ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಗೀತಕ್ಕ ಅವರ ಗೆಲುವು ಕ್ಷೇತ್ರದ ಸ್ವಾಭಿಮಾನದ ಸಂಕೇತ: ದುನಿಯಾ ವಿಜಯ್

Share Below Link

ಶಿವಮೊಗ್ಗ: ಕ್ಷೇತ್ರದ ಅಭಿವೃದ್ಧಿಗೆ ಆಸರೆಯಾಗಿದ್ದ ಮಾಜಿ ಸಿಎಂ ದಿ| ಎಸ್. ಬಂಗಾರಪ್ಪ ಅವರ ಕೊಡುಗೆ ಮರೆಯ ಕೂಡದು. ಇಲ್ಲಿ ಗೀತಕ್ಕ ಅವರ ಗೆಲುವು ಕ್ಷೇತ್ರದ ಮತದಾರರ ಸ್ವಾಭಿಮಾನದ ಪ್ರಶ್ನೆ ಎಂದು ನಟ ದುನಿಯಾ ವಿಜಯ್ ಹೇಳಿದರು.
ಸಾಗರ ತಾಲ್ಲೂಕಿನ ತ್ಯಾಗರ್ತಿ ಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮದಲ್ಲಿ ಅನ್ಯ ಪಕ್ಷಗಳಿಗೆ ಬೆಂಬಲಿಸುವ ಯುವಕ- ಯುವತಿ ಯರು ಇರಬಹುದು. ನಮಗೆ ನಿಮ್ಮ ಪಕ್ಷದ ಕುರಿತ ಗೌರವ ಇದೆ. ಆದರೆ, ಹೆಚ್ಚಾಗಿ ಇಲ್ಲಿ ರೈತ ಕುಟುಂಬಗಳು ವಾಸವಾಗಿವೆ. ೩೦ ವರ್ಷದ ಹಿಂದೆ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದ ಬಂಗಾರಪ್ಪ ಅವರ ಸೇವೆಯನ್ನು ಮರೆಯಕೂಡದು ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದ ರಕ್ಷಣೆ ಕಾಂಗ್ರೆಸ್ ಪಕ್ಷದ ಜವಾಬ್ದಾರಿ. ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನಾನು ಭರವಸೆ ನೀಡುತ್ತೇನೆ. ಈಗಾಗಲೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಎ ಜತಿ- ಧರ್ಮದವರ ಮನೆಯ ಬಾಗಿಲಿಗೆ ತಲುಪಿವೆ. ಇಲ್ಲಿ ಬಿಜೆಪಿ ಪಕ್ಷ ದವರೂ ಕೂಡ ಗ್ಯಾರಂಟಿ ಯೋಜನೆಗಳ ಫಲಾನುಭವಿಗ ಳಾಗಿzರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಚುನಾವಣೆಯಲ್ಲಿ ಒಂದು ಅವಕಾಶ ನೀಡಿ, ಮತದಾರರು ಆಶೀರ್ವದಿಸ ಬೇಕು. ಅದೇ ರೀತಿ, ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಶಕ್ತಿ ತುಂಬಿ ಎಂದ ಅವರು, ಮಾಜಿ ಸಿಎಂ ಬಂಗಾರಪ್ಪ ಅವರ ಮಗಳಾದ ನನಗೆ ಎ ಸಮುದಾಯದ ವರನ್ನು ಒಗ್ಗೂಡಿಸಿಕೊಂಡು ಹೋಗುವ ಸಾಮಾರ್ಥ್ಯ ನನಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ ಕಣ್ಣೂರು ಮಾತನಾಡಿ, ಈ ಭಾಗದಲ್ಲಿ ಮಾಜಿ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಇಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದೆ. ಆದ್ದರಿಂದ, ಗೀತ ಕ್ಕಗೆ ಮತ ನೀಡಿ ಹರಸಿ ಎಂದರು.
ನಟ ಶಿವರಾಜಕುಮಾರ, ಚುನಾವಣೆ ಜಿ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಜಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಅನಿತಾ ಕುಮಾರಿ, ತಾಪಂ ಮಾಜಿ ಸದಸ್ಯ ಸೋಮಶೇಖರ್ ಲಾವಿಗೇರೆ, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಳಸೆ ಚಂದ್ರಪ್ಪ, ಪ್ರಭಾವತಿ ಚಂದ್ರಕಾಂತ, ಸುರೇಶ್ ಬಾಬು ಸೇರಿ ಬೆಂಬಲಿಗರು ಇದ್ದರು.