ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
ದಾವಣಗೆರೆ: ರಸ್ತೆ ಅಪಘಾತ ದಲ್ಲಿ ಗಂಭೀರವಾಗಿ ಗಾಯ ಗೊಂಡಿದ್ದ ಮಹಿಳೆಯನ್ನು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ತಮ್ಮ ಕಾರಿ ನಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿzರೆ.
ತಾಲೂಕಿನ ಹದಡಿ ಮತ್ತು ೬ನೇ ಕಲ್ಲು ಮಧ್ಯೆ ಬಸ್ ಅಪಘಾತದಲ್ಲಿ ಕುಕ್ಕವಾಡ ಗ್ರಾಮದ ಹಾಲಮ್ಮ (೫೫) ಗಂಭೀರವಾಗಿ ಗಾಯ ಗೊಂಡಿದ್ದು, ಸಕಾಲದಲ್ಲಿ ಯಾವುದೇ ವಾಹನಗಳು ಬಾರದೆ ರಸ್ತೆಯಲ್ಲಿಯೇ ನರಳಾಡುತ್ತಿದ್ದರು.
ಇದೇ ಸಮಯಕ್ಕೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕಾರಿಗನೂರು ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಕ್ಕೊಂದಕ್ಕೆ ತೆರಳುತ್ತಿರುವಾಗ ದಾರಿ ಮಧ್ಯೆ ಗಾಯಗೊಂಡು ನರಳುತ್ತಿದ್ದ ಮಹಿಳೆ ಯನ್ನು ಕಂಡ ಶಾಸಕ ಬಸವಂತಪ್ಪ, ಕೂಡಲೇ ತನ್ನ ಕಾರಿನಲ್ಲಿಯೇ ಎಸ್.ಎಸ್.ಎಂ.ಹೈಟೆಕ್ ಆಸ್ಪತ್ರೆಗೆ ದಾಖಲಿಸಿದರು. ಮಹಿಳೆಯ ಕುಟುಂಬ ಸದಸ್ಯರಿಗೆ ವೈಯಕ್ತಿಕ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿzರೆ. ಕುಕ್ಕವಾಡ ಗ್ರಾಮ ದಿಂದ ದಾವಣಗೆರೆಯ ಸಂಬಂಧಿಕರೊಬ್ಬರ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಬರುವಾಗ ಹದಡಿ ಮತ್ತು ಆರನೇ ಕಲ್ಲು ಮಧ್ಯೆ ಚಾಲಕ ಬ್ರೇಕ್ ಹಾಕಿದ ಸಂದರ್ಭ ದಲ್ಲಿ ಬಾಗಿಲ ಬಳಿ ನಿಂತಿದ್ದ ಆ ಮಹಿಳೆ ಕೆಳಗೆ ಬಿದ್ದು ಈ ಘಟನೆ ನಡೆದಿದೆ ಎಂದು ಹೇಳಲಾ ಗಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕೈಕಾಲುಗಳು ತರಚಿವೆ. ಈ ಕುರಿತು ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.