. ಮೇ ೭, ೨೦೨೪, ಮಂಗಳವಾರ, ಬೆಳಿಗ್ಗೆ ೭ ರಿಂದ ಸಂಜೆ ೬ರ ತನಕ. ಮತದಾನ ಮಾಡೋಣ, ದೇಶದ ಹೆಮ್ಮೆಯ ಪಾಲುದಾರರಾಗೋಣ.
ಡಾ|| ಕೆ.ಎಸ್. ಶುಭ್ರತಾ
ಮನೋವೈದ್ಯೆ ಮತ್ತು ಲೇಖಕಿ , ಜಿ ಐಕಾನ್, ಶಿವಮೆಗ್ಗ.