ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮೋದಿ ಬಗ್ಗೆ ಕಿಂಚಿತ್ತು ಗೌರವವಿದ್ದರೆ ಪುತ್ರನಿಂದ ರಾಜೀನಾಮೆ ಪಡೆಯಿರಿ: ಬಿಎಸ್‌ವೈಗೆ ಈಶ್ವರಪ್ಪ ಸವಾಲ್

Share Below Link

ಶಿವಮೊಗ್ಗ : ಪುತ್ರ ವ್ಯಾಮೋಹದಲ್ಲಿ ಮುಳುಗಿರುವ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮೋದಿ ಬಗ್ಗೆ ಕಿಂಚಿತ್ತು ಗೌರವ ಇದ್ದರೆ, ಅವರ ಸಿzಂತ ಒಪ್ಪಿಕೊಳ್ಳುವುದಾದರೆ ತಕ್ಷಣವೇ ಮಗನಿಂದ ರಾಜಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರು ಸೋನಿಯಾ ಗಾಂಧಿ ಅವರ ಕುಟುಂಬ ರಾಜಕೀಯವನ್ನು ಟೀಕಿಸಿzರೆ. ಈ ವೇಳೆ ಅವರ ಪಕ್ಕದ ಯಡಿಯೂರಪ್ಪ ಅವರು ಕೂತಿzರೆ. ಇವರಿಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ಬಿಜೆಪಿ ರಾಜಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು. ಇಲ್ಲ, ಮೋದಿ ಸಭೆಗೆ ಯಡಿಯೂರಪ್ಪ ಅವರು ಹೋಗಬಾರದು ಎಂದು ಹರಿಹಾಯ್ದರು.
ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲೂ ಬಿಜೆಪಿ ಹೆಚ್ಚು ಮತಗಳು ಬರುತ್ತಿದ್ದೇವೆ ಎಂದರೆ ಅದಕ್ಕೆ ನರೇಂದ್ರ ಮೋದಿ ಕಾರಣ. ರಾಜ್ಯದಲ್ಲೂ ಮೋದಿ ಮುಖ ನೋಡಿಕೊಂಡು ಜನ ಬಿಜೆಪಿಗೆ ಮತ ಕೊಡುತ್ತಿzರೆ ವಿನಃ ವಿಜಯೇಂದ್ರ ರಾಜಧ್ಯಕ್ಷರಾಗಿzರೆ ಎಂದು ಯಾರೂ ಕೂಡ ಮತ ಹಾಕುತ್ತಿಲ್ಲ. ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಬೂತ್ ಇದೆ ಎಂಬುದೇ ವಿಜಯೇಂದ್ರರಿಗೆ ಗೊತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕೋಟ್ಯಾಂತರ ರುಪಾಯಿ ಹಣ ಸುರಿದರೂ ಅವರಿಗೆ ೬೦ ಸಾವಿರ ಲೀಡ್‌ನಿಂದ ಕೇವಲ ೧೦ ಲೀಡ್ ಬಂದರು. ಅಂತರ ಯಾಕೆ ಕಡಿಮೆಯಾಗಿದೆ ಎಂದು ಪ್ರಶ್ನಿಸಿದರು.
ಹಿಂದು ಯುವತಿ ನೇಹಾ ಹತ್ಯೆಯಾದಾಗ ಸಿಎಂ ಹಾಗೂ ಗೃಹ ಸಚಿವರು ಇದು ಲವ್ ಜಿಹಾದ್ ಅಲ್ಲ, ವೈಯಕ್ತಿಕ ಕೊಲೆ ಎಂದು ಹಗುರವಾಗಿ ಹೇಳಿಕೆ ಕೊಟ್ಟರು. ಪ್ರತಿಭಟನೆ ಬಳಿಕ ಸಿಐಡಿ ತನಿಖೆ ಕೊಟ್ಟಿzರೆ. ವರದಿ ಕೊಡುವುದಕ್ಕಿಂತ ಮುನ್ನವೇ ಸಿಎಂ, ಸಚಿವರು ಈ ರೀತಿ ಹೇಳಿಕೆ ಕೊಟ್ಟರೆ, ಸಿಐಡಿ ಸಂಸ್ಥೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ಹೇಗೆ ಕೊಡುತ್ತದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಸಂತೋಷ್ ಲಾಡ್ ಅವರು ನೇಹಾ ಅವರ ಮನೆ ಪ್ರವಾಸಿ ತಾಣವಾಗಿದೆ ಎಂದು ಹೇಳಿಕೆ ಕೊಟ್ಟರು. ಈಗ ಸಿಎಂ ಸಿzರಮಯ್ಯ ಹೋಗಿzರೆ. ಅವರೇನೂ ಪಿಕ್‌ನಿಕ್ ಹೋಗಿzರಾ? ಹಿಂದು ಸಮಾಜದ ಜಗೃತಿ ಹೆಚ್ಚಾದ ಬಳಿಕ ಚುನಾವಣೆಯಲ್ಲಿ ನಮಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈಗ ಭೇಟಿ ಕೊಡುವ ಪ್ರಯತ್ನ ಮಾಡಿzರೆ. ಸರ್ವಜನಾಂಗ ಶಾಂತಿ ತೋಟ ನಮ್ಮ ಗುರಿ ಎನ್ನುವ ನೀವು ಯಾಕೆ ಮುಸ್ಲಿಂ ತೃಷ್ಟಿಕರಣ ಮಾಡುತ್ತಿದ್ದೀರಿ, ಇದನ್ನು ಮೊದಲು ಬಿಡಿ ಎಂದು ಕಾಂಗ್ರೆಸ್ ನಾಯಕರಿಗೆ ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ತಮಿಳು ಸಮಾಜ ಮುಖಂಡರಾದ ಗೋಪಾಲ್, ಮಂಜುನಾಥ್, ರಾಜೇಂದ್ರ, ಮಾಜಿ ಮೇಯರ್ ಸುವರ್ಣ ಶಂಕರ್, ಲತಾ ಗಣೇಶ್, ಆರತಿ ಆ.ಮ.ಪ್ರಕಾಶ್, ವಿಶ್ವಾಸ್ , ರಾಜಣ್ಣ, ವಿದ್ಯಾ ಪ್ರೇಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.