ಏ.21ರಿಂದ 23ರವರೆಗೆ ೩ದಿನಗಳ ಕಾಲ ಶ್ರೀರಾಮ – ಆಂಜನೇಯಸ್ವಾಮಿ ರಥೋತ್ಸವ…
ನ್ಯಾಮತಿ (ಹೊಸ ನಾವಿಕ ವಾರ್ತೆ): ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಶ್ರೀರಾಮ ದೇವರ ಹಾಗೂ ಶ್ರೀ ಆಂಜನೇಯ ಸ್ವಾಮಿ ಧ್ವಜರೋಹಣ ಮತ್ತು ಕಂಕಣ ಧಾರಣೆ, ರಥೋತ್ಸವ ಕಾರ್ಯಕ್ರಮ ಏ.೨೧ರಿಂದ ಏ.೨೩ರ ದವನ ಹುಣ್ಣಿಮೆಯವರೆಗೆ ಜರುಗಲಿವೆ.
ಏ.೨೧ರ ಭಾನುವಾರ ಸಂಜೆ ೬.೩೦ರಿಂದ ೧೦.೩೦ರವರೆಗೆ ಧ್ವಜರೋಹಣ, ಕಂಕಣ ಧಾರಣೆ ಕಾರ್ಯಕ್ರಮ, ಏ.೨೨ರ ಸೋಮವಾರ ಬೆಳಗಿನ ಜಾವ ೫ಗಂಟೆಗೆ ಗ್ರಾಮದ ದೇವರುಗಳಿಗೆ ಮಹಾರುದ್ರಾಭಿಷೇಕ ಮತ್ತು ಆಂಜನೇಯಸ್ವಾಮಿ ಬಾಸಿಂಗ ಧಾರಣೆ ಹಾಗೂ ಮಧ್ಯಾಹ್ನ ೩.೧೫ರಿಂದ ೪.೧೦ರವರೆಗೆ ರಥಗಳಿಗೆ ಕಳಸಾರೋಹಣ ನೆರವೇರುವುದು. ಸಂಜೆ ೪.೨೫ಕ್ಕೆ ಹೂವಿನ ತೇರು ನಡೆಸಲಾಗುವುದು.
ಏ.೨೩ರ ಮಂಗಳವಾರ ೮.೦೫ಕ್ಕೆ ನಂದಿಗುಡಿ ಬೃಹನ್ಮಠದ ಶ್ರೀಮದ್ ವೃಷಭಾಪುರಿ ಸೂರ್ಯ ಸಿಂಹಾಸನಾಧೀಶ್ವರ ೧೧೦೮ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳ ಹಾಗೂ ಮತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ರಾಮ ದೇವರ ಹಾಗೂ ಶ್ರೀ ಆಂಜನೇಯಸ್ವಾಮಿ ಮಹಾರಥೋತ್ಸವ ಗ್ರಾಮದ ಎ ದೇವರುಗಳ ಸಮ್ಮುಖದಲ್ಲಿ ಡೊಳ್ಳು, ಹಲಗೆ, ಭಜನೆ ಸೇರಿದಂತೆ ಸಕಲ ಮಂಗಳ ವಾದ್ಯಗಳೊಂದಿಗೆ ನಡೆಯಲಿದೆ.
ಅಂದು ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ ನಡೆದು ೧ ಗಂಟೆ ಸುಮಾರಿಗೆ ಭೇಟಿ ಮರ ತರುವುದು. ಸಂಜೆ ೪ರ ಸುಮಾರಿಗೆ ಹರಿಸೇವೆ (ಮಣೇವು), ಸಂಜೆ ೬ ಗಂಟೆಗೆ ಕಂಕಣ ವಿಸರ್ಜನೆ, ಓಕುಳಿ ಆಡುವ ಕಾರ್ಯಕ್ರಮ ನಡೆಯ ಲಿದೆ. ಈ ಎ ಕಾರ್ಯಕ್ರಮ ಗಳಲ್ಲಿ ಸಕಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕಪೆಗೆ ಪಾತ್ರರಾಗುವಂತೆ ಕೆಂಚಿಕೊಪ್ಪ ಗ್ರಾಮಸ್ಥರು ಕೋರಿzರೆ.