ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿ ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್ ನೇಮಕ..
ಶಿವಮೊಗ್ಗ: ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಗೆ ವರಿಷ್ಠರು ಮಾಡಿರುವ ಪದಾಧಿಕಾರಿಗಳ ನೇಮಕಾತಿಯಲ್ಲಿ ಹಾಲಿ ಜಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಎನ್.ರಮೇಶ್ ಅವರಿಗೆ ಸ್ಥಾನ ಲಭಿಸಿದೆ.
ವಿದ್ಯಾರ್ಥಿ ದಿಸೆಯಿಂದಲೆ ಜನಪರ ಹೋರಾಟಗಳಿಂದ ಬಂದ ಎನ್. ರಮೇಶ್ ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿ ಹಂತ ಹಂತವಾಗಿ ಕಾಂಗ್ರೆಸ್‌ನಲ್ಲಿ ನಾಯಕತ್ವನ್ನು ಗಳಿಸಿಕೊಂಡವರು.
೧೯೯೯ ರಿಂದ ೮ ವರ್ಷಗಳ ಕಾಲ ಮೀರ್ ಅಜೀಜ್ ಆಹಮ್ಮದ್, ಆರ್. ಪ್ರಸನ್ನಕುಮಾರ್ ಅವರ ಅಧ್ಯಕ್ಷತೆಯ ಜಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಎನ್. ರಮೇಶ್ ಲೋಕಸಭೆ, ವಿಧಾನ ಸಭೆ. ಮತ್ತು ಜಿಯ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕುವೆಂಪು ವಿವಿ ಸಿಂಡಿಕೇಟ್, ಅಕಾಡಮಿಕ್, ಸೆನಟ್ ಸದಸ್ಯರಾಗಿ, ಎರಡು ಬಾರಿ ಸೂಡಾ ಅಧ್ಯಕ್ಷರಾಗಿ, ಸೇಲಂ ರೈಲ್ವೆ ಬೋರ್ಡ್‌ನ ಸದಸ್ಯರಾಗಿ ಸೇವೆ ಸಲ್ಲಿಸಿರುವ ರಮೇಶ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಕಾಂಗ್ರೆಸ್ ವರಿಷ್ಠರು ರಮೇಶ್ ಅವರ ಪಕ್ಷ ನಿಷ್ಠೆ, ಸಂಘಟನಾ ಕೌಶಲ್ಯಕ್ಕೆ ಮನ್ನಣೆ ಕೊಟ್ಟಂತಾಗಿದೆ.
ಓಬಿಸಿ ಸಮುದಾಯದ ಎನ್. ರಮೇಶ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿನ್ನಾಗಿ ನೇಮಕ ಮಾಡಿರುವುದು ಇದೀಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿದೆ.
ಅಭಿನಂದನೆ: ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಯುವ ಕಾಂಗ್ರೆಸ್ ಮುಖಂಡ ಹಾಗೂ ಸ್ನೇಹಜೀವಿ ಎನ್. ರಮೇಶ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ. ಸಂಗಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಎಂ. ಶ್ರೀಕಾಂತ್, ಆರ್.ಎಂ. ಮಂಜುನಾಥ ಗೌಡ, ಹೆಚ್.ಎಸ್. ಸುಂದರೇಶ್, ದಾದಾಪೀರ್ ಸೇರಿದಂತೆ ಹಲ ಪ್ರಮುಖರು ಅಭಿನಂದಿಸಿದ್ದಾರೆ.