ಮೇ 1, ಕಾರ್ಮಿಕರ ದಿನಾಚರಣೆ …
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯ ವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ್ ಡೇ). ಮೇ ದಿನ ಅಥವಾ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.
ಹಿನ್ನೆಲೆ ಮತ್ತು ಇತಿಹಾಸ : ೧೮೮೬ರ ಮೇ ೪ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ. ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ ೧ ರಂದು ಉತ್ಸವ ಆಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ ೧೮೮೯ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸ್ನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರ ರಾಷ್ಟ್ರೀಯದ ಪ್ರಥಮ ಅಧಿವೇಶನ ದಲ್ಲಿ ಮೇ ೧ನೆಯ ದಿನಾಂಕವನ್ನು ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವ ದಿನವೆಂದು ಆಚರಿಸ ಬೇಕೆಂದು ನಿರ್ಧರಿಸಲಾಯಿತು. ಮೇ ೧ ರಂದು ಸಾರ್ವಜನಿಕ ರಜದಿನವೆಂದು ಘೋಷಿಸ ಬೇಕೆಂದು ನಿರ್ಣಯಿಸಲಾಯಿತು.
ದೇಶ-ವಿದೇಶಗಳಲ್ಲಿ ಆಚರಣೆ : ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ದಿನವನ್ನು ಮೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳಲ್ಲಿ ಅಂದು ಈ ದಿನವನ್ನು ಆಚರಿಸುವುದಿಲ್ಲ. ಇಟಲಿಯಲ್ಲಿ ಮೇ ದಿನಾಚರಣೆಯನ್ನು ನಿಷೇಧಿಸಲಾಗಿತ್ತಲ್ಲದೇ ಅದರ ಬದಲು ರೋಮಿನ ಸ್ಥಾಪನೆಯ ದಿನವನ್ನಾಗಿ ಆಚರಿಸುವ ಏರ್ಪಾಡು ಮಾಡಲಾ ಗಿತ್ತು. ಸೋವಿಯತ್ ದೇಶದಲ್ಲಿ ಮೇ ೧ ಸಾರ್ವಜನಿಕ ರಜ ದಿನ. ೧೮೯೦ರ ದಶಕದಿಂದ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಮೇ ತಿಂಗಳ ೧ ರಂದು ಕಾರ್ಮಿಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು ಸಾಮಾನ್ಯವಾಗಿ ಕಾರ್ಮಿಕ ರಜದಿನ, ಸೋವಿಯತ್ ದೇಶ ಮುಂತಾದ ಕಮ್ಯೂನಿಸ್ಟ್ ರಾಷ್ಟ್ರ ಗಳಲ್ಲಿ ಈ ದಿನಾಚರಣೆ ವಿಶಿಷ್ಟವಾದದ್ದು. ಮಾಸ್ಕೋದಲ್ಲಿ ನಡೆಯುವ ಮೇ ದಿನದ ಉತ್ಸವ- ಕವಾಯಿತು ವಿಶ್ವವಿಖ್ಯಾತವಾದದ್ದು. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಮೇ ದಿನದ ಅನಂತರದ ಪ್ರಥಮ ಭಾನುವಾರದಂದು ಆಚರಿಸುವುದು ಸಾಮಾನ್ಯ. ಲಂಡನಿನಲ್ಲಿ ಹೈಡ್ ಪಾರ್ಕಿನಲ್ಲಿ ಉತ್ಸವ ಸಭೆ ಸೇರುವುದು ಹಿಂದಿನಿಂದ ಬಂದಿ ರುವ ಸಂಪ್ರದಾಯ. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಪ್ರಥಮ ಬಾರಿಗೆ ಆಚರಿಸಿದ್ದು ೧೮೯೨ ರಲ್ಲಿ.
ಅಲ್ಬೇನಿಯಾ, ಬೆಲಾರುಸ್, ಅರ್ಜೆಂಟೀನಾ, ಅರೂಬ, ಆಸ್ಟ್ರೇಲಿಯಾ, ಫ್ರಾನ್ಸ್, ಬೊಲಿ ವಿಯಾ, ಬೆಲ್ಜಿಯಂ, ಬಾಂಗ್ಲಾದೇಶ, ಚಿಲಿ, ಹೈತಿ, ಚೀನಾ, ಬೋಸ್ನಿಯಾ ಮತ್ತು ಹೆರ್ಝೆಗೋವಿನ, ಬ್ರೆಜಿಲ್, ಬಲ್ಗೇರಿಯಾ, ಕ್ಯಾಮ ರೂನ್, ಕೋಸ್ಟರಿಕ, ಕೊಲಂಬಿಯಾ, ಸಿಪ್ರಸ್, ಕ್ರೊಯೇಷಿಯ, ಕ್ಯೂಬಾ, ಗ್ರೀಸ್, ಜರ್ಮನಿ, ಇಟಲಿ, ಐಸ್ಲೆಂಡ್, ಡೆನ್ಮಾರ್ಕ್, ಈಕ್ವೆಡಾರ್, ಈಜಿಪ್ಟ್, ಹಂಗರಿ, ಫಿನ್ಲ್ಯಾಂಡ್, ಗ್ವಾಟೆ ಮಾಲ, ಕೀನ್ಯಾ, ಹೊಂಡುರಾಸ್, ಹಾಂಗ್ ಕಾಂಗ್, ಭಾರತ, ಟರ್ಕಿ, ಇಂಡೋನೇಷ್ಯಾ, ಪೆರು, ಜೋರ್ಡನ್, ಲ್ಯಾಟ್ವಿಯ, ಲಿಥುವೇನಿಯಾ, ನಾರ್ವೆ, ಲೆಬನಾನ್, ಮಲೇಶಿಯಾ, ಮೆಸಿಡೋನಿಯ, ಮಾಲ್ಟ, ಮಾರಿಷಸ್, ಮೆಕ್ಸಿಕೋ, ಮೆರಾಕೊ, ಮಯನ್ಮಾರ್, ನೈಜೀರಿಯಾ, ಉತ್ತರ ಕೊರಿಯಾ, ಪಾಕಿಸ್ತಾನ, ಪೆರಗ್ವೆ, ಪೋಲೆಂಡ್, ಫಿಲಿಫೀನ್ಸ್, ಶ್ರೀಲಂಕ, ಪೋರ್ಚು ಗಲ್, ರಷ್ಯಾ, ಸ್ಲೊವೆನಿಯಾ, ಸಿಂಗಾಪುರ, ರೊಮೇನಿಯಾ, ಉಕ್ರೇನ್, ಸ್ಲೋವಾಕಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ಸರ್ಬಿಯಾ, ಜಂಬಿಯ, ಸ್ವೀಡನ್, ಸಿರಿಯಾ, ಥೈಲ್ಯಾಂಡ್, ಉರುಗ್ವೆ, ಜಿಂಬಾಬ್ವೆ, ವೆನಿಜುವೆಲಾ, ವಿಯೆಟ್ನಾಂ, ಜಂಯ ದೇಶಗಳಲ್ಲಿ ಮೇ ೧ ರಜಾ ದಿನವೆಂದು ಘೋಷಿಸಲಾಗಿದೆ.
ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. ೨೦ನೆಯ ಶತಮಾನದ ಎರಡನೆಯ ದಶಕದ ದ್ವಿತೀಯರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ್ದ ಮೊಟ್ಟ ಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡ್ನಲ್ಲಿದ್ದ ಭಾರತೀಯ ನಾವಿಕರು, ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆ ಒಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು ಮೆರವಣಿಗೆ ಯಲ್ಲಿ ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು (೧೯೨೫). ಭಾರತದಲ್ಲಿ ೧೯೨೭ ರಿಂದ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಗಿ ಆಚರಿಸುತ್ತಿzರೆ.
ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿ ಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. ೧೯೨೭ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವ ದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಗಿ ಆಚರಿಸಿದಾಗ, ಪೋಲೀಸರು ಅನೇಕ ನಿರ್ಬಂಧಕಾeಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ.
೧೯೨೮ ರಿಂದ ೧೯೩೪ ರ ವರೆಗೆ ಆ ಉತ್ಸವ ಆಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದವು. ಎರಡನೆಯ ಮಹಾಯುದ್ಧದ ನಂತರ, ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ, ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. ೧೯೬೯ ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದವು.
ಕಾರ್ಮಿಕ ಕಾನೂನುಗಳು : ಇತರರ ಅಧೀನದಲ್ಲಿ ಎಂದರೆ ತಮ್ಮ ನೇಮಕದಾರರ, ಉದ್ಯೋಗದಾತರ, ಧಣಿಗಳ ಅಥವಾ ಯಜಮಾನರ ಕೈ ಕೆಳಗೆ, ದುಡಿಯುವ ಜನರ ಕೆಲಸಕ್ಕೆ ಸಂಬಂಧಿಸಿದಂತೆ ರಚಿತವಾದ ಎಲ್ಲ ಕಾನೂನುಗಳು (ಲೇಬರ್ ಲಾಸ್). ಇವನ್ನು ಕೈಗಾರಿಕಾ ಕಾನೂನುಗಳು ಅಥವಾ ಕೈಗಾರಿಕಾ ನ್ಯಾಯ ಎಂದೂ ಕರೆಯುತ್ತಾರೆ. ಆದರೆ ಕೈಗಾರಿಕೋದ್ಯಮಗಳಲ್ಲಿ ದುಡಿಯುವವರು ಮಾತ್ರವೇ ಈ ಕಾನೂನುಗಳ ಪರಿಮಿತಿಯೊಳಕ್ಕೆ ಬರುವುದಿಲ್ಲವಾದ್ದರಿಂದ ಇವನ್ನು ಕಾರ್ಮಿಕ ಕಾನೂನುಗಳು ಎಂದು ಕರೆಯುವುದೇ ಸೂಕ್ತ. ಉದ್ಯೋಗದಾತನಿಗೂ ಅವನ ಅಧೀನದಲ್ಲಿ ಕೆಲಸ ಮಾಡುವವನಿಗೂ ಏರ್ಪಡುವ ಸಂಬಂಧವನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸುವುದು ಅವಶ್ಯ. ಯಜಮಾನ-ಕಾರ್ಮಿಕರ ನಡುವಣ ಸಂಬಂಧ ವಾಸ್ತವವಾಗಿರಲಿ ಅಥವಾ ಮುಂದೆ ಉದ್ಭವಿಸುವಂಥzಗಿರಲಿ, ಕಾರ್ಮಿಕನ ದುಡಿಮೆ ದೈಹಿಕ ವಾzದಾಗಿರಲಿ, ಮಾನಸಿಕವಾz ದಾಗಿರಲಿ ಇಂಥ ಎಲ್ಲ ಸಂದರ್ಭ ಗಳಿಗೂ ಕಾರ್ಮಿಕ ಕಾನೂನುಗಳು ಅನ್ವಯಿಸುತ್ತವೆ. ಕೆಲಸಗಾರ ನೇಮಕದಾರನಿಗೆ ಅಧೀನನೇ ಅಲ್ಲವೇ ಎಂಬುದೇ ಪರಿಗಣಿಸ ಬೇಕಾದ ಅಂಶ. ಸ್ವತಂತ್ರವಾಗಿ ದುಡಿಯುವವನಿಗೆ ಕಾರ್ಮಿಕ ಕಾನೂನುಗಳು ಅನ್ವಯಿಸುವುದಿಲ್ಲ. ಆದರೆ ಅಧೀನವರ್ತಿ ಕೆಲಸಗಾರ ಯಾರು, ಸ್ವತಂತ್ರ ಗುತ್ತಿಗೆದಾರ ಯಾರು ಎಂಬುದನ್ನು ನಿರ್ಣಯಿಸುವುದು ಸುಲಭವಲ್ಲ. ವತ್ತಿ ಪರಿಣತರ ದುಡಿಮೆಯ ಲಕ್ಷಣವನ್ನು ಕೂಡ ಅನೇಕ ವೇಳೆ ಖಚಿತವಾಗಿ ನಿರ್ಣಯಿಸುವುದು ಕಷ್ಟ . ಕೆಲಸಗಾರನ ಕೆಲಸದ ವಿಧಾನ, ಗುಣ ಮತ್ತು ಪರಿಮಾಣಗಳ ಮೇಲೆ ಯಜಮಾನನ ಹತೋಟಿ ಇರುವ ಡೆಗಳೆಲ್ಲ ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತವೆ. ಈ ವ್ಯಾಪಕ ವಾದ ಅರ್ಥದಲ್ಲಿ ಪರಿಗಣಿಸಿದಾಗ, ಕಾರ್ಮಿಕರ ಸಂಘಟನೆ, ನಿರುದ್ಯೋಗ ನಿವಾರಣೆ, ಕೈಗಾರಿಕಾ ಸಂಬಂಧಗಳು, ಮುಷ್ಕರಗಳು, ಕಾರ್ಖಾನೆಗಳ ಬೀಗಮುದ್ರೆ ಮುಂತಾದವಕ್ಕೆ ಸಂಬಂಧಿಸಿದ ಕಾನೂನುಗಳನ್ನೂ ಈ ಶೀರ್ಷಿಕೆಯ ಅಡಿಯ ಪರಿಶೀಲಿಸ ಬೇಕಾಗುತ್ತದೆ. ಕಾರ್ಮಿಕರ ಕೆಲಸಕ್ಕೆ ಸಂಬಂಧಿಸಿದ ಸಾಮಾನ್ಯ ಕಾನೂನು ಗಳನ್ನು ಇಲ್ಲಿ ವಿವೇಚಿಸಲಾಗಿದೆ. ದೇಶದ ಉತ್ಪಾದನಾ ಕಾರ್ಯದಲ್ಲಿ ನಿರತರಾದ ಮಾಲೀಕರೂ, ಕಾರ್ಮಿಕರೂ ಸಹವರ್ತಿಸಿ ನಡೆಯುವಂತೆ ಮಾಡುವುದು ಸರ್ಕಾರದ ಕರ್ತವ್ಯ. ಈ ಉದ್ದೇಶದಿಂದಲೇ ಕಾರ್ಮಿಕ ಕಾನೂನುಗಳು ಜರಿಗೆ ಬಂದಿವೆ. ನಿಷ್ಪಕ್ಷದಷ್ಟಿ, ನೀತಿಪಾಲನೆ, ಅಂತರ ರಾಷ್ಟ್ರೀಯ ಏಕರೂಪತೆ, ಜನತೆಯ ಆರ್ಥಿಕ ಆಡಳಿತ ಇವು ಕಾರ್ಮಿಕ ಕಾನೂನುಗಳಿಗೆ ಆಧಾರಭೂತವಾದ ತತ್ತ್ವಗಳು.
ರಷ್ಯಾದ ಸಾಮ್ರಾಜ್ಯದ ಮೊದಲ ಕಾರ್ಖಾನೆ ತನಿಖಾಧಿಕಾರಿ ಇವಾನ್ ಯಾನ್ ಜುಲ್ ೧೮೮೨ ರ ಉದಾರವಾದಿ ಕಾರ್ಮಿಕ ಸಂಹಿತೆ ಯನ್ನು ಜರಿಗೆ ತರಲು ಸಹಾಯ ಮಾಡಿದರು.
ಕಾರ್ಖಾನೆಗಳ ಕಾಯಿದೆ : ಕಾರ್ಖಾನೆಗಳಲ್ಲಿ ಎರಡು ವಿಧ. ಕಾರ್ಮಿಕರ ನಷ್ಟ ಪರಿಹಾರ ಕಾಯಿದೆ, ಕೂಲಿ ಪಾವತಿ ಕಾಯಿದೆ (೧೯೩೬), ಕನಿಷ್ಠ ಕೂಲಿ ಕಾಯಿದೆ (೧೯೪೮), ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ (೧೯೪೮), ಉದ್ಯೋಗಿಗಳ ಭವಿಷ್ಯ ನಿಧಿಗಳ ಕಾಯಿದೆ (೧೯೫೨), ಕೈಗಾರಿಕಾ ವಿವಾದಗಳ ಕಾಯಿದೆ (೧೯೪೭),
ಕಾರ್ಮಿಕರ ಹಿತರಕ್ಷಣೆ : ಕಾರ್ಮಿಕರ ಹಿತರಕ್ಷಣೆಗಾಗಿ ಇನ್ನೂ ಅನೇಕ ಕಾಯಿದೆಗಳು ಜರಿಯ ಲ್ಲಿದೆ. ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿಯ ಕಾಲದಲ್ಲಿ ಸಂಬಳ ಸಹಿತ ರಜ ನೀಡಿಕೆ, ಹಡಗು ಕಟ್ಟೆಗಳಲ್ಲಿ ಕೆಲಸ ಮಾಡುವವರ ಉದ್ಯೋಗ ನಿಯಂತ್ರಣ, ವ್ಯಾಪಾರ ನೌಕೆಗಳ ಕಲಾಪಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳ ರಚನೆ ಮುಂತಾದ ಕಾಯಿದೆಗಳು ಜರಿಯಲ್ಲಿದೆ.
ಮುರುಳೀಧರ್ ಹೆಚ್ ಸಿ
ಪತ್ರಕರ್ತರು, ಶಿವಮೆಗ್ಗ