ರಾಜಕೀಯ

ಸಂಘ ಪರಿವಾರದ ಗೇಮ್‌ಪ್ಲಾನ್- ಕಮಲ ಕಮಾಂಡ್ ದರ್ಬಾರ್‌ಗೆ ಬೇಸತ್ತ ಸೀನಿಯರ್‍ಸ್…

Share Below Link

(ಹೊಸನಾವಿಕ ಪೊಲಿಟಿಕಲ್ ಡೆಸ್ಕ್)


ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಮಲ ಪಾಳೆಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯಿದ್ದು, ದಿನಕ್ಕೊಂದು ಅಲಿಖಿತ ನಿಯಮಗಳನ್ನು ಹೇರಲಾಗುತ್ತಿದೆ. ಹಿರಿಯರ ಕಡೆಗಣನೆ, ಗುಜರಾತ್ ಮಾದರಿ ಎಂದೆಲ್ಲಾ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದೆ. ಈ ಕಾರಣದಿಂದ ಕೆಲವು ಹಿರಿಯ ರಾಜಕಾರಣಿಗಳು ತಮ್ಮ ಮತ್ತು ತಮ್ಮ ಕುಟುಂಬದವರ ರಾಜಕೀಯ ಭವಿಷ್ಯದ ಹಿನ್ನಲೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೂ ಆಗದೆ ಪಕ್ಷದಲ್ಲಿ ಉಳಿಯಲೂ ಆಗದೆ ಚಡಪಡಿಸುತ್ತಿ ದ್ದರೆ, ಮತ್ತೆ ಕೆಲವರು ತಮ್ಮ ಸಾಮರ್ಥ್ಯ ವನ್ನು ಪರೀಕ್ಷೆಗೆ ಒಡ್ಡುವ ಮೂಲಕ ಸೆಡ್ಡುಹೊಡೆಯಲು ಸಜ್ಜಾಗಿದ್ದಾರೆ.
ಒಂದು ಹಂತದಲ್ಲಿ ಇಡಿ, ಐಟಿ, ಸಿಬಿಐ ಎಂದೆಲ್ಲಾ ಬೆದರಿಕೆಯೊಡ್ಡಿ ಮಾನಸಿಕವಾಗಿ ಹಿಂಸೆ ನೀಡಿ ಕಟ್ಟಿಹಾಕುತ್ತಿದ್ದ ಬಿಜೆಪಿ ಹೈಕಮಾಂಡ್ ನಡೆಯನ್ನು ಸ್ವಪಕ್ಷಿಯರೇ ವಿರೋಧಿಸುತ್ತಿದ್ದು, ಈ ಬೆದರಿಕೆಗಳಿಂದ ಹೊರ ಬರಲಾರದವರು ಕೈಕೈ ಹಿಸುಕಿಕೊಳ್ಳುತ್ತಿ ದ್ದರೆ, ಮತ್ತೆ ಕೆಲವರು ಸೆಡ್ಡು ಹೊಡೆದು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ನಿರ್ಧರಿಸಿ ತಮ್ಮಿಷ್ಠದ ಪಕ್ಷಗಳಲ್ಲಿ ಆಸರೆ ಪಡೆಯಲು ನಿರ್ಧರಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತದಲ್ಲಿದ್ದರೂ ಬಿಜೆಪಿ ತನ್ನ ಜನಪ್ರತಿನಿಧಿಗಳನ್ನು ಉಳಿಸಿಕೊಳ್ಳಲಾ ಗದೆ ಇರಿಸುಮುರಿಸಿಗೆ ಒಳಗಾಗಿದ್ದರೆ, ಇದು ಕಾಂಗ್ರೆಸ್‌ಗೆ ವರದಾನವಾಗಿದೆ. ಈ ಹಿಂದೆ ಆಪರಷನ್ ಕಮಲ ಕಮಲಕ್ಕೆ ಸಿಲುಕಿ ಬಿಜೆಪಿ ಪಾಲಾಗಿದ್ದವರು ಮರಳಿ ತವರಿನತ್ತ ಮುಖ ಮಾಡಿzರೆ. ಸಂಘ ಪರಿವಾದರ ಧಾರ್ಮಿಕ ಗರ್ ವಾಪಾಸ್ಸಾತಿಗೆ ಕಾಂಗ್ರೆಸ್‌ನ ರಾಜಕೀಯ ಗರ್ ವಾಪಾಸ್ಸಾತಿ ಇಡೀ ದೇಶದಲ್ಲಿ ಸಂಚಲನವನ್ನೇ ಮೂಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವನ್ನು ಆಪರೇಷನ್ ಕಮಲದಿಂದ ಕೆಡವಿ ಅಧಿಕಾರದ ಗದ್ದುಗೆ ಏರಿದ್ದ ಯಡಿಯೂರಪ್ಪನವರು ತದನಂತರ ಉತ್ತಮ ಆಡಳಿತವನ್ನೇ ನೀಡುತ್ತಿದ್ದರೂ ವಯಸ್ಸಿನ ನೆಪವೊಡ್ಡಿ ಅವರನ್ನು ಬಲವಂತವಾಗಿ ಸೈಡ್‌ಲೈನ್ ಮಾಡಿದ್ದಲ್ಲದೇ, ವೀರಶೈವ ಓಟ್ ಬ್ಯಾಂಕ್‌ಗೆ ಹಿನ್ನಡೆಯಾಗಬಾರದೆಂದು ಅವರದೇ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದ್ದು ಈಗ ಇತಿಹಾಸ.
ನಿರೀಕ್ಷೆಗೆ ಮೀರಿ ಉತ್ತಮ ಆಡಳಿತ ನೀಡುತ್ತಿದ್ದ ಸಿಎಂ ಬೊಮ್ಮಾಯಿ ಸರ್ಕಾರದಲ್ಲಿ ಮಿತಿಮೀರಿದ ಆಡಳಿತ ವಿರೋಧಿ ಅಲೆ ಕಾಣಬರುತ್ತಿದೆ. ಇದನ್ನರಿತ ಕೆಲ ನಾಯಕರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲಾ ರಂಭಿಸಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು, ಸಿಎಂ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿರುವ ವಿ.ಸೋಮಣ್ಣ ಮತ್ತು ಡಾ| ಕೆ.ಸಿ. ನಾರಾಯಣಗೌಡ ಅವರ ಜೊತೆ ಮತ್ತಷ್ಟು ಬಿಜೆಪಿ ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್‌ನತ್ತ ವಲಸೆ ಆರಂಭಿ ಸಿದ್ದು, ಕೈ ಪಡೆಯಲ್ಲಿ ಈಗಾಗಲೇ ಗೆಲುವಿನ ಉತ್ಸಾಹ ಮನೆ ಮಾಡಿದೆ.
ಹಿಂದೆ ಐಟಿ, ಇಡಿ, ಸಿಬಿಐ ಎಂದೆಲ್ಲಾ ಬೆದರಿಸಿ ಆಪರೇಷನ್ ಕಮಲ ಎಂಬ ರಾಜಕೀಯ ಪಿಡುಗನ್ನು ಹುಟ್ಟು ಹಾಕಿದ ಬಿಜೆಪಿ, ವಿರೋಧ ಪಕ್ಷಗಳನ್ನು ಅಧೀರರನ್ನಾಗಿಸಿತ್ತು. ಆದರೆ ಈಗ ವಿಧಾನಸಭೆ ಚುನಾವಣೆ ಸಮೀಪದಲ್ಲಿ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಎ ತನಿಖಾ ಸಂಸ್ಥೆಗಳ ಭಯವನ್ನು ಮೆಟ್ಟಿ ನಿಂತು ಕಾಂಗ್ರೆಸ್‌ನತ್ತ ಬಿಜೆಪಿ- ಜೆಡಿಎಸ್ ನಾಯಕರು ಮುಖ ಮಾಡಿzರೆ.
ಮೊದಲ ಹಂತದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಬೆಂಬಲ ಸೂಚಿಸಿದ್ದ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಕಾಂಗ್ರೆಸ್ ಸೇರ್ಪಡೆಯಾಗಿ ದ್ದರೆ, ಮೊನ್ನೆಯ ದಿನ ವಿಧಾನ ಪರಿಷತ್‌ನ ಸದಸ್ಯ ಪುಟ್ಟಣ್ಣ ಕೈಪಾಳೆಯ ಸೇರಿzಗಿದೆ.
ಎರಡನೇ ಹಂತದಲ್ಲಿ ಹಿರಿಯ ಸಚಿವರಾದ ವಿ.ಸೋಮಣ್ಣ ಮತ್ತು ಶಿವವಗ್ಗ ಜಿಲ್ಲೆ ಉಸ್ತುವಾರಿ ಸಚಿವರಾದ ಡಾ.ಕೆ.ಸಿ. ನಾರಾಯಣ ಗೌಡ, ಶಾಸಕರಾದ ಚಿತ್ರದುರ್ಗ ಜಿ ಹಿರಿಯೂರಿನ ಪೂರ್ಣಿಮಾ, ಬೆಳಗಾವಿ ಜಿಯ ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲ್, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎನ್.ವೈ. ಗೋಪಾಲಕೃಷ್ಣ, ದೊಡ್ಡಬಳ್ಳಾಪುರದ ನರಸಿಂಹಸ್ವಾಮಿ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರುವ ಸಾಧ್ಯತೆಗಳು ದಟ್ಟವಾಗುತ್ತಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣವಾದ ೧೪ ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೂವರು ವಲಸಿಗ ಶಾಸಕರ ಪೈಕಿ ನಾಲ್ಕು ಮಂದಿ ಕಾಂಗ್ರೆಸ್ ಬಾಗಿಲಲ್ಲಿ ನಿಂತಿzರೆ. ಇವರಲ್ಲಿ ಸಂಪುಟದಲ್ಲಿ ಪ್ರಭಾವಿಗಳಾಗಿರುವ ಸಚಿವರ ಹೆಸರು ಇವೆ ಎಂದು ಹೇಳಲಾಗಿದೆ. ವಲಸಿಗರ ಸೇರ್ಪಡೆ ಕುರಿತು ಇಂದು ಸಂಜೆ ಮಹತ್ವದ ಬೆಳವಣಿಗೆ ನಡೆಯಲಿದ್ದು, ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈಗಾಗಲೇ ಜೆಡಿಎಸ್‌ನಿಂದ ದೂರ ಉಳಿದು ಕಾಂಗ್ರೆಸ್ ಸೇರಲಿರುವ ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ, ಶ್ರೀನಿವಾಸಗೌಡ ಅವರ ಪಕ್ಷ ಸೇರ್ಪಡೆಗೆ ಸಮಯ ನಿಗದಿಯಾಗುವ ಸಾಧ್ಯತೆ ಇದೆ.
ಮಂಡ್ಯ ಜಿಯ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು, ಸಂಪುಟದಲ್ಲಿ ಯುವಜನಸೇವೆ ಮತ್ತು ಕ್ರೀಡಾ ಖಾತೆಯೊಂದಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಕೆ.ಸಿ. ನಾರಾಯಣಗೌಡರು ಕಾಂಗ್ರೆಸ್ ಸೇರ್ಪಡೆಗೆ ಬಹುತೇಕ ವೇದಿಕೆ ಸಜ್ಜುಗೊಂಡಿದೆ. ನಿನ್ನೆ ರಾತ್ರಿ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕ ಚಂದ್ರಶೇಖರ್ ಅವರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿ ಸಂಧಾನ ನಡೆಸಿzರೆ ಎನ್ನಲಾಗಿದೆ.
ಮತ್ತೊಂದೆಡೆ ಕಾಂಗ್ರೆಸ್‌ನ ಪ್ರಭಾವಿ ನಾಯಕ ಕೃಷ್ಣಪ್ಪ ಮತ್ತು ಅವರ ಪುತ್ರ ಪ್ರಿಯಾಕೃಷ್ಣ ಅವರನ್ನು ಮನವೋಲಿಸಿ ಸಚಿವ ಸೋಮಣ್ಣ ಅವರ ಜೊತೆ ಸಂಧಾನ ಮಾಡಿಸಲು ನಾಯಕರು ಯತ್ನಿಸುತ್ತಿzರೆ. ಕೃಷ್ಣಪ್ಪ ಮತ್ತು ಸೋಮಣ್ಣ ಒಂದಾದರೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಬಲ ಹೆಚ್ಚಾಗಲಿದೆ ಎಂಬ ಲೆಕ್ಕಾಚಾರವೂ ನಾಯಕರಲ್ಲಿದೆ.
ದಕ್ಷಿಣ ಭಾಗದಲ್ಲಿ ೧೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರಗಳು ನಡೆದಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಸೋಮಣ್ಣ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದಿಂದ ಬಹಳಷ್ಟು ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿದ್ದವು. ಶೇ.೪೦ರಷ್ಟು ಕಮಿಷನ್, ವ್ಯಾಪಕ ಭ್ರಷ್ಟಚಾರ ದಿಂದಾಗಿ ಬಿಜೆಪಿಗೆ ಭಾರೀ ಹಿನ್ನೆಡೆಯಾಗಿತ್ತು. ಅದರ ಬೆನ್ನ ಚೆನ್ನಗಿರಿಯ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಮೇಲೆ ಲೋಕಾಯುಕ್ತ ದಾಳಿ, ಅದೇ ಪ್ರಕರಣದಲ್ಲಿ ಶಾಸಕರು ಮೊದಲ ಆರೋಪಿಯಾಗುತ್ತಿದ್ದಂತೆ ರಾಜಕೀಯ ಪರಿಸ್ಥಿತಿ ಬದಲಾಗಿದೆ.
ಕಾಂಗ್ರೆಸ್‌ನಿಂದ ಬಿಜೆಪಿಯತ್ತ ಮುಖ ಮಾಡಿದ್ದವರು ಹಿಂದೇಟು ಹಾಕಿzರೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿದೆ ಎಂಬ ನಿರೀಕ್ಷೆಗಳು ಗರಿಗೆದರಿದ್ದು, ಪಕ್ಷದ ಉಳಿಯುವ ವಿಶ್ವಾಸ ವ್ಯಕ್ತಪಡಿಸಿzರೆ. ಮತ್ತೊಂದೆಡೆ ಬಿಜೆಪಿಯಲ್ಲಿದ್ದವರು ಕೇಂದ್ರ ತನಿಖಾ ಸಂಸ್ಥೆಗಳ ಭಯದಿಂದ ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದವರು ಪುಟ್ಟಣ್ಣ ಸೇರ್ಪಡೆಯ ಬಳಿಕ ದೃಢ ನಿಶ್ಚಯ ಮಾಡಿ ಕಾಂಗ್ರೆಸ್ ನಾಯಕರನ್ನು ಸಂಪರ್ಕ ಮಾಡುತ್ತಿzರೆ ಎನ್ನಲಾಗಿದೆ.
ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಯಾವುದೇ ಕ್ಷಣದದರೂ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.
ನಾಯಕರ ಸೇರ್ಪಡೆಯನ್ನು ಖುದ್ದು ಡಿ.ಕೆ.ಶಿವಕುಮಾರ್ ನಿರ್ವಹಣೆ ಮಾಡುತ್ತಿದ್ದು, ಸಿದ್ದರಾಮಯ್ಯ ಸಾಥ್ ನೀಡಿzರೆ ಎಂದು ಮೂಲಗಳು ತಿಳಿಸಿವೆ.