ಆಧ್ಯಾತ್ಮ ಚಿಂತನೆಯೊಂದಿಗೆ ಸ್ಥಿರ ಸಮಾಜಕ್ಕೆ ಪ್ರೋತ್ಸಾಹಿಸಿ..
ಸೊರಬ: ಮಠ ಮಂದಿರಗಳು ಸದ್ಭಕ್ತರ ಧಾರ್ಮಿಕ ಕೇಂದ್ರ ಗಳಾಗಿದ್ದು ಜಡೆ ಮಠದ ಶ್ರೇಯೋಭಿವೃದ್ಧಿಗಾಗಿ ಭಕ್ತರು ವಿವಿಧ ರೀತಿಯಲ್ಲಿ ಕೊಡುಗೆಗಳನ್ನು ನೀಡುವ ಮೂಲಕ ಸೇವಾ ಕೈಂಕರ್ಯದಲ್ಲಿ ತೊಡಗುತ್ತಿರು ವುದು ಅತ್ಯಂತ ಹೆಮ್ಮೆಯ ಸಂಗತಿ ಯಾಗಿದೆ ಎಂದು ಜಡೆ ಸಂಸ್ಥಾನ ಮಠದ ಡಾ| ಮ.ನಿ.ಪ್ರ.ಮಹಾಂತ ಸ್ವಾಮೀಜಿ ಹೇಳಿದರು.
ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಡೆ ಮಠಕ್ಕೆ ಸಿಂಹಾಸನವನ್ನು ಕೊಡುಗೆಯಾಗಿ ನೀಡಿದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಠದ ಇತಿಹಾಸ ಪರಂಪರೆ ಯಲ್ಲಿ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನೆಡೆಯುತ್ತ ಬಂದಿವೆ, ಸುರಭಿ ಸೇವಾ ಚಾರಿಟೆಬಲ್ ಟ್ರಸ್ಟ್ ಹಲವು ಸಮಾಜಮುಖಿ ಚಿಂತನೆಗಳನ್ನು ಹೊಂದಿ ಸೇವಾ ಕಾರ್ಯಕ್ರಮವನ್ನು ಮಾಡುತ್ತ ಬರುತ್ತಿರುವುದು ವಿಶೇಷ. ಜೀವನದಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸ್ಥಿರ ಸಮಾಜ ನಿರ್ಮಾಣಕ್ಕೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಎಸ್.ಜಿ. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಆಧ್ಯಾತ್ಮಿಕವಾಗಿ ಈ ಭಾಗದ ಜನ ಸಮೂಹವನ್ನು ಒಗ್ಗೂಡಿಸುವಲ್ಲಿ ಜಡೆ ಸಂಸ್ಥಾನ ಮಠವು ಮೊದಲ ಸ್ಥಾನದಲ್ಲಿದೆ ಇದರ ಕೀರ್ತಿಯು ರಾಜ್ಯದೆಡೆ ಹರಡಿ ಇನ್ನಷ್ಟು ಪ್ರಗತಿ ಹೊಂದಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಠದ ಉತ್ತರಾಧಿಕಾರಿ ರುದ್ರದೇವರು, ಸುರಭಿ ಚಾರಿಟೆಬಲ್ ಟ್ರಸ್ಟ್ ನ ವಾಣಿಶ್ರೀ, ಮಂಜುಳಾ ಶ್ಯಾಮ ಸುಂದರ್, ಕುಸುಮಾ, ಉಮಾ, ಅಮಿತ್ ಗೌಡ, ವಿರೂಪಾಕ್ಷಪ್ಪ, ರಾಜು ಗೌಡ, ಗಂಗಾಧರಪ್ಪ, ನಾಗರಾಜ ಗೌಡ, ನಿಂಗಪ್ಪ ಗೌಡ ಸೇರಿದಂತೆ ಮೊದಲಾದವರಿದ್ದರು.