ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಆಗ್ರಹಿಸಿ ನಾಳೆ ಪ್ರತಿಭಟನೆ…
ಶಿವಮೊಗ್ಗ: ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಆಗ್ರಹಿಸಿ ಪುನರ್ ಹೋರಾಟ ಆರಂಭಿಸುವುದಾಗಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಸುದ್ದಿಗೋಷ್ಟಿ ಯಲ್ಲಿ ತಿಳಿಸಿದರು.
ಶ್ರಾವಣ ಮಾಸದಲ್ಲಿ ಇಷ್ಟ ಲಿಂಗ ಪೂಜೆ ನೆರವೇರಿಸುವ ಮೂಲಕ ಮತ್ತೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸು ವಂತೆ ನಮ್ಮ ಹೋರಾಟವನ್ನೂ ಆರಂಭಿಸುತ್ತೇವೆ ಎಂದ ಅವರು, ಪಂಚಮಸಾಲಿ, ಗೌಡ, ಮಲೆಗೌಡ, ದೀಕ್ಷೆ ಲಿಂಗಾಯಿತರಿಗೆ ೨ಎ ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಸಮಾಜ ಗಳಿಗೆ ಓಬಿಸಿ ಮೀಸಲಾತಿಗೆ ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಫೆ.೧೪ರಂದು ಬೆಳಗ್ಗೆ ೧೦ಕ್ಕೆ ಶಿವಮೊಗ್ಗದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಚೌಕಿ ಮಠದಲ್ಲಿ ಇಷ್ಟಲಿಂಗ ಮಹಾ ಪೂಜೆಯೊಂದಿಗೆ ಶಿವಪ್ಪನಾಯಕ ವೃತ್ತದಿಂದ ನೆಹರು ರಸ್ತೆ ಮಾರ್ಗ ವಾಗಿ ಗೋಪಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾ ಗುವುದು ಎಂದು ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರವು ಅಧಿಕಾರ ಮುಗಿಯುವ ಕೊನೆಯ ಹಂತ ದಲ್ಲಿ ೨ಡಿ ಕೆಟಗರಿ ಸೇರಿಸಿ ಮೀಸಲಾತಿ ಕಲ್ಪಿಸಿತು. ಆದರೆ, ಅದರಿಂದ ನಮ್ಮ ಸಮಾಜಕ್ಕೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಲಿಲ್ಲ. ನಮಗೆ ೨ಎ ಅಥವಾ ೨ಡಿ ಯಾವುದೇ ಕೊಟ್ಟರೂ ಅದರಿಂದ ನಮ್ಮ ಸಮಾಜಕ್ಕೆ ಉಪಯೋಗ ವಾಗಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಪಂಚಮ ಸಾಲಿ ಸಮಾಜದ ಪಾತ್ರವೂ ಬಹಳಷ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೂ ಈ ವಿಚಾರ ತಿಳಿದಿದೆ. ಅಧಿವೇಶನ ಮುಗಿದ ನಂತರ ಸಂವಿಧಾನ ಹಾಗೂ ಕಾನೂನು ತಜ್ಞರ ಸಭೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳು ವುದಾಗಿ ಸಿದ್ದರಾಮಯ್ಯ ಹೇಳಿ ದ್ದರು. ಅಧಿವೇಶನದ ಮುಗಿದು ಒಂದು ತಿಂಗಳಾ ಗುತ್ತಿದ್ದು, ಬೇಗನೇ ಸಭೆಯನ್ನು ಕರೆದು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಎಲ್ಲಾ ಲಿಂಗಾಯತ ರನ್ನು ಓಬಿಸಿ ಪಟ್ಟಿಗೆ ಸೇರಿಸಬೇಕೆಂ ಬುದು ನಮ್ಮ ಮುಖ್ಯ ಬೇಡಿಕೆ ಯಾಗಿದೆ. ಸಿಎಂ ಸಿದ್ದರಾಮಯ್ಯ ನವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಬಗ್ಗೆ ಸಂವಿಧಾನ, ಕಾನೂನು ತಜ್ಞರ ಸಭೆ ಕರೆದು, ಸಮಾಜಕ್ಕೆ ಒಳ್ಳೆಯ ಸುದ್ದಿ ನೀಡಬೇಕೆಂಬುದು ನಮ್ಮ ನಿರೀಕ್ಷೆ, ಬೇಡಿಕೆ, ಒತ್ತಾಯವೂ ಆಗಿದೆ ಎಂದು ಎಂದು ಹೇಳಿದರು.