ಸೇವಾ ಕಾರ್ಯದಲ್ಲಿ ನಿರತವಾಗಿರುವ ಸಂಸ್ಥೆ ರೋಟರಿ
ಶಿವಮೊಗ್ಗ: ಸ್ವಹಿತ ಮೀರಿದ ಸೇವೆಯಿಂದ ವಿಶ್ವಶಾಂತಿ ಸಾಧ್ಯ ಎಂಬ ಧ್ಯೇಯವಾಕ್ಯದಿಂದ ರೋ ಟರಿ ಸಂಸ್ಥೆಯು ಆರಂಭಗೊಂದು ನೂರು ವರ್ಷಗಳಿಗೂ ಮೀರಿ ಸೇವಾ ಕಾರ್ಯದಲ್ಲಿ ನಿರತವಾಗಿದೆ ಎಂದು ರೋಟರಿ ಮಾಜಿ ಸಹಾ ಯಕ ಗವರ್ನರ್ ಜಿ.ವಿಜಯ ಕುಮಾರ್ ಹೇಳಿದರು.
ರೋಟರಿ ಜ್ಯುಬಿಲಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಉಳ್ಳ ವರು ಕೊಡುಗೈ ದಾನಿಗಳಾಗಿ ಸಮಾಜ ಕಟ್ಟಬೇಕು. ಮಾಡಿದ ಸೇವೆ ಅಜರಾಮರವಾಗಿ ಉಳಿಯುತ್ತದೆ ಎಂದು ತಿಳಿಸಿದರು.
ಜನಿಸಿದಾಗ ಯಾರು ಶ್ರೀಮಂ ತರಲ್ಲ, ಮಾಡುವ ಸತ್ಕಾರ್ಯಗಳು ಅವರನ್ನು ಗುರುತಿಸಿ ಸಮಾಜ ಬೆಳೆಸುತ್ತದೆ. ಸಮುದಾಯ ಸೇವೆಗಳಲ್ಲಿ ಪ್ರಪಂಚದ ರೋಟರಿ ಸಂಸ್ಥೆಯು ಪ್ರಥಮ ಸ್ಥಾನದಲ್ಲಿ ಇದೆ. ಪಲ್ಸ್ ಪೊಲಿಯೋ ಹಾಗೂ ಕರೋನ ಸಂದರ್ಭದಲ್ಲಿ ರೋಟರಿಯ ಸೇವೆ ಸದಾ ಅವಿಸ್ಮರಣೀಯ ಎಂದರು.
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚು ಹೊತ್ತನ್ನು ನೀಡುವುದರ ಮುಖಾಂತರ ಸೇವೆಯನ್ನು ಸಲ್ಲಿಸುತ್ತಿದೆ. ರೋಟರಿ ಸಮಸ್ಯೆಗಳ ಸೇವೆ ಇನ್ನಷ್ಟು ಹೆಚ್ಚು ಹೆಚ್ಚು ಪ್ರಸಾರವಾಗಲು ಹೆಚ್ಚಿನ ಸದಸ್ಯರು ರೋಟರಿಯಲ್ಲಿ ತೊಡಗಿಸಿಕೊಳ್ಳ ಬೇಕು ಎಂದು ಅಭಿಪ್ರಾಯ ಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾ ಡಿದ ವಾಗೇಶ್, ರೋಟರಿಗೆ ಸೇರಿದ ಎಲ್ಲರು ರೋಟರಿಯನ್ ಎಂದು ತಮ್ಮ ಹೆಸರ ಮುಂದೆ ಸೇರಿಸಿಕೊಳ್ಳಬೇಕು. ಇದನ್ನು ವಿಜಯಕುಮಾರ್ ಸದಸ್ಯರಾದ ದಿನದಿಂದ ಉಪಯೋಗಿಸಿಕೊ ಂಡು ಬಂದಿzರೆ. ಅನ್ವರ್ಥ ನಾಮ ಮತ್ತು ಇಮೇಲ್ ಹೆಸರು ಅದೇ ಇದೆ. ಸಂಪೂರ್ಣವಾಗಿ ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿzರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೇಣುಕಾ ರಾಧ್ಯ ಮಾತನಾಡಿ, ಶಿವಮೊಗ್ಗ ನಗರದ ಹಲವಾರು ಸಂಘ ಸಂಸ್ಥೆ ಗಳಲ್ಲಿ ತೊಡಗಿಸಿಕೊಂಡಿರುವ ವಿಜಯಕುಮಾರ್ ಅನೇಕರಿಗೆ ಮಾದರಿಯಾಗಿzರೆ. ಇವರಿಂದ ಉತ್ತೇಜನಗೊಂಡು, ರೋಟರಿ ಸದಸ್ಯರಾಗಿ ಉತ್ತಮ ಪ್ರಜೆ ಗಳಾಗಲು ಮಾದರಿಯಾಗಿzರೆ ಎಂದರು.
ಪ್ರಮುಖರಾದ ಲಕ್ಷ್ಮಿನಾರಾ ಯಣ ಸ್ವಾಗತಿಸಿದರು ಕಾರ್ಯ ದರ್ಶಿ ರೂಪಾ ಪುಣ್ಯಕೋಟಿ ವಂದಿಸಿದರು. ಭಾರದ್ವಾಜ್, ನಾಗರಾಜ್ ಹಾಗೂ ಸದಸ್ಯರು ಭಾಗವಹಿಸಿದ್ದರು.