ವಿಶ್ವವಿeನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಪ್ರಾಧ್ಯಾಪಕ ಗಿರೀಶ್…
ಶಂಕರಘಟ್ಟ : ಅಂತರ ರಾಷ್ಟ್ರೀಯ ಮನ್ನಣೆಯ ರಿಸರ್ಚ್ ಡಾಟ್ ಕಾಂ ವೆಬ್ತಾಣವು ಬಿಡುಗಡೆಗೊಳಿಸಿ ರುವ ಉತ್ತಮ ಸಂಶೋಧಕರ ವರದಿಯಲ್ಲಿ ಕುವೆಂಪು ವಿವಿಯ ಪ್ರಾಧ್ಯಾಪಕ ಡಾ. ಬಿ ಜೆ ಗಿರೀಶ್ ಭಾರತದಲ್ಲಿಯೇ ಅಗ್ರ ಮೂರನೇ ಸ್ಥಾನ ಹಾಗೂ ಜಗತಿಕವಾಗಿ ೬೭೧ನೇ ಸ್ಥಾನ ಪಡೆದಿzರೆ.
ರಿಸರ್ಚ್ ಡಾಟ್ ಕಾಂ ಎಂಬ ಅಂತರ ರಾಷ್ಟ್ರೀಯ ಸಂಸ್ಥೆಯು ಸಂಶೋಧನೆಗಳು ಮತ್ತು ವಿeನಿಗಳ ಕುರಿತಾಗಿ ಮಾಹಿತಿ ಪ್ರಕಟಿಸುವ ಖ್ಯಾತ ತಾಣವಾಗಿದೆ. ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿರುವ ವರದಿಯಲ್ಲಿ ಕುವೆಂಪು ವಿವಿ ಗಣಿತ ವಿeನ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಜೆ. ಗಿರೀಶ್ ಥರ್ಮೊ ಡೈನಾಮಿಕ್ಸ್, ಮೆಕ್ಯಾನಿಕಲ್ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಭಾರತದ ಉತ್ತಮ ಸಂಶೋಧಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿzರೆ. ಇವರು ೨೪೦ಕ್ಕೂ ಅಧಿಕ ಸಂಶೋಧನಾ ಲೇಖನ ಗಳನ್ನು ಪ್ರಕಟಿಸಿದ್ದು, ೯೦೦೦ಕ್ಕೂ ಅಧಿಕ ಬಾರಿ ಅವು ಸಂಶೋಧಕರು ಗಳಿಂದ ಮರುಉಖ, ಪರಾಮರ್ಶನ ಕಂಡಿವೆ. ಒಟ್ಟು ಡಿ-ಇಂಡೆಕ್ಸ್ನಲ್ಲಿ ೫೫ ಅಂಕಗಳನ್ನು ಗಳಿಸಿzರೆ. ಜಗತಿಕವಾಗಿ ಕಳೆದ ವರ್ಷ ೯೪೨ನೇ ಸ್ಥಾನದಲ್ಲಿದ್ದ ಅವರು ಈ ಬಾರಿ ೬೭೧ನೇ ಸ್ಥಾನ ಪಡೆದಿzರೆ.
ಥಮೆಡೈನಾಮಿಕ್ಸ್, ಮೆಕ್ಯಾನಿಕಲ್ ಏರೋಸ್ಪೇಸ್ ಎಂಜಿನಿಯರಿಂಗ್, ಶಾಖ ಪ್ರಸರಣೆ ವಿಷಯ ಮತ್ತು ಉಪವಿಷಯ ಗಳಲ್ಲಿನ ಅವರ ಸಂಶೋಧನಾ ಪ್ರಖರತೆಯನ್ನು ಗಮನಿಸಿ ಈ ಸ್ಥಾನವನ್ನು ನೀಡಿರುವುದಾಗಿ ರಿಸರ್ಚ್ ಡಾಟ್ ಕಾಂ ತಿಳಿಸಿದೆ. ಸಂಸ್ಥೆಯು ಸಂಶೋಧನೆಯ ಗುಣಮಟ್ಟ, ಕ್ಷೇತ್ರವೊಂದರಲ್ಲಿ ಸಂಶೋಧಕರು ಪ್ರಕಟಿಸಿರುವ ಲೇಖನಗಳು ಮತ್ತು ಪರಾಮರ್ಶನವನ್ನು ಗಮನಿಸಿ ರ್ಯಾಂಕಿಂಗ್ ಹಾಗೂ ಹೊಸ ಮಾದರಿಯ ಡಿ-ಇಂಡೆಕ್ಸ್ ನೀಡುತ್ತದೆ. ಈ ವರದಿಯಲ್ಲಿ ಐಐಟಿ, ಐಐಎಂ, ತಾಂತ್ರಿಕ ವಿವಿಗಳ ಸಂಶೋಧಕರ ಹೆಸರುಗಳಿದ್ದು, ಜೊತೆಗೆ ಕುವೆಂಪು ವಿವಿಯ ಸಂಶೋಧಕ ಸೇರಿzರೆ.
ಕಳೆದ ಹಲವು ವರ್ಷಗಳಿಂದ ವಿವಿಯು ಸಂಶೋಧನೆಯಲ್ಲಿ ಉತ್ತಮ ಸಾಧನೆಗೈಯುತ್ತಿದ್ದು, ಡಾ. ಗಿರೀಶ್ ಬಿ ಜೆ ಸಾಧನೆ ಹೆಮ್ಮೆ ತಂದಿದೆ ಎಂದು ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿನಂದಿಸಿzರೆ. ಇದೇ ಪಟ್ಟಿ ಯಲ್ಲಿ ಕರ್ನಾಟಕದ ಭಾರತೀಯ ವಿeನ ಸಂಸ್ಥೆಯ ಸಂಶೋಧಕರಾದ ಡಾ. ರಂಜನ್ ಗಂಗೂಲಿ, ಡಾ. ಶ್ರೀನಿವಾಸನ್ ಗೋಪಾಲಕಷ್ಣ ಗುರುತಿಸಿಕೊಂಡಿzರೆ.