ಜ.27: ಖ್ಯಾತ ಕೈಗಾರಿಕೋದಮಿ ಎಸ್.ರುದ್ರೇಗೌಡರಿಗೆ ಅಭಿನಂದನೆ
ಶಿವಮೊಗ್ಗ: ಮಲೆನಾಡು ಕಂಡ ಖ್ಯಾತ ಕೈಗಾರಿಕೋದ್ಯಮಿಗಳು, ಜನಾನುರಾಗಿ, ಕೊಡುಗೈ ದಾನಿಗಳೂ ಆದ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರಿಗೆ ಜ. ೨೭ ರಂದು ಅಮೃತಮಯಿ ಶೀರ್ಷಿಕೆ ಯಡಿ ಅಭಿನಂದನಾ ಕಾರ್ಯಕ್ರಮ ಹಾಗೂ ಅವರ ಬದುಕು-ಸಾಧನೆ ಕುರಿತ ದಿ ಐರನ್ ಮ್ಯಾನ್ ಪುಸ್ತಕ ಬಿಡುಗಡೆ ಸಮಾರಂಭವನ್ನು ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಶನ್ ಹಾಲ್ ಪಕ್ಕದ ಮೈದಾನದಲ್ಲಿ ಸಂಜೆ ೫.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷರೂ ಆದ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಂಡಂತಹ ಅಪರೂಪದ ಮಲ್ಯಾಧಾರಿತ ರಾಜಕಾರಣಿ, ಶ್ರಮಿಕರ ಉದ್ಯೋಗದಾತರಾಗಿ, ಕೈಗಾರಿಕಾ ಕ್ಷೇತ್ರದ ರೂವಾರಿಗಳಾಗಿ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಜೀವ ತುಂಬಿದ ವರು ಎಸ್.ರುದ್ರೇಗೌಡರು. ಅವರಿಗೆ ಅಭಿನಂದನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಗೌರವ ಸಮರ್ಪಣೆ ಮಾಡಲಿದ್ದು, ಮಾಜಿ ಸಿಎಂ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗೌಡರ ಬದುಕು- ಸಾಧನೆ ಕುರಿತ ಎಸ್. ರುದ್ರೇಗೌಡ-ದಿ ಐರನ್ ಮ್ಯಾನ್ ಪುಸ್ತಕವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್ ಶಂಕರ್ ಅವರು ಗೌಡರ ಕುರಿತು ಅಭಿನಂದನಾ ನುಡಿ ಗಳನ್ನಾಡಲಿದ್ದಾರೆ, ಎಸ್. ರುದ್ರೇಗೌಡರನ್ನು ಕುರಿತ ಕಿರುಚಿತ್ರ ಕೂಡ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಅಭಿನಂದನಾ ಸಮಿತಿಯ ಅಧ್ಯಕ್ಷರು ಹಾಗೂ ನಂಜಪ್ಪ ಗ್ರೂಫ್ ಆಫ್ ಹಾಸ್ಪಿಟಲ್ ನ ಮ್ಯಾನೇಜಿಂಗ್ ಟ್ರಸ್ಟಿ ಡಿ.ಜಿ. ಬೆನಕಪ್ಪ ಅವರು ಮಾತನಾಡಿ, ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಕಷ್ಟು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ವಿವಿಧ ವಿಚಾರ ಗೋಷ್ಠಿಗಳು ನಡೆಯ ಲಿವೆ, ಪಕ್ಕದ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ, ಈಗಾಗಲೇ ಅಭಿಮಾನಿಗಳು, ಹಿತೈಷಿ ಗಳು, ಬಂಧು ಗಳು, ಎಲ್ಲ ಸಮಾಜದ ಗಣ್ಯರು, ಎಲ್ಲರಿಗೂ ಆಹ್ವಾನ ಪತ್ರಿಕೆ ನೀಡಿ ಆಮಂತ್ರಿಸಲಾಗಿದೆ. ಒಂದು ವೇಳೆ ಆಹ್ವಾನ ಪತ್ರಿಕೆ ತಲುಪದವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ತಿಳಿದು ನಮ್ಮ ಹೆಮ್ಮೆಯ ಈ ಸಂಭ್ರಮ ದಲ್ಲಿ ಭಾಗವ ಹಿಸುವಂತೆ ಅವರು ಮನವಿ ಮಾಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಖ್ಯಾತ ವೈದ್ಯರಾದ ಡಾ.ಧನಂಜಯ ಸರ್ಜಿ ಅವರು ಮಾತನಾಡಿ, ಅಂದು ಬೆಳಗ್ಗೆ ೧೦.೩೦ರಿಂದ ಶ್ರಮದಿಂದ ಸಾರ್ಥಕತೆಯೆ ಡೆಗೆ ಶೀರ್ಷಿಕೆಯಡಿ ಯವಕರಿಗೆ ಮಾರ್ಗ ದರ್ಶಿ ವಿಚಾರಗೋಷ್ಠಿ ನಡೆಯಲಿದೆ. ರುದ್ರೇಗೌಡರ ವ್ಯಕ್ತಿತ್ವದ ಭಾಗವಾದ ರಾಜಕಾರಣ, ಸಮಾಜಸೇವೆ, ಕೈಗಾರಿಕೆಗಳ ಕುರಿತು ಚರ್ಚೆಗಳನ್ನು ಯುವಕರಿಗಾಗಿ ಹಮ್ಮಿ ಕೊಳ್ಳಲಾಗಿದೆ. ವಿಶೇಷವಾಗಿ ಮೂವರು ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಯುವಕ- ಯುವತಿಯರೊಂದಿಗೆ ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಿ ದ್ದಾರೆ ಎಂದರು.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರು ಮಲ್ಯಾಧಾರಿತ ರಾಜಕಾರಣ ಕುರಿತು, ಬೆಂಗಳೂರು ಅದಮ್ಯ ಚೇತನ ಫೌಂಡೇಷನ್ನ ಶ್ರೀಮತಿ ತೇಜ್ವಸಿನಿ ಅನಂತಕುಮಾರ್ ಅವರು ಪರಿಸರ ಪ್ರeಯೇ ಸಮಾಜ ಸೇವೆ ಕುರಿತು ಹಾಗೂ ಕಿರ್ಲೋಸ್ಕರ್ ಫೆರುಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮ್ಯಾನೇಜ್ಮೆಂಟ್ ಆಂಡ್ ಟೆಕ್ನಿಕಲ್ ಅಡ್ವೈಜರ್ ಬಿ.ಎಸ್. ಗೋವಿಂದ್ ಅವರು ಸಾಧನೆ ಗೊಂದು ಗುರಿ ವಿಷಯ ಕುರಿತು ವಿಚಾರ ಗೋಷ್ಟಿ ನಡೆಸಿಕೊಡಲಿ ದ್ದಾರೆ. ವಿಚಾರಗೋಷ್ಟಿಯ ಅಧ್ಯಕ್ಷತೆ ಯನ್ನು ಬೆಂಗಳೂರು ರಮಣಶ್ರೀ ಫೌಂಡೇಷನ್ನ ಅಧ್ಯಕ್ಷ ನಾಡೋಜ ಎಸ್. ಷಡಕ್ಷರಿ ವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳ ಆಯ್ದ ಯುವಕ ರೊಂದಿಗೆ ರುದ್ರೇಗೌಡರ ಬದುಕು -ಸಾಧನೆ ಕುರಿತು ಅಂತರಂಗ-ಬಹಿರಂಗ ಸಂವಾದ ಕಾರ್ಯ ಕ್ರಮ ಆಯೋಜಿಸಿದ್ದು, ಅವರ ಬೆಳವಣಿಗೆ, ಕಷ್ಟಗಳನ್ನು ಅವಕಾಶ ಗಳನ್ನಾಗಿಸಿಕೊಂಡು ಸಾಧಿಸಿದ ರೀತಿ, ಉದ್ಯಮಗಳನ್ನು ಕಟ್ಟಿದ ಶ್ರಮ, ಎಲ್ಲರನ್ನೂ ಜೊತೆಯಾಗಿ ಬೆಳೆಸಿದ ಪರಿ, ಈ ಎಲ್ಲ ವಿಚಾರ ಗಳನ್ನೂ ಅವರೊಂದಿಗಿನ ಆತ್ಮೀಯ ಸಂವಾದದಲ್ಲಿ ಅವರ ಪುತ್ರಿ ಶ್ರೀಮತಿ ಚೈತ್ರ ಅರುಣ್ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಈ ವಿಚಾರಗೋಷ್ಟಿಗಳನ್ನು ಯುವ ಜನಾಂಗದ ಭವಿಷ್ಯಕ್ಕೆ ಮಾರ್ಗದರ್ಶಿಯಾಗಿರುವಂತೆ ರೂಪಿಸಲಾಗಿದೆ. ಯುವ ಸಮೂಹ ದಲ್ಲಿ ಹೊಸ ಬದಲಾವಣೆ ತರುವ, ಪರಿಸರಾಸಕ್ತರು, ಹೊಸದಾಗಿ ಯಾವುದೇ ಉದ್ಯಮವನ್ನು ಆರಂಭಿಸಬೇಕು ಎಂಬ ಚಿಂತನೆ ಹೊಂದಿದವರು, ಈಗಾಗಲೇ ಸಣ್ಣ ಉದ್ಯಮಗಳನ್ನು ನಡೆಸುತ್ತಿರುವ ವರು, ಪದವಿ ವಿದ್ಯಾಭ್ಯಾಸ ಮಾಡುತ್ತಿರುವವರು, ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಆಲೋಚನೆ ಇಟ್ಟುಕೊಂಡವರು, ಈಗಾಗಲೇ ವಿವಿಧ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳಾಗಿ ಹಾಗೂ ಎಚ್ಆರ್ ಆಗಿ ಕೆಲಸ ಮಾಡುತ್ತಿರು ವವರು ಈ ವಿಚಾರ ಗೋಷ್ಠಿಗಳಿಗೆ ಭಾಗವಹಿಸಲು ಅರ್ಹರಾಗಿದ್ದು, ಸುಮಾರು ೮೫೦ ಜನರು ಈಗಾ ಗಲೇ ಆನ್ಲೈನ್ನಲ್ಲಿ ನೋಂದಣಿ ಮಾಡಿ ಕೊಂಡಿದ್ದಾರೆ. ೨೦ ಯುವಕರು ಎಸ್.ರುದ್ರೇಗೌಡರು ಬೆಳೆದು ಬಂದ ದಾರಿ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರು ಕಾರು ಹಾಗೂ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ, ಅಲ್ಲದೇ ಪೋಲೀಸ್ ಇಲಾಖೆ ಸಿಬ್ಬಂದಿ ಭದ್ರತೆ ಸೇರಿದಂತೆ ಸುಗಮ ಸಂಚಾರ ವ್ಯವಸ್ಥೆಗೆ ಸಹಕರಿಸಲಿದ್ದಾರೆ ಎಂದರು.
ಸಮಿತಿಯ ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ಎನ್.ಜೆ. ರಾಜಶೇಖರ್, ತಮ್ಮಡಿ ಹಳ್ಳಿ ನಗಾರಾಜ್, ಬಳ್ಳೆಕೆರೆ ಸಂತೋ ಷ್, ಬಾಳೆಕಾಯಿ ಮೋಹನ್ ಸೇರಿದಂತೆ ಇನ್ನಿತರರು ಸುದ್ದಿಗೋಷ್ಟಿ ಯಲ್ಲಿ ಉಪಸ್ಥಿತರಿದ್ದರು.