ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಾಜ್ಯದ ಜನತೆಯ ಮುಂದೆ ಮತಯಾಚಿಸಲು ಬಿಜೆಪಿಗೆ ನೈತಿಕತೆ ಇಲ್ಲ: ಚೆಲುವರಾಯ ಸ್ವಾಮಿ…

Share Below Link

ಶಿವಮೊಗ್ಗ: ಅತಿವೃಷ್ಠಿ – ಅನಾವೃಷ್ಠಿ ಸಂದರ್ಭದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮುಂದೆ ಬಾಯಿ ಬಿಡದ ರಾಜ್ಯದ ಬಿಜೆಪಿ ಸಂಸದರಿಗೆ ಕರ್ನಾಟಕದಲ್ಲಿ ಮತ ಕೇಳುವ ಯಾವುದೇ ನೈತಿಕತೆ ಇಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದರು.
ರಾಜ್ಯ ಬರಗಾಲದಿಂದ ತತ್ತರಿಸುತ್ತಿದೆ. ಸೆಪ್ಟೆಂಬರ್ ತಿಂಗಳಿನ ನಷ್ಟದ ಅಂದಾಜು ೧೮ ಸಾವಿರ ಕೋಟಿಯನ್ನು ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿzವು. ಎರಡು ಬಾರಿ ನಾನು, ಒಂದು ಬಾರಿ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ತಂಡ ಅಮಿತ್‌ಶಾ ಹಾಗೂ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿzವು. ಆದರೂ ಗೃಹಸಚಿವ ಅಮಿತ್ ಶಾ ಅವರು ಈ ಬಗ್ಗೆ ಒಂದೇ ಒಂದು ಸಭೆ ನಡೆಸದೇ ಕರ್ನಾಟಕಕ್ಕೆ ಅನ್ಯಾಯ ಮಾಡಿzರೆ.


ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬಳಿಕ ಕೊಡಬೇಕಾದ ಹಣದಲ್ಲಿ ೩೫೪೪ ಕೋಟಿ ಬಿಡುಗಡೆ ಮಾಡಿ ಕೇವಲ ಶೇ.೧೯ರಷ್ಟು ನೀಡಿದೆ. ಹಣಕಾಸಿನ ಆಯೋಗ ಶಿಫಾರಸ್ಸು ಮಾಡಿದ ೫ಸಾವಿರ ಕೋಟಿಯನ್ನು ನೀಡಿಲ್ಲ. ನಿಯಮದಂತೆ ರಾಜ್ಯದಿಂದ ಸಂಗ್ರಹವಾದ ೪.೫ಲಕ್ಷ ಕೋಟಿ ತೆರಿಗೆಯಲ್ಲಿ ಶೇ೧೩ ಅಂದರೆ ಸುಮಾರು ೬ ವರ್ಷದಲ್ಲಿ ರಾಜ್ಯಕ್ಕೆ ೧.೮೭ ಸಾವಿರ ಕೋಟಿ ಹಣವನ್ನು ಕೇಂದ್ರ ನೀಡಬೇಕಿತ್ತು. ಇಲ್ಲಿಯವರೆಗೆ ಬಿಜೆಪಿಯ ೨೫ ಸಂಸದರು ಇದ್ದರು ಅಮಿತ್‌ಶಾ ಮತ್ತು ಮೋದಿಯವರ ಬಳಿ ರಾಜ್ಯದ ಪರವಾಗಿ ಮಾತನಾಡಿಲ್ಲ, ಅದೇ ಪಕ್ಕದ ರಾಜ್ಯದ ಸಂಸದರು ತಮ್ಮ ರಾಜ್ಯದ ಪ್ರಶ್ನೆ ಬಂದಾಗ ಒಗ್ಗಟ್ಟಾಗಿ ಪಕ್ಷ ಬೇಧ ಮರೆತು ಹೋರಾಡಿ ತಮ್ಮ ಪಾಲನ್ನು ದಕ್ಕಿಸಿಕೊಳ್ಳುತ್ತಾರೆ. ಆದರೆ ನಮ್ಮ ರಾಜ್ಯದ ಸಂಸದರು ಈ ರೀತಿ ಮಾಡಿಲ್ಲ. ಅವರು ಯಾವ ಮುಖ ಹೊತ್ತು ಮತ ಕೇಳಲು ಹೋಗುತ್ತಾರೆ. ಈ ರಾಜ್ಯದ ಜನ ತಕ್ಕಪಾಠ ಕಲಿಸುತ್ತಾರೆ ಎಂದರು.
ಶಿವಮೆಗ್ಗ ಜಿ ಜತ್ಯಾತೀತ ಸಮಾಜವಾದಿ ತತ್ವಕ್ಕೆ ಬದ್ಧವಾಗಿದ್ದ ಜಿ, ವರನಟ ಡಾ| ರಾಜ್ ಕುಮಾರ್ ಅವರ ಸೊಸೆ, ಮಾಜಿ ಮುಖ್ಯಂತ್ರಿ ಬಂಗಾರಪ್ಪನವರ ಪುತ್ರಿ ಸ್ಪರ್ಧೆಗೆ ನಿಲ್ಲಲು ಇತಿಹಾಸವೇ ಇದ್ದು, ಶಿವಮೊಗ್ಗದ ಜನ ಅವರನ್ನು ಗೆಲ್ಲಿಸಿ ಹೊಸ ಇತಿಹಾಸ ಬರೆಯುತ್ತಾರೆ ಎಂದರು.
ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಘೋಷಣೆ ಮಾಡಿದ್ದು ಮಾತ್ರ ಯಡಿಯೂರಪ್ಪನವರು, ಆದರೆ ನಿಜವಾಗಿ ಹಣ ಮತ್ತು ಜಗಕೊಟ್ಟಿದ್ದು, ಸಿದ್ದರಾಮಯ್ಯ ಸರ್ಕಾರ ಎಂದರು.
ಮೋದಿಯವರು ನಾನೇ ಗ್ಯಾರಂಟಿ ಎಂದು ಹೇಳಿದ್ದು ಬಿಟ್ಟರೆ ದೇಶದ ಜನತೆಗೆ ೧೦ ವರ್ಷದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೊಡುಗೆಯನ್ನು ನೀಡಿಲ್ಲ. ಕರೋನ ಸಂದರ್ಭದಲ್ಲಿ ನಮ್ಮ ದೇಶಕ್ಕೆ ಎಲ್ಲ ದೇಶಗಳು ತತ್ತರಿಸಿದ ಬಳಿಕ ಕಟ್ಟಕಡೆಗೆ ಕರೋನಾ ಬಂತು. ಅಷ್ಟರೊಳಗೆ ಇನ್ನಷ್ಟು ಜೀವಗಳನ್ನು ಉಳಿಸಬಹುದಿತ್ತು. ಅದರಲ್ಲೂ ಕೂಡ ಭ್ರಷ್ಟಚಾರ ಮಾಡಿzರೆ. ಈಗ ರಾಜ್ಯದ ೫ ಗ್ಯಾರಂಟಿಗಳ ಜೊತೆಗೆ ಕೇಂದ್ರದಲ್ಲೂ ಪ್ರಮುಖ ೫ ಗ್ಯಾರಂಟಿ ಮತ್ತು ೨೫ಕ್ಕೂ ಹೆಚ್ಚು ಇತರೆ ಗ್ಯಾರಂಟಿಗಳನ್ನು ಹೇಳಿzರೆ.
೧೬ ಲಕ್ಷ ಕೋಟಿ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದ ಮೋದಿ, ರೈತರ ಸಾಲಮನ್ನಾ ಮಾಡಿಲ್ಲ. ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದ ಬಳಿಕ, ರೈತರ ೩ ಲಕ್ಷ ಕೋಟಿ ಸಾಲ ಮನ್ನಾ ಮಾಡುತ್ತೇವೆ. ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ, ಸ್ಟೈಫಂಡ್ ನೀಡಿ ಉದ್ಯೋಗ ನೀಡುತ್ತೇವೆ. ಮಹಿಳೆಯರಿಗೆ ಕೇಂದ್ರದ ಒಂದು ಲಕ್ಷ, ರಾಜ್ಯದ ೨೪ ಸಾವಿರ ನೀಡುತ್ತೇವೆ. ಗ್ಯಾರಂಟಿಗಳನ್ನು ನಿಲ್ಲಿಸಲು ಬಿಜೆಪಿ ಜೆಡಿಎಸ್ ಮಿತ್ರ ಪಕ್ಷಗಳು ಸುಪ್ರೀಂ ಕೋರ್ಟ್ ಕದ ತಟ್ಟಿzರೆ. ಬಿಜೆಪಿಯವರು ಯಾವತ್ತು ಬಡವರ ಪರ ಇಲ್ಲ ಎಂಬುವುದು ಸಾಭೀತಾಗಿದೆ. ಹಾಗಾಗಿ ಬಿಜೆಪಿಗೆ ಮತವನ್ನು ನೀಡಬೇಡಿ ಎಂದರು.
ಪ್ರಜ್ವಲ್ ರೇವಣ್ಣ ಕುರಿತು ಅಮಿತ್‌ಶಾ ಅವರಿಗೆ ಇದರ ಬಗ್ಗೆ ಮೆದಲೇ ಗೊತ್ತಿತ್ತು. ಹಾಗಾಗಿ ಅವರ ಸ್ಪರ್ಧೆಗೆ ವಿರೋಧಿಸಿದ್ದರು. ಆದರೂ ಜೆಡಿಎಸ್ ವರಿಷ್ಟರ ಒತ್ತಾಯಕ್ಕೆ ಮಣಿದು ಟಿಕೇಟ್ ನೀಡಿದರು. ಇಬ್ಬರು ನೆಂಟಸ್ಥಿಕೆ ಮಾಡಿzರೆ. ಮೋದಿ ಸೇರಿದಂತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡು ಪ್ರಜ್ವಲ್ ಪರ ಕೇಳಿzರೆ. ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದೆ. ಆದ್ದರಿಂದ ಇದೊಂದು ಗಂಭೀರ ಪ್ರಕರಣವಾಗಿದ್ದು, ಶಿಕ್ಷೆಯಾಗುವುದು ಖಂಡಿತ ಇದರಿಂದ ಬಜವ್ ಆಗಲು ಆಗುವುದಿಲ್ಲ. ಮತ್ತು ಎಸ್‌ಐಟಿ ಈಗಾಗಲೇ ತನಿಖೆ ಮುಂದುವರೆಸಿದ್ದು, ಆರೋಪಿಯನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಕುಮಾರಸ್ವಾಮಿ ಹಿಂದಿನಿಂದಲೂ ಪೆನ್‌ಡ್ರೈವ್ ತೋರಿಸಿ ಬ್ಲ್ಯಾಕ್‌ಮೇಲೆ ಮಾಡುತ್ತ ಬಂದಿzರೆ. ಡಿ.ಕೆ.ಶಿ.ವಿರುದ್ಧದ ಯಾವುದೇ ಸಾಕ್ಷ್ಯ ಅವರ ಬಳಿ ಇಲ್ಲ. ಡಿ.ಕೆ.ಶಿವಕುಮಾರ್‌ಅವರು ಕುಮಾರಸ್ವಾಮಿಗೆ ಸೂಕ್ತ ಉತ್ತರ ಕೊಟ್ಟಿzರೆ. ಮಂಡ್ಯ ಸೇರಿದಂತೆ ೧೫ಕ್ಕೂ ಹೆಚ್ಚು ಸ್ಥಾನವನ್ನು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಹೆಚ್.ಎಸ್. ಸುಂದರೇಶ್, ಎಂ.ಶ್ರೀಕಾಂತ್, ಜಿ.ಡಿ.ಮಂಜುನಾಥ್, ರಮೇಶ್ ಹೆಗಡೆ, ಚಂದನ್, ಚಿನ್ನಪ್ಪ, ಶಿವಾನಂದ್, ಚಂದ್ರಶೇಖರ್ ಮತ್ತಿತರರು ಇದ್ದರು.