ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕಾಂಗ್ರೆಸ್‌ಗೆ ತೊರೆದು ಬಿಜೆಪಿಗೆ ಜಿಗಿದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹೇಶ್ ಹುಲ್ಮಾರ್

Share Below Link

ಶಿಕಾರಿಪುರ : ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾ ಚಿಸಿದ ಪರಿಣಾಮ ಇದೀಗ ಜಿ ಉಸ್ತುವಾರಿ ಸಚಿವರು ನಮ್ಮ ವಿರುದ್ದ ಹಗೆ ತೀರಿಸಿಕೊಳ್ಳುತ್ತಿzರೆ ಎಂದು ಪುರಸಭಾ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹೇಶ್ ಹುಲ್ಮಾರ್ ಸುದ್ದಿಗೋಷ್ಟಿಯಲ್ಲಿ ಕಿಡಿಕಾರಿದರು.
ಮೂರು ದಶಕಗಳಿಂದಲೂ ಹಗಲು ರಾತ್ರಿ ಎನ್ನದೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದು ಮೂರು ಬಾರಿ ಪುರಸಭಾ ಸದಸ್ಯನಾಗಿ ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದವರೆಗೂ ಜನರು ನಮ್ಮನ್ನು ಆಶೀರ್ವದಿಸಿ ಹರಿಸಿzರೆ. ಆದರೆ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಪರವಾಗಿ ಮಧು ಬಂಗಾರಪ್ಪ ನವರು ಚುನಾವಣೆಗೆ ಹಣವನ್ನು ಒದಗಿಸಿ, ಅವರ ಪರವಾಗಿ ಚುನಾವಣೆ ನಡೆಸುವಂತೆ ಕಾಂಗ್ರೆಸ್ ಪಕ್ಷದವರಿಗೆ ತಿಳಿಸಿದ್ದರು. ಇದು ಪಕ್ಷದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು.


ಪಕ್ಷವು ಗೋಣಿ ಮಾಲತೇಶ್ ಅವರಿಗೆ ವಿಧಾನಸಭಾ ಚುನಾವಣೆ ಯಲ್ಲಿ ಬಿ ಫಾರಂನ್ನು ನೀಡಿದ್ದ ಕಾರಣಕ್ಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಶಿಸ್ತಿನ ಸಿಪಾಯಿಯಂತೆ ಪಕ್ಷದ ಪರವಾಗಿ ಚುನಾವಣೆ ಎದುರಿಸಿದ್ದೇವೆ. ಇವರಿಗೆ ತಾಕತ್ ಇದ್ದಿದ್ದರೆ ನೇರವಾಗಿ ನಾಗರಾಜ್ ಗೌಡರಿಗೆ ಬಿ ಫಾರಂ ಕೊಡಿಸಿ ಚುನಾವಣೆಯನ್ನು ಎದುರಿಸುವಂತೆ ನಮಗೆ ಸೂಚಿಸಿದಲ್ಲಿ ಪಕ್ಷದ ನಿಷ್ಠಾವಂತರಾಗಿ ನಾಗರಾಜ್ ಗೌಡರಿಗೆ ಮತವನ್ನು ಕೇಳುತ್ತಿzವು, ಒಳಗೊಂದು ಹೊರಗೊಂದು ಮಾಡುವ ಇಬ್ಬಗೆಯ ನೀತಿ ಪಕ್ಷದ್ರೋಹವನ್ನು ಸಹಿಸಲಾಗದು ಎಂದರು .
ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರು ಹಿರಿಯ ರಾಗಿದ್ದು ಅವರು ಚುನಾವಣೆಯಲ್ಲಿ ಗೆದ್ದರೆ ಮುಂದಿನ ದಿನದಲ್ಲಿ ನನಗೆ ಜಿಯಲ್ಲಿ ಸಚಿವ ಸ್ಥಾನ ದೊರಕುವು ದಿಲ್ಲ ಎಂಬ ದುರಾಲೋಚನೆ ಯಿಂದ ಅವರ ಸೋಲಿಗೂ ಮಧು ಬಂಗಾರಪ್ಪನವರು ಕಾರಣರಾಗಿ zರೆ ಎಂದು ಗಂಭೀರ ಆರೋಪ ಮಾಡಿದ ಅವರು ಖುದ್ದು ಸ್ವಂತ ಅಣ್ಣನನ್ನೇ ಬಿಡದ ಮಧು ಪಕ್ಷದಲ್ಲಿನ ಸಾಮಾನ್ಯರನ್ನು ಬಿಡುತ್ತಾರೆಯಾ ಎಂದು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಪಕ್ಷವನ್ನು ನಾವು ಹುತ್ತದಂತೆ ಶ್ರಮವಹಿಸಿ ಕಟ್ಟಿದ್ದೇವೆ ಆದರೆ ಆ ಹುತ್ತಕ್ಕೆ ನಾಗರಹಾವಿನಂತೆ ಬಂದು ಸೇರಿಕೊಂಡಿರುವ ನಾಗರಾಜ್ ಗೌಡ ಪಕ್ಷದಲ್ಲಿರುವ ಎಲ್ಲರನ್ನೂ ಕುಟುಕಿ ಕುಟುಕಿ ಹೊರಹಾಕುತ್ತಿzರೆ. ಇದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಬೀದಿಗೆ ಬರುವ ಪರಿಸ್ಥಿತಿ ಉಂಟಾಗಿದೆ ಎಂದರು.
ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಜಿಯಲ್ಲಿ ಬಿ.ವೈ ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಭವಿಷ್ಯ ದಲ್ಲಿ ಉತ್ತಮ ಕಾರ್ಯಗಳನ್ನು ಬಿಜೆಪಿಯಿಂದ ಮಾತ್ರ ಮಾಡಲು ಸಾಧ್ಯ ಎಂಬ ಸದುದ್ದೇಶದಿಂದ, ಬೇಷರತ್ತಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಪುರಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಬಿಜೆಪಿ ಮೂಲಕ ಸ್ಪರ್ಧಿಸಿ ಜಯಗಳಿಸುತ್ತೇನೆ ಎಂದರು.
ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ, ಬಿಜೆಪಿ ನಗರ ಅಧ್ಯಕ್ಷ ಎಸ್ ಎಸ್ ರಾಘವೇಂದ್ರ, ಮಿಲಿಟರಿ ಬಸವರಾಜ್, ಜೀನಳ್ಳಿ ಪ್ರಶಾಂತ್, ರವಿಕುಮಾರ್, ಪುಟ್ಟಪ್ಪ, ಡಿ.ಎಲ್ ಬಸವರಾಜು, ಹಳ್ಳೂರು ಪರಮೇಶ್ವರಪ್ಪ, ಬೆಣ್ಣೆ ಪ್ರವೀಣ್, ರೇಣುಕಾ ಸ್ವಾಮಿ, ಸಂದೀಪ್ ಗೋಣಿ, ಭೋಗಿ ಚೇತನ್ ಮತ್ತಿತರರು ಉಪಸ್ಥಿತರಿದ್ದರು.